Ben Stokes: ಕುಡಿದು ರಂಪಾಟ! ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಜೊತೆ ಮತ್ತೊಬ್ಬ ಕ್ರಿಕೆಟಿಗನಿಗೆ ನಿಷೇಧದ ಭೀತಿ | ಕ್ರೀಡಾ ಸುದ್ದಿ | ACTPnews

ಬೆನ್ ಸ್ಟೋಕ್ಸ್ -ಗಸ್ ಅಟ್ಕಿನ್ಸನ್


Last Updated:


ಲಾರ್ಡ್ಸ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 115 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಈ ಐತಿಹಾಸಿಕ ಜಯದ ಸಂಭ್ರಮದಲ್ಲಿದ್ದ ನಾಯಕ ಬೆನ್ ಸ್ಟೋಕ್ಸ್ ಮತ್ತು ಬೌಲರ್ ಗಸ್ ಅಟ್ಕಿನ್ಸನ್, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಆಟಗಾರರಿಗೆ ಕಡ್ಡಾಯವಾಗಿ ವಿಧಿಸಿರುವ ಮಧ್ಯರಾತ್ರಿಯ ‘ಮಿಡ್‌ನೈಟ್ ಕರ್ಫ್ಯೂ’ ನಿಯಮವನ್ನು ಗಾಳಿಗೆ ತೂರಿದ್ದಾರೆ.

ಬೆನ್ ಸ್ಟೋಕ್ಸ್ -ಗಸ್ ಅಟ್ಕಿನ್ಸನ್
ಬೆನ್ ಸ್ಟೋಕ್ಸ್ -ಗಸ್ ಅಟ್ಕಿನ್ಸನ್

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಟೋಕ್ಸ್​ ಮತ್ತು ಅವರ ತಂಡದ ಸಹ ಆಟಗಾರ ಗಸ್ ಅಟ್ಕಿನ್ಸನ್ (Gus Atkinson) ಕುಡಿದು ನೈಟ್​​ ಕ್ಲಬ್​​ವೊಂದರಲ್ಲಿ ಜಗಳ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮಧ್ಯರಾತ್ರಿಯ ನಂತರ ನೈಟ್‌ಕ್ಲಬ್‌ಗೆ ಭೇಟಿ ನೀಡುವ ಮೂಲಕ ತಂಡದ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಈ ಇಬ್ಬರ ವಿರುದ್ಧ ತನಿಖೆ ಆರಂಭಿಸಿದೆ. ತಪ್ಪಿತಸ್ಥರೆಂದು ಸಾಬೀತಾದರೆ, ಮಂಡಳಿಯ ನಿಯಮಗಳಿಗೆ ಅನುಸಾರವಾಗಿ ಇಬ್ಬರೂ ನಿಷೇಧವನ್ನು ಎದುರಿಸಬೇಕಾಗುತ್ತದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಜಯ ಸಾಧಿಸಿದ ಬೆನ್ನಲ್ಲೇ ನಡೆದಿರುವ ಈ ಶಿಸ್ತು ಉಲ್ಲಂಘನೆ ಘಟನೆಯು ವಿಶ್ವ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಘಟನೆಯ ವಿವರ

ಲಾರ್ಡ್ಸ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 115 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಈ ಐತಿಹಾಸಿಕ ಜಯದ ಸಂಭ್ರಮದಲ್ಲಿದ್ದ ನಾಯಕ ಬೆನ್ ಸ್ಟೋಕ್ಸ್ ಮತ್ತು ಬೌಲರ್ ಗಸ್ ಅಟ್ಕಿನ್ಸನ್, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಆಟಗಾರರಿಗೆ ಕಡ್ಡಾಯವಾಗಿ ವಿಧಿಸಿರುವ ಮಧ್ಯರಾತ್ರಿಯ ‘ಮಿಡ್‌ನೈಟ್ ಕರ್ಫ್ಯೂ’ ನಿಯಮವನ್ನು ಗಾಳಿಗೆ ತೂರಿದ್ದಾರೆ. ಜೂನ್ 8ರ ಮುಂಜಾನೆ ಇವರಿಬ್ಬರು ಲಂಡನ್‌ನ ಪ್ರಸಿದ್ಧ ‘ರೆಕ್ಸ್ ರೂಮ್ಸ್’ (Rex Rooms) ನೈಟ್ ಕ್ಲಬ್‌ನಲ್ಲಿ ತಡರಾತ್ರಿಯವರೆಗೂ ಪಾರ್ಟಿ ಮಾಡಿದ್ದಾರೆ.

ಇದೇ ವೇಳೆ ಸ್ಯಾರಸೆನ್ಸ್ ಅಕಾಡೆಮಿಯ ರಗ್ಬಿ ಆಟಗಾರನೊಂದಿಗೆ ಅವರು ವಾಗ್ವಾದ ನಡೆಸಿದ್ದಾರೆ ಎಂದು ಬ್ರಿಟಿಷ್ ಮಾಧ್ಯಮ ವರದಿ ಮಾಡಿದೆ. ಘಟನೆಯ ಸಮಯದಲ್ಲಿ, ರಗ್ಬಿ ಆಟಗಾರ ಅಟ್ಕಿನ್ಸನ್‌ಗೆ ಹೊಡೆಯಲು ಮುಂದಾಗಿದ್ದು, ಆ ಹೊಡೆತ ಇಂಗ್ಲೆಂಡ್ ತಂಡದ ಭದ್ರತಾ ಸಿಬ್ಬಂದಿಯ ಸದಸ್ಯನಿಗೆ ತಗುಲಿದೆ ಎಂದು ವರದಿಯಾಗಿದೆ. ಗಾಯಗೊಂಡ ಭದ್ರತಾ ಸಿಬ್ಬಂದಿ ತುರ್ತು ಚಿಕಿತ್ಸೆ ಪಡೆದಿದ್ದಾರೆ ಎಂದು ECB ಮೂಲಗಳು ತಿಳಿಸಿವೆ ಮತ್ತು ಸ್ಟೋಕ್ಸ್ ಅಥವಾ ಅಟ್ಕಿನ್ಸನ್ ಇಬ್ಬರೂ ಗಲಾಟೆಯ ಸಮಯದಲ್ಲಿ ಯಾರ ಮೇಲೂ ದೈಹಿಕ ಹಲ್ಲೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆನ್ ಸ್ಟೋಕ್ಸ್ ನಾಯಕತ್ವಕ್ಕೆ ಅಪಾಯ

ಇಸಿಬಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಈಗಾಗಲೇ ತನಿಖೆಗೆ ಆದೇಶಿಸಿದೆ ಎಂದು ವರದಿಯಾಗಿದೆ. ಜೂನ್ 17 ರಿಂದ ಇಂಗ್ಲೆಂಡ್ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಲು ನಿರ್ಧರಿಸಿದೆ. ಈ ಪಂದ್ಯಕ್ಕೂ ಮುನ್ನ ಇಸಿಬಿ ಬೆನ್ ಸ್ಟೋಕ್ಸ್ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಮಂಡಳಿಯ ಮೂಲಗಳು ಸೂಚಿಸುತ್ತಿವೆ. ಸ್ಟೋಕ್ಸ್ ಅವರನ್ನು ನಾಯಕತ್ವದಿಂದ ತೆಗೆದುಹಾಕಬಹುದು ಎಂಬ ಊಹಾಪೋಹಗಳು ಬ್ರಿಟಿಷ್ ಮಾಧ್ಯಮಗಳಲ್ಲಿ ಕೇಳಿಬರುತ್ತಿವೆ. ಸ್ಟೋಕ್ಸ್ ಅವರನ್ನು ತೆಗೆದುಹಾಕಿದರೆ, ಹ್ಯಾರಿ ಬ್ರೂಕ್ ನಾಯಕತ್ವದ ಪಾತ್ರವನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ.

ಇಂಗ್ಲೆಂಡ್ ಆಟಗಾರರ ರಂಪಾಟ ಇದೇ ಮೊದಲಲ್ಲ

ಹಿಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಂಗ್ಲೆಂಡ್ ಆಟಗಾರರು ಇದೇ ರೀತಿಯ ಟೀಕೆಗಳನ್ನು ಎದುರಿಸಿದರು. ಆ ಘಟನೆಯ ನಂತರ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಆಟಗಾರರು ತಡರಾತ್ರಿ ಹೊರಗೆ ಹೋಗುವುದನ್ನು ನಿಷೇಧಿಸುವ ನಿಯಮವನ್ನು ಜಾರಿಗೆ ತಂದಿತ್ತು. ಆದರೂ ಸ್ಟೋಕ್ಸ್ ಮತ್ತು ಅಟ್ಕಿನ್ಸನ್ ಈ ನಿಯಮಗಳನ್ನು ಉಲ್ಲಂಘಿಸಿದ್ದು, ಪ್ರಸ್ತುತ ವಿವಾದಕ್ಕೆ ಕಾರಣವಾಗಿದೆ.

ಇಸಿಬಿ ಹೇಳಿಕೆ ಬಿಡುಗಡೆ

ಈ ಇಡೀ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು, ಇದನ್ನು ದೇಶದ ಸ್ವತಂತ್ರ ಶಿಸ್ತು ಕಾಪಾಡುವ ಮಂಡಳಿಯಾದ ‘ಕ್ರಿಕೆಟ್ ರೆಗ್ಯುಲೇಟರ್’ (Cricket Regulator) ತನಿಖೆಗೆ ಒಪ್ಪಿಸಿದೆ. ಈ ಸ್ವತಂತ್ರ ಸಂಸ್ಥೆಗೆ ಆಟಗಾರರ ವಿರುದ್ಧ ದೊಡ್ಡ ಮೊತ್ತದ ದಂಡ ವಿಧಿಸುವ ಹಾಗೂ ಅನಿರ್ದಿಷ್ಟಾವಧಿ ನಿಷೇಧ ಹೇರುವ ಸಂಪೂರ್ಣ ಅಧಿಕಾರವಿದೆ. ಇತ್ತ ಸಾರಾಸೆನ್ಸ್ ರಗ್ಬಿ ಕ್ಲಬ್ ಕೂಡ ತನ್ನ ಅಕಾಡೆಮಿ ಆಟಗಾರನ ವಿರುದ್ಧ ಆಂತರಿಕ ತನಿಖೆ ಆರಂಭಿಸಿದ್ದು, ಲಂಡನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ.

“ಸೋಮವಾರ ಮುಂಜಾನೆ ನೈಟ್‌ಕ್ಲಬ್‌ನಲ್ಲಿ ನಡೆದ ಘಟನೆಯಲ್ಲಿ ಬೆನ್ ಸ್ಟೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ಭಾಗಿಯಾಗಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆಗೆ ನಾವು ಆದೇಶಿಸಿದ್ದೇವೆ. ಎರಡನೇ ಟೆಸ್ಟ್ ಪಂದ್ಯಕ್ಕೆ ತಂಡದ ಕುರಿತು ಶೀಘ್ರದಲ್ಲೇ ಪ್ರಕಟಣೆ ನೀಡಲಾಗುವುದು. ಪರಿಸ್ಥಿತಿಯ ಬಗ್ಗೆ ನಾವು ಮ್ಯಾನೇಜ್​ಮೆಂಟ್​​ಗೆ ತಿಳಿಸಿದ್ದೇವೆ ಮತ್ತು ಸಾಧ್ಯವಾದಷ್ಟು ಬೇಗ ಹೆಚ್ಚಿನ ಅಪ್​ಡೇಟ್​​ ಒದಗಿಸುತ್ತೇವೆ” ಎಂದು ಇಸಿಬಿ ತಿಳಿಸಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports