Last Updated:
ಬೆಂಗಳೂರು ಬ್ಲೂ ಲೈನ್ ಮೆಟ್ರೋಗೆ ಬಿಇಎಂಎಲ್ ನಿರ್ಮಿಸಿದ ಚಾಲಕರಹಿತ ರೈಲು ಬೈಯಪ್ಪನಹಳ್ಳಿಗೆ ಆಗಮಿಸಿದೆ, 2026ರೊಳಗೆ ಬ್ಲೂ ಲೈನ್, ಆಗಸ್ಟ್ 15ರೊಳಗೆ ಪಿಂಕ್ ಲೈನ್ ಭಾಗ ಕಾರ್ಯಾರಂಭ ಗುರಿ
ಬೆಂಗಳೂರು: ಐಟಿ (IT) ಸಿಟಿಯ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತಿರುವ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ (Good News). ಬೆಂಗಳೂರಿನ (Bengaluru) ಜೀವನಾಡಿಯಾದ ಬ್ಲೂ ಲೈನ್ ಮೆಟ್ರೋಗಾಗಿ (Metro) ಬಹುನಿರೀಕ್ಷಿತ ‘ಚಾಲಕರಹಿತ’ (Driverless) ರೈಲು ಮೊದಲ ಬಾರಿಗೆ ನಗರಕ್ಕೆ ಆಗಮಿಸಿದೆ. ಬಿಇಎಂಎಲ್ (BEML) ನಿರ್ಮಿಸಿದ ಈ ಸುಸಜ್ಜಿತ ಆರು ಬೋಗಿಗಳ ರೈಲು, ಗುರುವಾರ ಬೈಯಪ್ಪನಹಳ್ಳಿ ಡಿಪೋ ತಲುಪಿದ್ದು, ಮೆಟ್ರೋ ವಿಸ್ತರಣೆಯ ಕನಸು ನನಸಾಗುವ ಹಂತಕ್ಕೆ ಬಂದಿದೆ.
ಚಾಲಕರಹಿತ ಕಾರ್ಯಾಚರಣೆ: ಸಿಬಿಟಿಸಿ (CBTC) ಸಿಗ್ನಲಿಂಗ್ ತಂತ್ರಜ್ಞಾನದ ಮೂಲಕ ಅತ್ಯಾಧುನಿಕ ‘ಗೋಎ-4’ (GoA-4) ಮಾದರಿಯಲ್ಲಿ ರೈಲು ಸಂಚರಿಸಲಿದೆ.
ಸ್ಮಾರ್ಟ್ ಮ್ಯಾಪ್: ಎಲ್ಸಿಡಿ ಆಧಾರಿತ ಅನಿಮೇಟೆಡ್ ಮಾರ್ಗ ನಕ್ಷೆಗಳು ನಿಮಗೆ ಎಲ್ಲಿಗೆ ತಲುಪಬೇಕು ಎಂಬ ಸ್ಪಷ್ಟ ಮಾಹಿತಿ ನೀಡಲಿವೆ.
ಸುರಕ್ಷತೆಗೆ ಹೆಚ್ಚಿನ ಒತ್ತು: ಪ್ರಯಾಣಿಕರ ಸುರಕ್ಷತೆಗಾಗಿ ಅತ್ಯಾಧುನಿಕ ಸಿಸ್ಟಮ್ಗಳನ್ನು ಅಳವಡಿಸಲಾಗಿದೆ ಎಂದು ಮೆಟ್ರೋರೈಲ್ ಸುದ್ದಿ ವೆಬ್ಸೈಟ್ ವರದಿ ಮಾಡಿದೆ.
ಚಾಲಕರಹಿತ ಸೇವೆ ಶುರುವಾದರೂ, ಆರಂಭಿಕ ದಿನಗಳಲ್ಲಿ ಪ್ರಯಾಣಿಕರ ಭದ್ರತೆ ಮತ್ತು ಆತ್ಮವಿಶ್ವಾಸಕ್ಕಾಗಿ ರೈಲು ನಿರ್ವಾಹಕರು ರೈಲಿನಲ್ಲಿ ಉಪಸ್ಥಿತರಿರುತ್ತಾರೆ. ಐದು ತಿಂಗಳ ಕಾಲ ಕಠಿಣ ಪರೀಕ್ಷೆಗಳನ್ನು ನಡೆಸಿದ ನಂತರವಷ್ಟೇ ಈ ರೈಲುಗಳು ಪ್ರಯಾಣಿಕರನ್ನು ಹೊತ್ತು ಓಡಾಡಲಿವೆ.
Bangalore [Bangalore],Bangalore,Karnataka













