Drishti-10 UAV Crash: ಭಾರತೀಯ ನೌಕಾಪಡೆಯ ದೃಷ್ಟಿ-10 UAV ಪೋರಬಂದರ್ ಬಳಿ ಪತನ! ತಪ್ಪಿತು ಮಹಾದುರಂತ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಸೌರಾಷ್ಟ್ರ ಪ್ರದೇಶದ ಕರಾವಳಿ ನಗರದಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಧರಂಪುರ್ ಗ್ರಾಮದ ತೆರೆದ ಮೈದಾನದಲ್ಲಿ ಯುಎವಿ ಅಪಘಾತಕ್ಕೀಡಾಗಿದೆ ಎಂದು ಪೋರಬಂದರ್ ಜಿಲ್ಲಾಧಿಕಾರಿ ಎಸ್. ಧನಾನಿ ಸುದ್ದಿಗಾರರಿಗೆ ತಿಳಿಸಿದರು.

News18
News18

ಪೋರಬಂದರ್: ಗುಜರಾತ್‌ನ ಪೋರಬಂದರ್ ಜಿಲ್ಲೆಯ ಧರಂಪುರ್ ಗ್ರಾಮದ ಬಳಿ ಬುಧವಾರ ನಿಯಮಿತ ತರಬೇತಿ ಹಾರಾಟದ ವೇಳೆ (Drishti-10 UAV Crash) ಭಾರತೀಯ ನೌಕಾಪಡೆಯ ಮಾನವರಹಿತ ವೈಮಾನಿಕ ವಾಹನ (UAV) ಅಪಘಾತಕ್ಕೀಡಾಗಿದೆ.

ಈ ಅಪಘಾತವು ತೆರೆದ ನಿರ್ಜನ ಪ್ರದೇಶದಲ್ಲಿ ನಡೆದಿದ್ದು, ಯಾವುದೇ ಪ್ರಾಣಹಾನಿ ಅಥವಾ ಯಾವುದೇ ಆಸ್ತಿಗೆ ಗಮನಾರ್ಹ ಹಾನಿಯಾಗಿಲ್ಲ. ಆದರೆ, ಈ ಘಟನೆಯು ಆ ಪ್ರದೇಶದಲ್ಲಿ ಸಾಕಷ್ಟು ಭೀತಿಯನ್ನು ಉಂಟುಮಾಡಿತು. ಕಡಲ ಭದ್ರತೆಗಾಗಿ ನೌಕಾಪಡೆಗೆ ಸೇರಿಸಲಾದ ‘ದೃಷ್ಟಿ -10 ಸ್ಟಾರ್‌ಲೈನರ್’ ಡ್ರೋನ್ ತಾಂತ್ರಿಕ ದೋಷದಿಂದಾಗಿ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ.

‘ಭಾರತೀಯ ನೌಕಾಪಡೆಯು ‘ದ್ರಷ್ಟಿ-10’ ಮಾನವರಹಿತ ವೈಮಾನಿಕ ವಾಹನ (UAV) ತರಬೇತಿ ಹಾರಾಟದ ಸಮಯದಲ್ಲಿ ಪೋರಬಂದರ್ ವಾಯುನೆಲೆಯ ಬಳಿ ಅಪಘಾತಕ್ಕೀಡಾಗಿದೆ ಎಂದು ದೃಢಪಡಿಸಿದೆ. ನೆಲದ ಮೇಲೆ ಯಾವುದೇ ಗಾಯಗಳು ಅಥವಾ ಸಾವುನೋವುಗಳ ವರದಿಯಾಗಿಲ್ಲ. ಘಟನೆಯ ಕಾರಣವನ್ನು ತನಿಖೆ ಮಾಡಲಾಗುತ್ತಿದೆ’ ಎಂದು ನೌಕಾಪಡೆಯ ವಕ್ತಾರರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

ದೃಷ್ಟಿ-10 ಮಧ್ಯಮ ಎತ್ತರದ ದೀರ್ಘ ಸಹಿಷ್ಣುತೆಯ ವರ್ಗದಲ್ಲಿರುವ ಮಾನವರಹಿತ ವೈಮಾನಿಕ ವಾಹನವಾಗಿದ್ದು, ಇದನ್ನು ಹೆಚ್ಚಾಗಿ ಕಣ್ಗಾವಲು ಮತ್ತು ಕಡಲ ಕ್ಷೇತ್ರದ ಜಾಗೃತಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

‘ನೌಕಾಪಡೆಯ ಸಿಬ್ಬಂದಿ ಈಗಾಗಲೇ ಸ್ಥಳಕ್ಕೆ ತಲುಪಿದ್ದು, ಹೆಚ್ಚಿನ ತನಿಖೆ ಆರಂಭಿಸಿದ್ದಾರೆ’ ಎಂದು ಅವರು ಹೇಳಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed