Last Updated:
Dharmendra Pradhan-Abhijeet Dipke: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದು, ಈ ಬಗ್ಗೆ ಸಿಜೆಪಿ ಸಂಸ್ಥಾಪಕ ಕೊಟ್ಟ ಮೊದಲ ಪ್ರತಿಕ್ರಿಯೆ ಏನು ಗೊತ್ತಾ?
ನೀಟ್ ಪೇಪರ್ ಲೀಕ್ ನಂತರ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿ ಪ್ರತಿಭಟನೆ (Student Protest), ಸಿಜೆಪಿ ಪ್ರೊಟೆಸ್ಟ್ (CJP Protest) ನಂತರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ (Resignation) ಕೊಟ್ಟಿದ್ದಾರೆ. ಹಲವಾರು ದಿನಗಳಿಂದ ದೆಹಲಿಯಲ್ಲಿ ಜಂತರ್ ಮಂತರ್ನಲ್ಲಿ ಸಿಜೆಪಿ ಪ್ರತಿಭಟನೆ ನಡೆಸುತ್ತಿತ್ತು. ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಬೇಡಿಕೆ ಇಟ್ಟಿತ್ತು. ಸದ್ಯ ಶಿಕ್ಷಣ ಸಚಿವರು ರಾಜೀನಾಮೆ ಕೊಟ್ಟಿದ್ದಾರೆ.
ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಪ್ರತಿಕ್ರಿಯಿಸಿದ್ದಾರೆ. ನಾವು ಗೆದ್ದಿದ್ದೇವೆ ಎಂದು ಅಭಿಜಿತ್ ದೀಪ್ಕೆ ಹೇಳಿದ್ದು, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ನಾವು ಹೋರಾಟದಲ್ಲಿ ಗೆದ್ದಿದ್ದೇವೆ ಎಂದಿದ್ದಾರೆ.
ಮೋದಿ ಆಡಳಿತದಲ್ಲಿ ಸೇವೆಗೆ ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞತೆ ಇದೆ. 2026ರ ಮೇ 3ರ NEET ಪರೀಕ್ಷೆಯಲ್ಲಿ ಅಕ್ರಮಗಳು ನಡೆದ್ವು ಸರ್ಕಾರ ತಕ್ಷಣ ಕ್ರಮ ಕೈಗೊಂಡು ತನಿಖೆಗೆ ಸಿಬಿಐಗೆ ನೀಡಿತು. ಪರೀಕ್ಷೆಯನ್ನು ರದ್ದು ಪಡಿಸಿ ಮರುಪರೀಕ್ಷೆ ದಿನಾಂಕ ಘೋಷಿಸಿದ್ವಿ ಮರುಪರೀಕ್ಷೆಯೂ ಜೂನ್ 21ರಂದು ಯಶಸ್ವಿಯಾಗಿ ನಡೀತು.
ಮುಂದಿನ ವರ್ಷದಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮೊದಲ ದಿನದಿಂದ ಸಂಪೂರ್ಣ ಜವಾಬ್ದಾರಿ ನಾನು ಹೊತ್ತಿದ್ದೆ. ಯಾವುದೇ ವಿದ್ಯಾರ್ಥಿಯ ಭವಿಷ್ಯ ಹಾಳಾಗಬಾರದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ನಾವು ನಾನು ನಿಶ್ಚಯಿಸಿದ್ದೆ. ಜು.16ರಂದು ಪ್ರಕಟವಾದ NEET-UG ಫಲಿತಾಂಶಗಳು ತೃಪ್ತಿಕರ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಕೂಡ ಯಶಸ್ಸು ಸಾಧಿಸಿದರು.
ಆದರೂ ಈ ಅವಧಿಯಲ್ಲಿ ಕೆಲವರು ದಾರಿತಪ್ಪಿಸಲು ಯತ್ನಿಸಿದ್ರು. ನಾನು ಪ್ರಜಾಪ್ರಭುತ್ವದ ಶಕ್ತಿಯ ಮೇಲೆ ಅಚಲ ವಿಶ್ವಾಸವಿಟ್ಟಿದ್ದೇನೆ. ಯುವಜನರ ಆಶಯಗಳು, ನಿರೀಕ್ಷೆಗಳಿಗೆ ಸದಾ ಗೌರವ ನೀಡಿದ್ದೇನೆ. ಯುವಜನರು ಭಾರತದ ಭವಿಷ್ಯ ಮಾತ್ರವಲ್ಲ ಭಾರತದ ನಿರ್ಮಾತೃಗಳು ಕಳೆದ 10 ದಿನಗಳ ಬೆಳವಣಿಗೆ ನೋಡಿ ನನಗೆ ತುಂಬಾ ದುಃಖವಾಗಿದೆ.
ಭಾರತದ ಯುವಶಕ್ತಿಯೇ ಈ ದೇಶದ ನಿಜವಾದ ಬಲ. ಯುವಕರನ್ನ ಸಂಚಿನ ಬಲೆಗೆ ಬೀಳಲು ಬಿಡಲ್ಲ. ಇದು ನನ್ನ ಸಂಕಲ್ಪ ರಾಷ್ಟ್ರವಿರೋಧಿ ಶಕ್ತಿಗಳು ಇದನ್ನ ದುರುಪಯೋಗಕ್ಕೆ ಬಿಡಲ್ಲ ದೇಶದ ಏಕತೆ ಅಚಲವಾಗಿರಬೇಕು. ವಿದ್ಯಾರ್ಥಿಗಳ ಭವಿಷ್ಯವೂ ಕಾನೂನು ಪ್ರಕ್ರಿಯೆಗಳಲ್ಲಿ ಸಿಲುಕಬಾರದು ದೇಶವನ್ನು ಒಗ್ಗೂಡಿಸಿ, ಬಲಿಷ್ಠವಾಗಿಸಲು ಒಟ್ಟಾಗಿ ಕೆಲಸ ಮಾಡಬೇಕು.
ಇದೇ ವಿಚಾರವನ್ನು ನಮ್ಮ ಪ್ರಧಾನಮಂತ್ರಿ ತಿಳಿಸಿದ್ದಾರೆ ಪ್ರಧಾನಿಗಳ ವಿಶ್ವಾಸ ಮತ್ತು ನಿರಂತರ ಸಹಕಾರಕ್ಕಾಗಿ ಕೃತಜ್ಞತೆ ಸಂಪುಟದ ಸಹೋದ್ಯೋಗಿಗಳು ಸೇರಿ ಎಲ್ಲರಿಗೂ ಧನ್ಯವಾದ ರಾಷ್ಟ್ರಸೇವೆ ನನ್ನ ಜೀವನದ ಶ್ರೇಷ್ಠ ಆದ್ಯತೆ, ಅದಕ್ಕಾಗಿ ಸಮರ್ಪಿತನಾಗಿರುತ್ತೇನೆ ಎಂದಿದ್ದಾರೆ.
Bangalore,Karnataka














