Last Updated:
ದರ್ಶನ್ ಕಲಾಸಿಪಾಳ್ಯ ಚಿತ್ರ ರೀ-ರಿಲೀಸ್ ಆಗಿದೆ. ಥಿಯೇಟರ್ ಅಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಈ ಕ್ಷಣದ ಸಂಪೂರ್ಣ ಚಿತ್ರಣ ಇಲ್ಲಿದೆ ಓದಿ.
ದರ್ಶನ್ (Darshan) ಅಭಿನಯದ ಕಲಾಸಿಪಾಳ್ಯ ಚಿತ್ರ (Kalasipalya Movie) ಮತ್ತೊಮ್ಮೆ ಬಂದಿದೆ. ಬೆಂಗಳೂರಿನ ಪ್ರಸನ್ನ ಥಿಯೇಟರ್ ಅಲ್ಲಿ ಅಭಿಮಾನಿಗಳು ದೊಡ್ಡ ಹಬ್ಬವನ್ನೆ ಮಾಡಿದ್ದಾರೆ. ಕಟೌಟ್ಗೆ ಹಾರ ಹಾಕಿದ್ದಾರೆ. ಪಟಾಕಿ ಸಿಡಿಸಿ ಖುಷಿಪಟ್ಟಿದ್ದಾರೆ. ಧೂಳ್ ಮಗ ಧೂಳ್ ಹಾಡು ಬೆಳ್ಳಿ ತೆರೆ (Silver Screen) ಮೇಲೆ ಬಂದಾಕ್ಷಣ ಕುಣಿದು ಕುಪ್ಪಳಿಸಿದ್ದಾರೆ. ಇಡೀ ಲಿರಿಕ್ಸ್ ಅನ್ನ ತೆರೆ ಮೇಲಿನ ಹಾಡಿನೊಂದಿಗೆ ಹಾಡ್ತಾನೇ ಹೋಗಿದ್ದಾರೆ. ಈ ವೇಳೆ ಸ್ಕ್ರೀನ್ ಮುಂದೆ ಡ್ಯಾನ್ಸ್ ಮಾಡಿರೋದು ಇದೆ. ನಮ್ಮ ಬಾಸ್ ಎಲ್ಲೆ ಇರಲಿ, ನಾವು ಬಿಟ್ಟುಕೊಡುವ ಮಾತೇ ಇಲ್ಲ ಅಂತಲೇ ಹೇಳಿರೋ ಅಭಿಮಾನಿಗಳು ಕಲಾಸಿಪಾಳ್ಯ ಚಿತ್ರವನ್ನ (Kalasipalya Movie) ಅದ್ದೂರಿಯಾಗಿಯೇ ಸ್ವಾಗತಿಸಿದ್ದಾರೆ. ಈ ಸಂಭ್ರಮದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕಲಾಸಿಪಾಳ್ಯ ಚಿತ್ರ ರಿಲೀಸ್ ಆಗಿದೆ. ಜೂನ್-19 ರಂದು ಇದು ಪ್ರಸನ್ನ ಥಿಯೇಟರ್ ಅಲ್ಲಿ ತೆರೆ ಕಂಡಿದೆ. ಹೊಸ ಸಿನಿಮಾ ರಿಲೀಸ್ ತರವೇ ಇದನ್ನ ಸ್ವಾಗತಿಸಲಾಗಿದೆ.
ಕಲಾಸಿಪಾಳ್ಯ “ಧೂಳ್ ಮಗ ಧೂಳ್” ಹಾಡಿಗೆ ಕುಣಿದು ಕುಪ್ಪಳಿಸಿದ ಫ್ಯಾನ್ಸ್; ಬಾಸ್ ಬಿಡೋ ಮಾತೇ ಇಲ್ಲ ಎಂದ ಸೆಲೆಬ್ರಿಟೀಸ್.!
ಧೂಳ್ ಮಗ ಧೂಳ್ ಅನ್ನುವ ಹಾಡು ಇಂದಿಗೂ ಇಷ್ಟ ಆಗುತ್ತದೆ. ಇದನ್ನ ತೆರೆ ಮೇಲೆ ನೋಡಿದರೆ ಸುಮ್ನೆ ಇರ್ತಾರಾ? ದರ್ಶನ್ ಫ್ಯಾನ್ಸ್ ಈ ಹಾಡನ್ನ ಹಾಡಿದ್ದಾರೆ. ತೆರೆ ಮೇಲೆ ಹೇಗೆ ಸಾಂಗ್ ಸಾಗುತ್ತದೆಯೋ ಹಾಗೆ ಇವರೂ ಹಾಡಿದ್ದಾರೆ.
ಈ ಒಂದು ದೃಶ್ಯ ನೋಡೋಕೆ ಚೆಂದ ಅನಿಸುತ್ತದೆ. ಎಂದಿನಂತೆ ತಮ್ಮ ನೆಚ್ಚಿ ನಾಯಕನ ಎಂಟ್ರಿ ಆದ ತಕ್ಷಣ ತೆರೆ ಮುಂದೆ ಹೋಗಿ ಡ್ಯಾನ್ಸ್ ಮಾಡಿರೋದು ಇದೆ. ಇಡೀ ಥಿಯೇಟರ್ ಅಲ್ಲಿ ಹಬ್ಬದ ವಾತಾವರಣ ಇದೆ.
ದರ್ಶನ್ ಫ್ಯಾನ್ ಬೇಸ್ ಸುಮ್ನೆ ಅಲ್ಲ. ಇದು ಎಂದೂ ಕಡಿಮೆ ಆಗೋದಿಲ್ಲ. ಇದು ಕಲ್ಟ್ ಫ್ಯಾನ್ ಬೇಸ್ ಆಗಿದೆ ಅಂತ ದರ್ಶನ್ ಅಭಿಮಾನಿ ಒಬ್ಬರು ಹೇಳಿಕೊಂಡಿದ್ದಾರೆ.
ಬಾಸ್ ಬಿಡೋ ಮಾತೇ ಇಲ್ಲ ಎಂದ ಫ್ಯಾನ್ಸ್!
ನಮ್ಮ ಬಾಸ್ ಎಲ್ಲೆ ಇದ್ದರೂ ಕ್ರೇಜ್ ಕಡಿಮೆ ಆಗೋದಿಲ್ಲ. ಇದು ನಿರಂತರ ಅಂತ ನ್ಯೂಸ್-18 ಕನ್ನಡಕ್ಕೆ ಹೇಳಿದ್ದಾರೆ. 100 ವರ್ಷ ಆದರೂ ಅಷ್ಟೇನೆ, ಡಿ ಬಾಸ್ ಕ್ರೇಜ್ ಕಡಿಮೆ ಆಗೋದಿಲ್ಲ. ಇದು ನಿಲ್ಲೋದು ಇಲ್ಲ ಅಂತಲ್ಲೂ ಮತ್ತೊಬ್ಬ ಫ್ಯಾನ್ ಹೇಳಿದ್ದಾರೆ.
ಕಲಾಸಿಪಾಳ್ಯ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಇದು ಗೊತ್ತಿರೋ ವಿಚಾರವೇ ಆಗಿದೆ. ಡಿ ಬಾಸ್ ಕ್ರೇಜ್ ಕಡಿಮೆ ಆಗೋದೇ ಇಲ್ಲ. ದರ್ಶನ್ ಅವರ ಯಾವುದೇ ಚಿತ್ರ ರಿಲೀಸ್ ಆದರೂ ಅಷ್ಟೆನೇ. ರಾತ್ರಿ 1 ಗಂಟೆಗೆ ಹಾಕಿದರೂ ಬರ್ತೀವಿ. ಈ ಕ್ರೇಜ್ ಮುಗಿಯೋದಿಲ್ಲ. ನಿಲ್ಲೋದು ಇಲ್ಲ ಅಂತಲೆ ಆ ಇನ್ನೊಬ್ಬ ಅಭಿಮಾನಿ ಹೇಳಿದ್ದಾರೆ.
ಈ ಚಿತ್ರ ಅಕ್ಟೋಬರ್-15, 2004 ರಂದು ರಿಲೀಸ್ ಆಗಿದೆ. ಇದು ಬಂದು ಈಗ 22 ವರ್ಷ ಆಗುತ್ತದೆ. ಇಷ್ಟು ವರ್ಷ ಆದರೂ ಈ ಚಿತ್ರದ ಕ್ರೇಜ್ ಕಡಿಮೆ ಆಗಿಲ್ಲ.
ಸಾಧು ಕೋಕಿಲಾ ಅವರ ಸಂಗೀತದ ಹಾಡುಗಳಿಗೆ ಫ್ಯಾನ್ಸ್ ಕುಣಿದು ಕುಪ್ಪಳಿಸಿದ್ದರು. ಚಿತ್ರ ರೀ-ರಿಲೀಸ್ ಆದ ಈ ಸಮಯದಲ್ಲೂ ಥಿಯೇಟರ್ ಅಲ್ಲಿ ಅದೇ ಕ್ರೇಜ್ ಕಾಣಿಸುತ್ತದೆ ಅಂತ ಹೇಳಬಹುದು.
Bangalore [Bangalore],Bangalore,Karnataka













