Dhurbe Elephant: ಹಾವಿನ ದ್ವೇಷ 12 ವರ್ಷ, ಆದ್ರೆ, ಈ ಆನೆ ದ್ವೇಷ 14 ವರ್ಷ! ಒಂದೇ ಕುಟುಂಬ ನಾಲ್ವರನ್ನು ಬಲಿ ಪಡೆದ ಒಂಟಿ ಸಲಗ! | ಟ್ರೆಂಡಿಂಗ್ ಸುದ್ದಿ | ACTPnews

ಧುರ್ಬೆ ಆನೆ


Last Updated:

ಧುರ್ಬೆ ಎಂಬ ಆನೆಯೊಂದು ಮನೆಗೆ ನುಗ್ಗಿ ಒಂದೇ ಕುಟುಂಬದ ಇಬ್ಬರು ಸದಸ್ಯರನ್ನು ಬಲಿ ಪಡೆದಿದೆ. ಶಾಕಿಂಗ್ ವಿಚಾರ ಏನಂದ್ರೆ, ಇದೇ ಆನೆ ಸುಮಾರು 14 ವರ್ಷಗಳ ಹಿಂದೆ ಈ ಕುಟುಂಬದ ಇಬ್ಬರು ಸದಸ್ಯರನ್ನು ಕೊಂದು ಹಾಕಿತ್ತು.

ಧುರ್ಬೆ ಆನೆ
ಧುರ್ಬೆ ಆನೆ

ಹಾವಿನ (Snake) ದ್ವೇಷ 12 ವರ್ಷ ಅನ್ನೋ ಮಾತಿದೆ. ಆದರೆ, ಆನೆಯ 14 ವರ್ಷಗಳ ದ್ವೇಷದ ಕಿಚ್ಚು ಎಲ್ಲರನ್ನು ಅಚ್ಚರಿಗೊಳಿಸಿದೆ. ನೇಪಾಳದಲ್ಲಿ (Nepal) ಒಂದು ವಿಚಿತ್ರ ಘಟನೆ ನಡೆದಿದೆ. ಧುರ್ಬೆ (Dhurbe) ಎಂಬ ಆನೆಯೊಂದು (Elephant) ಮನೆಗೆ ನುಗ್ಗಿ ಒಂದೇ ಕುಟುಂಬದ ಇಬ್ಬರು ಸದಸ್ಯರನ್ನು ಬಲಿ ಪಡೆದಿದೆ. ಶಾಕಿಂಗ್​ ವಿಚಾರ ಏನಂದ್ರೆ, ಇದೇ ಆನೆ ಸುಮಾರು 14 ವರ್ಷಗಳ ಹಿಂದೆ ಈ ಕುಟುಂಬದ ಇಬ್ಬರು ಸದಸ್ಯರನ್ನು ಕೊಂದು ಹಾಕಿತ್ತು.

ಈ ದ್ವೇಷದ ಕಹಾನಿ ಡಿಸೆಂಬರ್ 2012 ಸನಿಚರ ಬೋಟೆ ಎಂಬ ಕುಟುಂಬದೊಂದಿಗೆ ಶುರುವಾಯ್ತು. ನೇಪಾಳದ ಚಿತ್ವಾನ್ ರಾಷ್ಟ್ರೀಯ ಉದ್ಯಾನವನದ ಬಳಿಯ ಮಡಿ ಎಂಬ ಪಟ್ಟಣದಲ್ಲಿ, ಧುರ್ಬೆ ಎಂಬ ಒಂಟಿ ಸಲಗ ಇಬ್ಬರ ಮೇಲೆ ದಾಳಿ ಮಾಡಿ ಸಾವಿಗೆ ಕಾರಣವಾಗಿತ್ತು. ಆನೆ ದಾಳಿಯ ಭೀತಿಯಿಂದ ಸನಿಚರ ಬೋಟೆ ಬೇರೆ ಕಡೆ ಹೋಗಿ ನೆಲಸಿದ್ದರು. ಆದರೆ ಈಗ ಸರಿಸುಮಾರು  14 ವರ್ಷಗಳ ಬಳಿಕ ಇದೇ ಆನೆ ಸನಿಚರ ಮನೆಗೆ ನುಗ್ಗಿದೆ. ಇಬ್ಬರನ್ನು ಬಲಿ ಪಡೆದಿದೆ.
14 ವರ್ಷಗಳ ನಂತರ ಕಾದಿತ್ತು ಆಘಾತ

ಸನಿಚರ ಬೋಟೆ ಮತ್ತು ಅವರ ಕುಟುಂಬಸ್ಥರು ನೇಪಾಳದ ರಪ್ತಿ ನದಿಯನ್ನು ದಾಟಿ ಸುಮಾರು ಒಂಬತ್ತು ಮೈಲುಗಳಷ್ಟು ದೂರದಲ್ಲಿರುವ ಜಗತ್ಪುರದಲ್ಲಿ ನೆಲೆಸಿ ಬದುಕು ಕಟ್ಟಿಕೊಂಡಿದ್ದರು. ಆನೆ ದಾಳಿಯ ಭೀತಿಯಿಲ್ಲದೇ ಆರಾಮವಾಗಿ ಜೀವನ ನಡೆಸುತ್ತಿದ್ದರು. ಆದರೆ, ಕಳೆದ ವಾರ, ಧುರ್ಬೆ ಆನೆ ಬೋಟೆ ಅವರ ಮನೆಗೆ ನುಗ್ಗಿ 25 ವರ್ಷದ ಸೊಸೆ ಆಶಿಕಾ ಬೋಟೆ ಮತ್ತು 4 ವರ್ಷದ ಮೊಮ್ಮಗ ಭರತ್​ ಬೋಟೆ ಮೇಲೆ ದಾಳಿ ಮಾಡಿ ಕೊಲೆ ಮಾಡಿದೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.

ಇನ್ನು, ಆನೆ ದಾಳಿ ಬಗ್ಗೆ ಮಾತನಾಡಿರುವ ಸನಿಚರ ಬೋಟೆ, 14 ವರ್ಷಗಳ ಹಿಂದೆ ಆನೆ ದಾಳಿ ಮಾಡಿ ಇಬ್ಬರು ಕುಟುಂಬಸ್ಥರು ಬಲಿ ಪಡೆದಿತ್ತು. ಹೀಗಾಗಿ ಸುರಕ್ಷಿತವಾಗಿರಲು ನದಿ ದಾಟಿ ಬಂದು ಇಲ್ಲಿ ನೆಲಸಿದ್ದೆವು, ಆದರೆ 14 ವರ್ಷಗಳ ನಂತರ, ಅದೇ ಆನೆ ಮತ್ತೆ ನಮ್ಮನ್ನು ಹಿಂಬಾಲಿಸಿಕೊಂಡು ಬಂದಿದೆ, ನಮ್ಮ ಮನೆಗೆ ದಾಳಿ ಮಾಡಿ ನನ್ನ ಸೊಸೆ ಮತ್ತು ನನ್ನ ಪುಟ್ಟ ಮೊಮ್ಮಗನನ್ನು ಕೊಲೆ ಮಾಡಿದೆ ಎಂದು ಕಣ್ಣೀರು ಹಾಕಿದರು.

ನೇಪಾಳದ ಅತ್ಯಂತ ಕುಖ್ಯಾತ ಆನೆ ಇದು

ಧುರ್ಬೆ ಆನೆಯನ್ನು ನೇಪಾಳದ ಅತ್ಯಂತ ಕುಖ್ಯಾತ ಆನೆ ಎಂದು ಪರಿಗಣಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಹಲವಾರು ಮಾರಕ ದಾಳಿಗಳಲ್ಲಿ ಧುರ್ಬೆ ಆನೆ ಭಾಗಿಯಾಗಿದ್ದಾನೆ. ಚಿತ್ವಾನ್ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳ ಪ್ರಕಾರ, ಧುರ್ಬೆ ಆನೆ 2010 ರಿಂದ ಇಲ್ಲಿಯವರೆಗೂ ಬರೋಬ್ಬರಿ 25 ಜನರನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿದರು.

ಧುರ್ಬೆ ಆನೆ ವಿಕಿಪೀಡಿಯಾ ಪೇಜ್​ ಕೂಡ ಹೊಂದಿದ್ದು, ಆನೆ ಕೊಲೆ ಮಾಡಿದ ಎಲ್ಲಾ 25 ಜನರ ವಿವರಗಳನ್ನು ನಮೂದಿಸಲಾಗಿದೆ. ಧುರ್ಬೆಯನ್ನು ನಿಯಂತ್ರಿಸಲು ಹಲವಾರು ವರ್ಷಗಳಿಂದ ಮೇಲ್ವಿಚಾರಣೆ ಮಾಡಿದ್ದೇವೆ. 2016 ರಲ್ಲಿ, ಆನೆಗೆ ಟ್ರ್ಯಾಕಿಂಗ್ ಕಾಲರ್ ಅಳವಡಿಸಲಾಗಿತ್ತು. ಮೊದಲ ಟ್ರ್ಯಾಕಿಂಗ್ ಕಾಲರ್ ಕೆಲಸ ಮಾಡುವುದನ್ನು ನಿಲ್ಲಿಸಿದಾಗ, 2020 ರಲ್ಲಿ ಎರಡನೇ ಕಾಲರ್ ಅಳವಡಿಸಲಾಯಿತು ಮತ್ತು ನಂತರ 2023 ರಲ್ಲಿ ಬದಲಾಯಿಸಲಾಯಿತು. ಇಷ್ಟೆಲ್ಲಾ ಇದ್ದರೂ, ಅವನು ಇನ್ನೂ 25 ಜನರ ಪ್ರಾಣವನ್ನು ಬಲಿ ಪಡೆದಿದೆ ಎಂದು ಕಠ್ಮಂಡು ಪೋಸ್ಟ್​​ ವರದಿ ಮಾಡಿದೆ.

ಆನೆಗಳಿಗಿದೆ ದೀರ್ಘ ಸ್ಮರಣೆ

ಆನೆಗಳು ಉತ್ತಮ ಸ್ಮರಣಶಕ್ತಿಯನ್ನು ಹೊಂದಿವೆ ಎಂದು ಸಂಶೋಧಕ ಡಾ. ಜಾಯ್ಸ್ ಪೂಲ್ ಅಭಿಪ್ರಾಯಪಟ್ಟಿದ್ದಾರೆ, ವಯಸ್ಸಾದ ಹೆಣ್ಣು ಆನೆಗಳು ಹಲವು ವರ್ಷಗಳ ನೀರಿನ ಮೂಲಗಳನ್ನು ನೆನಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಅವು ವಿವಿಧ ಮಾನವ ಗುಂಪುಗಳ ನಡುವೆ ವ್ಯತ್ಯಾಸವನ್ನು ಗುರುತಿಸಬಲ್ಲವು ಮತ್ತು ವರ್ಷಗಳ ಬರಗಾಲದ ನಂತರವೂ ನೀರು ಮತ್ತು ಆಹಾರ ಮಾರ್ಗಗಳನ್ನು ಗುರುತಿಸಬಲ್ಲವು ಎಂದು ಸಂಶೋಧಕ ಡಾ. ಜಾಯ್ಸ್ ಪೂಲ್ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports