Last Updated:
Dhanveer Gowda: ‘ಹಯಗ್ರೀವ’ (Hayagriva) ಚಿತ್ರವು ಫೆಬ್ರವರಿ 27, 2026 ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿತ್ತು. ಈ ಮಿಸ್ಟರಿ-ಥ್ರಿಲ್ಲರ್ (Mystery-Thriller Movie) ಚಿತ್ರವು ಈಗಾಗಲೇ ಪ್ರೇಕ್ಷಕರ ಮನ ಗೆದ್ದು, ಇದೀಗ ಒಟಿಟಿಗೆ ಹೆಜ್ಜೆ ಇಟ್ಟಿದೆ.
ನಟ ಧನ್ವೀರ್ ಗೌಡ (Dhanveer Gowda) ಅಭಿನಯದ ‘ಹಯಗ್ರೀವ’ (Hayagriva) ಚಿತ್ರವು ಫೆಬ್ರವರಿ 27, 2026 ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿತ್ತು. ಈ ಮಿಸ್ಟರಿ-ಥ್ರಿಲ್ಲರ್ (Mystery-Thriller Movie) ಚಿತ್ರವು ಈಗಾಗಲೇ ಪ್ರೇಕ್ಷಕರ ಮನ ಗೆದ್ದು, ಇದೀಗ ಒಟಿಟಿಗೆ (OTT) ಹೆಜ್ಜೆ ಇಟ್ಟಿದೆ. ಹಾಗಾದ್ರೆ ಈ ಸಿನಿಮಾ ಯಾವಾಗ? ಎಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ ಎಂಬುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
ಹೌದು ಧನ್ವೀರ್ ಗೌಡ ಅಭಿನಯದ ಹಯಗ್ರೀವ ಚಿತ್ರದ ಪ್ರಚಾರದ ವೇಳೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಧನ್ವೀರ್‌ಗೆ ಬೆಂಬಲವಾಗಿ ನಿಂತಿದ್ದರು. ಇದೇ ಸಮಯದಲ್ಲಿ ದರ್ಶನ್ ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಿಂದ ಅಭಿಮಾನಿಗಳಿಗೂ ಸಿನಿಮಾ ವೀಕ್ಷಿಸಲು ಮನವಿ ಹೊರಬಿದ್ದಿತ್ತು. ಈ ಬೆಳವಣಿಗೆಗಳಿಂದ ಚಿತ್ರದ ಕ್ರೇಜ್ ಇನ್ನಷ್ಟು ಹೆಚ್ಚಾಗಿತ್ತು.
ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ನಂತರ, ಧನ್ವೀರ್ ನಟನೆಯ ಹಯಗ್ರೀವ ಸಿನಿಮಾ ಈಗ ಒಟಿಟಿಯಲ್ಲಿ ಲಭ್ಯವಿದೆ. ಸಿನಿಮಾ ಇದೀಗ ಅಮೆಜಾನ್ ಪ್ರೈಮ್ ನಲ್ಲಿ (Amazon Prime Video) ಬಿಡುಗಡೆಯಾಗಿದ್ದು, ಎಲ್ಲರೂ ಮನೆಯಲ್ಲೇ ವೀಕ್ಷಿಸಲು ಅವಕಾಶ ದೊರಕಿದೆ.
ಹಯಗ್ರೀವ ಸಿನಿಮಾ ಧನ್ವೀರ್ ಅವರ ವೃತ್ತಿಜೀವನಕ್ಕೆ ವಿಶೇಷ ಸ್ಥಾನ ನೀಡಿತ್ತು. ಹಾಗೆಯೇ ಈ ಸಿನಿಮಾದದಲ್ಲಿ ನಟ ಖಡಕ್ ಪೊಲೀಸ್ ಅಧಿಕಾರಿಯ ರೂಪದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು . ಜೊತೆಗೆ ಈ ಸಿನಿಮಾವನ್ನು ನಿರ್ದೇಶಿಸಿರುವವರು ರಘುಕುಮಾರ್ ಒ.ಆರ್.
ಒಂದೇ ರೀತಿಯ ಕೊಲೆಗಳು ನಡೆಯುತ್ತಿರುತ್ತಿದ್ದರೂ ಸತ್ತವರನ್ನು ಗುರುತಿಸುವುದು ಕಷ್ಟವಾಗುವ ರೀತಿಯಲ್ಲಿ ನಡೆಯುತ್ತಿರುವ ಈ ಅಪರಾಧಗಳ ಹಿಂದೆ ಯಾರು ಎಂಬುದನ್ನು ಪತ್ತೆ ಹಚ್ಚುವುದು ಚಿತ್ರದ ಕಥೆಯಾಗಿದೆ . ಈ ಕೇಸನ್ನು ಪರಿಹರಿಸಲು ಮುಂದಾಗುವ ಪೊಲೀಸ್ ಅಧಿಕಾರಿಯಾಗಿ ಧನ್ವೀರ್ ಕಾಣಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ಪುರಾಣದ ಹಯಗ್ರೀವ ಕಥೆಯನ್ನು ಬಳಸಿ, ಕಥಾವಸ್ತುವಿಗೆ ಅದ್ಭುತ ಹಿನ್ನಲೆ ಕಟ್ಟಲಾಗಿದೆ. ಧನ್ವೀರ್ ಹಯಗ್ರೀವ ಶೀರ್ಷಿಕೆಯ ಪಾತ್ರದೊಂದಿಗೂ ಹೊಂದಿಕೊಂಡಂತೆ ಮಫ್ತಿಯಲ್ಲಿ ಇರುವ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಚಿತ್ರದ ಮಧ್ಯಭಾಗದಲ್ಲಿ ಕಾಣಿಸಿಕೊಂಡಿರುವ ಇನ್ನೊಂದು ಪಾತ್ರ ವೀಕ್ಷಕರಿಗೆ ದೊಡ್ಡ ಸರ್ಪ್ರೈಸ್ ನೀಡುತ್ತದೆ. ಕಥೆ ಮುಂದುವರಿದಂತೆ ಹಲವು ಟ್ವಿಸ್ಟ್‌ಗಳು, ಭಯ ಹುಟ್ಟಿಸುವ ಸನ್ನಿವೇಶಗಳು ಚಿತ್ರಕ್ಕೆ ಹೆಚ್ಚುವರಿ ತೂಕ ತಂದು ಕೊಟ್ಟಿದೆ.
Bangalore [Bangalore],Bangalore,Karnataka













