DK Shivakumar: ಸಿನಿಮಾ ಟೆಂಟ್​ To ಸಿಎಂ ಚೇರ್! ಬಣ್ಣದ ಲೋಕದ ಜೊತೆ ಡಿಕೆಶಿ ನಂಟು | dk Shivakumar link to entertainment industry from touring tent to cm chair | | ACTPnews

ಡಿಕೆ ಶಿವಕುಮಾರ್


Last Updated:

DK Shivakumar: ಡಿಕೆ ಶಿವಕುಮಾರ್ ಅವರು ನೂತನ ಸಿಎಂ ಆಗುವುದು ಬಹುತೇಕ ಖಚಿತವಾಗಿದ್ದು, ಅವರಿಗೂ ಸಿನಿಮಾ ಲೋಕಕ್ಕೂ ಇರುವ ನಂಟು ಈಗ ವೈರಲ್ ಆಗುತ್ತಿದೆ. ಏನದು?

ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ರಾಜ್ಯ ರಾಜಕೀಯ (State Politics) ಕಳೆದ ಕೆಲವು ದಿನಗಳಿಂದ ಗಣನೀಯವಾದ ಬೆಳವಣಿಗೆ (Changes), ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಹೀಗಿರುವಾಗಲೇ ಇಷ್ಟು ದಿನ ಡಿಸಿಎಂ ಆಗಿದ್ದ ಡಿಕೆ. ಶಿವಕುಮಾರ್ (DK Shivakumar) ಅವರು ಸಿಎಂ ಗದ್ದುಗೆ ಏರಲಿದ್ದಾರೆ. ಈ ಸಂದರ್ಭದಲ್ಲಿ ಅವರ ಕುರಿತಾದ ಹಲವಾರು ಇಂಟ್ರೆಸ್ಟಿಂಗ್ ಸಂಗತಿಗಳು ಮುನ್ನೆಲೆಗೆ ಬರುತ್ತಿವೆ.

ತಮಿಳುನಾಡು ಮಾದರಿಯಲ್ಲೇ ಸಿನಿಮಾ ಹಿನ್ನೆಲೆ ವ್ಯಕ್ತಿಗೆ ಸಿಎಮ್ ಪಟ್ಟ ಸಿಗುತ್ತಿದೆ. ತಮಿಳುನಾಡಿನಲ್ಲಿ ಸ್ಟಾರ್ ನಟ ವಿಜಯ್ ಸಿಎಂ ಆದರೆ ಕರ್ನಾಟಕದಲ್ಲಿ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಬಹುತೇಕ ಖಚಿತವಾಗಿದ್ದು ಅವರಿಗೂ ಬಣ್ಣದ ಲೋಕಕ್ಕೂ ನಂಟಿರುವ ಸಂಗತಿ ಎಷ್ಟೋ ಜನರಿಗೆ ಗೊತ್ತೇ ಇಲ್ಲ.

ರಾಜಕೀಯಕ್ಕೂ ಬರುವ ಮುನ್ನ ಪ್ರದರ್ಶಕನಾಗಿದ್ದ ಡಿಕೆ ಶಿವಕುಮಾರ್ ರಾಜಕೀಯದ ಆರಂಭದಲ್ಲಿ ಕಾಂಗ್ರೆಸ್ ಅಭಿಮಾನಿಯಾಗಿದ್ದರು. 1980 ರಲ್ಲಿ ಡಿ.ಕೆ. ಶಿವಕುಮಾರ್ ಅವರು ಹುಟ್ಟೂರು ದೊಡ್ಡ ಆಲಹಳ್ಳಿಯಲ್ಲಿ ಟೂರಿಂಗ್ ಟೆಂಟ್ ನಡೆಸುತ್ತಿದ್ದರು.

ದೊಡ್ಡ ಆಲಹಳ್ಳಿಯ ಟೂರಿಂಗ್ ಟೆಂಟ್ ಗೆ ಇಂದಿರಾಜೀ ಎಂದು ಡಿಕೆ ಶಿವಕುಮಾರ್ ಹೆಸರು ಕೂಡಾ ಇಟ್ಟಿದ್ದರು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಿಗೆ ಸಿಕ್ಕಿರುವ ದೊಡ್ಡ ಗೌರವ ಈಗ ಅವರು ಸಿಎಂ ಆಗಲಿದ್ದಾರೆ.

1986 ರಲ್ಲಿ ದೇವೆಗೌಡರ ವಿರುದ್ದ ಸೋತ ನಂತರವೂ ಡಿಕೆ. ಶಿವಕುಮಾರ್ ಅವರಯ ಟೂರಿಂಗ್ ಟಾಕೀಸ್ ನಡೆಸುತ್ತಲೇ ಇದ್ದಾರೆ. ಅಂದು ಟೂರಿಂಗ್ ಟೆಂಟ್ ಮಾಲೀಕ ಇಂದು ಕರ್ನಾಟಕದ ಮುಖ್ಯಮಂತ್ರಿಯಾಗುತ್ತಿದ್ದು ಅವರ ಬಣ್ಣದ ಲೋಕದ ನಂಟು ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಭಾನುವಾರ ಇಲ್ಲ ಸೋಮವಾರ ಡಿಕೆಶಿ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸೋ ಸಾಧ್ಯತೆ ಇದೆ ಎನ್ನಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed