Last Updated:
ಡೆಲ್ಲಿ ಪ್ರೀಮಿಯರ್ ಲೀಗ್ನಲ್ಲಿ ಆಡಿದ ಯುವ ಕ್ರಿಕೆಟಿಗರು ಐಪಿಎಲ್, ಭಾರತ ಎ, ಭಾರತ ಸೀನಿಯರ್ ತಂಡಕ್ಕೆ ಆಯ್ಕೆಯಾಗಿ ಗಮನ ಸೆಳೆಯುತ್ತಿದ್ದಾರೆ. ಅದರೆ ಇತ್ತೀಚೆಗೆ ಒಬ್ಬ ಯುವಕನ ಆಯ್ಕೆ ದೊಡ್ಡ ವಿವಾದ ಸೃಷ್ಟಿಸುತ್ತಿದೆ.
ಡೆಲ್ಲಿ ಪ್ರೀಮಿಯರ್ ಲೀಗ್ (DPL) ಪ್ರಿಯಾಂಶ್ ಆರ್ಯ (Priyansh Yadav) ಮತ್ತು ಪ್ರಿನ್ಸ್ ಯಾದವ್ (Prince YAdav) ಅವರಂತಹ ಅಂತರರಾಷ್ಟ್ರೀಯ ಮಟ್ಟದ ಆಟಗಾರರನ್ನು ಸೃಷ್ಟಿಸಿದೆ. ಈ ಲೀಗ್ನಲ್ಲಿ ಆಡಿದ ಹಲವಾರು ಕ್ರಿಕೆಟಿಗರು ಐಪಿಎಲ್ನಲ್ಲಿ (IPL) ಆಡಲು ಅವಕಾಶ ಪಡೆದುಕೊಂಡಿದ್ದಾರೆ. ಆದರೆ ಇದೇ ಲೀಗ್ನಲ್ಲಿ ಸರಿಯಾದ ಬ್ಯಾಟಿಂಗ್ ಹಿಡಿಯಲು ಬಾರದ ಕ್ರಿಕೆಟ್ ಭಾಷೆಯೇ ತಿಳಿಯದ ಆಟಗಾರ ಕಾಣಿಸಿಕೊಂಡರೆ ಲೀಗ್ನ ಬಗ್ಗೆ ಪ್ರಶ್ನೆಗಳು ಉದ್ಭವಿಸುವುದು ಸಹಜ. ಪ್ರಸ್ತುತ ಅಂತಹ ಆಟಗಾರನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಆತನ ಹೆಸರೇ ದೇವ್ ಚೌಧರಿ (Dev Chaudhary). ಅವರಿಗೆ 22 ವರ್ಷ. ಮೇ 14, 2004 ರಂದು ಜನಿಸಿದ ದೇವ್ ಚೌಧರಿ ನ್ಯೂಡೆಲ್ಲಿ ಟೈಗರ್ಸ್ ಪರ ಆಡುತ್ತಿದ್ದಾರೆ.














