Last Updated:
ಬಾಲಿವುಡ್ನ ಧುರಂಧರ್ ಚಿತ್ರ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿದೆ. ಭಾನುವಾರ ಸಂಜೆ ಈ ಚಿತ್ರ ಪ್ರಸಾರ ಆಗುತ್ತಿದೆ. ಆದರೆ, ಯಾವ ಭಾನುವಾರ ಅನ್ನೋ ಮಾಹಿತಿ ಇಲ್ಲಿದೆ ಓದಿ.
ಧುರಂದರ್ ಚಿತ್ರ (Dhurandar Movie) ಸ್ಟಾರ್ ಸುವರ್ಣದಲ್ಲಿ ಬರ್ತಿದೆ. ಇದೇ ಜೂನ್ ತಿಂಗಳಲ್ಲಿಯೇ ಇದು ಪ್ರಸಾರ ಆಗುತ್ತಿದೆ. ಕನ್ನಡದಲ್ಲಿಯೇ ಬರ್ತಿರೋ ಈ ಸಿನಿಮಾದ ಒಂದು ಪ್ರೋಮೋ (Promo) ಕೂಡ ಹೊರ ಬಂದಿದೆ. ಇದರಲ್ಲಿ ಧುರಂಧರ್ ಪಾರ್ಟ್-1 ಚಿತ್ರದ ಲವ್ ಸ್ಟೋರಿಯ (Love Story) ಚಿತ್ರಣ ಇದೆ. ಅಂದ್ರೆ, ಇಲ್ಲಿ ಧುರಂಧರ್ (Dhurandar) ಒನ್ ಪ್ರಸಾರ ಆಗುತ್ತಿದೆ. ಇದರ ಮಾಹಿತಿ ಇಲ್ಲಿದೆ ಓದಿ.
ಧುರಂಧರ್ ಪ್ರೋಮೋ ರಿಲೀಸ್ (ಚಿತ್ರ ಕೃಪೆ: ಸ್ಟಾರ್ ಸುವರ್ಣ ಇನ್ಸ್ಟಾಗ್ರಾಮ್)
ಜೂನ್-21 ರಂದು ಈ ಚಿತ್ರ ಪ್ರಸಾರ ಆಗುತ್ತಿದೆ. ಸಂಜೆ-6 ಗಂಟೆಗೆ ಇದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಟೆಲಿಕಾಸ್ಟ್ ಆಗುತ್ತಿದೆ. ಈ ವಿಷಯವನ್ನ ವಾಹಿನಿ ಅಧಿಕೃತವಾಗಿ ಹೇಳಿದೆ.
ಧುರಂಧರ್ ಚಿತ್ರದ ಟೆಲಿಕಸ್ಟಾರ್ ಡೇಟ್ ಮತ್ತು ಟೈಮ್ ಎರಡನ್ನು ಅಧಿಕೃತವಾಗಿ ಹೇಳಲಾಗಿದೆ. ಇದನ್ನ ಹೇಳುವ ಒಂದು ಪ್ರೋಮೋ ಇದೀಗ ಹೊರ ಬಂದಿದೆ.
ಸ್ಟಾರ್ ಸುವರ್ಣ ವಾಹಿನಿಯ ಇನ್ಸ್ಟಾಗ್ರಾಮ್ನ ಅಧಿಕೃತ ಪೇಜ್ ಅಲ್ಲಿಯೆ ಇದು ಶೇರ್ ಆಗಿದೆ. ಈ ಮೂಲಕ ಭಾನುವಾರ ಜೂನ್-21 ರಂದು ತಮ್ಮ ವಾಹಿನಿಯಲ್ಲಿ ಧುರಂದರ್ ಚಿತ್ರ ಬರ್ತಿದೆ ಅನ್ನೊದನ್ನ ಹೇಳಿಕೊಂಡಿದೆ.
ಈ ಒಂದು ಪ್ರೋಮೋದ ಜೊತೆಗೆ ಕೆಲವು ಲೈನ್ ಕೂಡ ಇವೆ. ಇದು ಇಡೀ ಚಿತ್ರದ ವಿಷಯವನ್ನ ಹೇಳುತ್ತವೆ. ಅವು ಹೀಗಿವೆ; ಬಂದೂಕುಗಳ ಸದ್ದಿನ ನಡುವೆ ಅರಳುವ ಸುಂದರ ಪ್ರೀತಿಯ ಕಥೆ “ಧುರಂಧರ್” ಜೂನ್ 21 ರಂದು ಸಂಜೆ 6ಕ್ಕೆ ಅಂತಲೇ ಬರೆದಿದೆ.
ಪ್ರೋಮೋ ಜೊತೆಗೆ ಈ ಲೈನ್ಸ್
(ಚಿತ್ರ ಕೃಪೆ: ಸ್ಟಾರ್ ಸುವರ್ಣ ಇನ್ಸ್ಟಾಗ್ರಾಮ್)
ಧುರಂಧರ್ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದೆ. ದಾಖಲೆ ಮೇಲೆ ದಾಖಲೆ ಮಾಡಿದೆ. ಬಾಕ್ಸಿಕ್ ಆಫೀಸ್ ಕೊಳ್ಳೆ ಹೊಡೆದಿದೆ. ಯಾರೂ ನಿರೀಕ್ಷೆ ಮಾಡದ ಮಟ್ಟಿಗೆ ಇದು ಕ್ರೇಜ್ ಹುಟ್ಟುಹಾಕಿದೆ.
ಆದಿತ್ಯ ಧರ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ರಣವೀರ್ ಸಿಂಗ್, ಅರ್ಜುನ್ ರಾಮಪಾಲ್, ಅಕ್ಷಯ್ ಖನ್ನಾ, ಆರ್.ಮಾಧವನ್, ಸಂಜಯ್ ದತ್, ಸಾರಾ ಅರ್ಜುನ್ ಈ ಎಲ್ಲ ನಟರು ಈ ಚಿತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಧುರಂಧರ್ ಬಹುಕೋಟಿ ವೆಚ್ಚದ ಚಿತ್ರವೇ ಆಗಿದೆ. ಈ ಚಿತ್ರವನ್ನ 255 ಕೋಟಿ ಬಜೆಟ್ ಅಲ್ಲಿಯೆ ತಯಾರಿಸಲಾಗಿದೆ. ಹಾಗೆ ಇದು 1,350 ಕೋಟಿ ಬಾಚಿಕೊಂಡಿದೆ.
ಇದು ಧುರಂಧರ್ ಒಂದರ ಕತೆ ಆಗಿದೆ. ಧರುಂಧರ್-2 ಚಿತ್ರವೂ ರಿಲೀಸ್ ಆಗಿದೆ. ಇದು ಕೂಡ ಕಮಾಲ್ ಮಾಡಿದೆ. ಆದರೆ, ಸ್ಟಾರ್ ಸುವರ್ಣದಲ್ಲಿ ಧುರಂಧರ್ ಒನ್ ಮಾತ್ರ ಟೆಲಿಕಾಸ್ಟ್ ಆಗುತ್ತಿದೆ.
Bangalore [Bangalore],Bangalore,Karnataka













