Last Updated:
Deepika Padukone: ನಟಿ ದೀಪಿಕಾ ಪಡುಕೋಣೆ ಅವರು ಸ್ಪಿರಿಟ್ ಸಿನಿಮಾದಿಂದ ಹೊರನಡೆದಿದ್ದೇಕೆ? ವಂಗಾ ಸಹೋದರ ಹೇಳಿದ್ದೇನು?
ದೀಪಿಕಾ ಪಡುಕೋಣೆ (Deepika Padukone) ಸ್ಪಿರಿಟ್‌ನಿಂದ (Spirit) ನಿರ್ಗಮಿಸಿದ ವಿವಾದ ಮತ್ತೆ ಚರ್ಚೆಯಾಗುತ್ತಿದೆ. ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರ ಸಹೋದರ ಪ್ರಣಯ್ ರೆಡ್ಡಿ ವಂಗಾ ಅವರು ಭಿನ್ನಾಭಿಪ್ರಾಯದ ಬಗ್ಗೆ ಹೊಸ ಹೇಳಿಕೆಗಳನ್ನು (Statement) ನೀಡಿದ್ದಾರೆ. ನಟಿಯ ಎಂಟು ಗಂಟೆಗಳ ಕೆಲಸದ ಬೇಡಿಕೆ ಈ ಹಿಂದೆ ಭಾರೀ ಚರ್ಚೆಯಾಗಿತ್ತು. ಈಗ ಪ್ರಣಯ್ ಸಂಭಾವನೆ ಮತ್ತು ಲಾಭ ಹಂಚಿಕೆ ಕೂಡ ವಿವಾದದ ಪ್ರಮುಖ ಅಂಶಗಳಾಗಿವೆ ಎಂದು ಹೇಳಿಕೊಂಡಿದ್ದಾರೆ.














