Droupadi Murmu: ಆಮಿರ್ ಖಾನ್ ಪ್ರೊಡಕ್ಷನ್‌ನಲ್ಲಿ ದ್ರೌಪದಿ ಮುರ್ಮು ಬಯೋಪಿಕ್! ಯಾರಾಗ್ತಾರೆ ಗೊತ್ತಾ ‘ರಾಷ್ಟ್ರಪತಿ’? | | ACTPnews

ದ್ರೌಪದಿ ಮುರ್ಮು


Last Updated:

ರಾಷ್ಟ್ರಪತಿ ದೌಪದಿ ಮುರ್ಮು ಅವರ ಸಾಧನೆ ಕುರಿತು ಮಹತ್ವದ ಸಾಕ್ಷ್ಯಚಿತ್ರವೊಂದು ಸಿದ್ಧವಾಗುತ್ತಿದ್ದು, ಬಾಲಿವುಡ್ ನ ಪ್ರಸಿದ್ದ ಸಂಸ್ಥೆ ಅಮೀರ್ ಖಾನ್ ಪ್ರೊಡಕ್ಷನ್ಸ್ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ದ್ರೌಪದಿ ಮುರ್ಮು
ದ್ರೌಪದಿ ಮುರ್ಮು

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಜೀವನವು ಕೇವಲ ರಾಜಕೀಯ ಸಾಧನೆಯ ಕಥೆಯಲ್ಲ, ಅದು ಪರಿಶ್ರಮ, ಹೋರಾಟ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಬದಲಾವಣೆಯ ಸಂಕೇತವಾಗಿದೆ. ಇದೀಗ ರಾಷ್ಟ್ರಪತಿ ದೌಪದಿ ಮುರ್ಮು ಅವರ ಸಾಧನೆ ಕುರಿತು ಮಹತ್ವದ ಸಾಕ್ಷ್ಯಚಿತ್ರವೊಂದು ಸಿದ್ಧವಾಗುತ್ತಿದ್ದು, ಬಾಲಿವುಡ್ ನ ಪ್ರಸಿದ್ದ ಸಂಸ್ಥೆ ಅಮೀರ್ ಖಾನ್ ಪ್ರೊಡಕ್ಷನ್ಸ್ (Aamir Khan Productions) ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಬುಡಕಟ್ಟು ಸಮುದಾಯದಿಂದ ರಾಷ್ಟ್ರಪತಿ ಸ್ಥಾನಕ್ಕೇರಿದ ವ್ಯಕ್ತಿಯಾಗಿ ದ್ರೌಪದಿ ಮುರ್ಮು ಗುರುತಿಸಿಕೊಂಡಿದ್ದಾರೆ. ಅವರು ದೇಶದ ಎರಡನೇ ಮಹಿಳಾ ರಾಷ್ಟ್ರಪತಿಯಾಗಿರುವುದು ಮತ್ತೊಂದು ವಿಶೇಷ. ಅವರ ಆಯ್ಕೆಯು ಕೇವಲ ರಾಜಕೀಯ ಸಾಧನೆಯಷ್ಟೇ ಅಲ್ಲ, ಸಮಾಜದ ಹಿಂದುಳಿದ ವರ್ಗಗಳು, ಬುಡಕಟ್ಟು ಸಮುದಾಯಗಳು ಮತ್ತು ಮಹಿಳೆಯರಿಗೆ ಹೊಸ ಭರವಸೆಯ ಸಂಕೇತವಾಗಿ ಪರಿಣಮಿಸಿತು.

ಈ ಹಿನ್ನೆಲೆಯಲ್ಲಿ ಅವರ ಜೀವನ ಕಥೆಯನ್ನು ದೇಶದ ಜನರ ಮುಂದೆ ಇನ್ನಷ್ಟು ಹತ್ತಿರವಾಗಿ ತರುವ ಉದ್ದೇಶದಿಂದ ಈ ಸಾಕ್ಷ್ಯಚಿತ್ರವನ್ನು ರೂಪಿಸಲಾಗುತ್ತಿದೆ. ಅವರ ವೈಯಕ್ತಿಕ ಜೀವನ, ಸಾರ್ವಜನಿಕ ಸೇವೆ ಮತ್ತು ಹೋರಾಟಗಳ ವಿವಿಧ ಅಧ್ಯಾಯಗಳನ್ನು ಚಿತ್ರದಲ್ಲಿ ಒಳಗೊಂಡಿರಲಿದೆ.

ಈ ಸಾಕ್ಷ್ಯಚಿತ್ರವು ದ್ರೌಪದಿ ಮುರ್ಮು ಅವರ ರಾಜಕೀಯ ಜೀವನವನ್ನು ಮಾತ್ರವಲ್ಲದೆ, ಅವರ ವೈಯಕ್ತಿಕ ಬದುಕಿನ ಕಠಿಣ ಹಾದಿಯನ್ನೂ ದಾಖಲಿಸಲಿದೆ. ಜೀವನದಲ್ಲಿ ಎದುರಾದ ಅನೇಕ ಸಂಕಷ್ಟಗಳು, ವೈಯಕ್ತಿಕ ನಷ್ಟಗಳು ಮತ್ತು ಹಿನ್ನಡೆಗಳನ್ನು ಅವರು ಹೇಗೆ ಎದುರಿಸಿದರು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗುತ್ತದೆ.

ವರದಿಗಳ ಪ್ರಕಾರ, ಸಾಕ್ಷ್ಯಚಿತ್ರದ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣ ಈಗಾಗಲೇ ಒಡಿಶಾದಲ್ಲಿರುವ ದ್ರೌಪದಿ ಮುರ್ಮು ಅವರ ತವರು ಮನೆಯಲ್ಲಿ ನಡೆಸಲಾಗಿದೆ. ಅವರ ಬಾಲ್ಯದ ನೆನಪುಗಳು ಮತ್ತು ಜೀವನದ ಆರಂಭಿಕ ಹಂತಗಳನ್ನು ನೈಜ ಸ್ಥಳಗಳಲ್ಲಿಯೇ ಮರುಸೃಷ್ಟಿಸಲು ಚಿತ್ರತಂಡ ವಿಶೇಷ ಗಮನ ಹರಿಸಿದೆ.

ಸರಳ ಕುಟುಂಬದ ಹಿನ್ನೆಲೆಯಿಂದ ದೇಶದ ಅತ್ಯುನ್ನತ ಹುದ್ದೆಯವರೆಗೆ ಏರಿದ ದ್ರೌಪದಿ ಮುರ್ಮು ಅವರ ಕಥೆ ಈಗಾಗಲೇ ಕೋಟ್ಯಂತರ ಜನರಿಗೆ ಪ್ರೇರಣೆಯಾಗಿದೆ. ವಿಶೇಷವಾಗಿ ಮಹಿಳೆಯರು, ಯುವಕರು ಹಾಗೂ ಬುಡಕಟ್ಟು ಸಮುದಾಯದ ಜನರಿಗೆ ಅವರ ಸಾಧನೆ ಹೊಸ ಆತ್ಮವಿಶ್ವಾಸ ತುಂಬಿದೆ.

ಈ ಸಾಕ್ಷ್ಯಚಿತ್ರವು ಅವರ ಜೀವನದ ಯಶೋಗಾಥೆಯನ್ನು ಮಾತ್ರ ಹೇಳುವುದಿಲ್ಲ. ಬದಲಾಗಿ, ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯಲ್ಲೂ ಅಸಾಮಾನ್ಯ ಸಾಧನೆ ಮಾಡುವ ಸಾಮರ್ಥ್ಯ ಅಡಗಿದೆ ಎಂಬ ಸಂದೇಶವನ್ನು ಸಾರಲಿದೆ. ಆಮಿರ್ ಖಾನ್ ಪ್ರೊಡಕ್ಷನ್ಸ್‌ನಂತಹ ಪ್ರತಿಷ್ಠಿತ ಸಂಸ್ಥೆಯ ಮೂಲಕ ಈ ಕಥೆ ದೇಶದಾದ್ಯಂತ ಪ್ರೇಕ್ಷಕರನ್ನು ತಲುಪಲಿದ್ದು, ಈಗಾಗಲೇ ಈ ಯೋಜನೆ ಬಗ್ಗೆ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷಿ ಮೂಡಿದೆ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed