Deepika Padukone: ಆ ಒಂದು ವಿಷ್ಯದಿಂದ ದೀಪಿಕಾ ಖಿನ್ನತೆಗೆ ಒಳಗಾಗಿದ್ದಳು! ಬಿಗ್ ಸೀಕ್ರೆಟ್ ರಿವೀಲ್ ಮಾಡಿದ ತಂದೆ ಪ್ರಕಾಶ್ ಪಡುಕೋಣೆ | | ACTPnews

ದೀಪಿಕಾ ಪಡುಕೋಣೆ


Last Updated:

Deepika Padukone: ಕೆಲವು ವರ್ಷಗಳ ಹಿಂದೆ ನಟಿ ದೀಪಿಕಾ ಪಡುಕೋಣೆ ತಮ್ಮ ಖಿನ್ನತೆಯ ಅನುಭವವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ಅವರು ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಕಾರಣರಾಗಿದ್ದರು. ಇದೀಗ ಅವರ ತಂದೆ ಹಾಗೂ ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆ, ಮಗಳ ಆ ನಿರ್ಧಾರದ ಹಿಂದೆ ಕುಟುಂಬ ಹೇಗೆ ಸಂಪೂರ್ಣ ಬೆಂಬಲವಾಗಿ ನಿಂತಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ

ಭಾರತೀಯ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿರುವ ದೀಪಿಕಾ ಪಡುಕೋಣೆ (Deepika Padukone) ಕೇವಲ ತಮ್ಮ ನಟನಾ ಪ್ರತಿಭೆಯಿಂದಷ್ಟೇ ಅಲ್ಲ, ಮಾನಸಿಕ ಆರೋಗ್ಯ ಜಾಗೃತಿಯ ಕುರಿತು ನಡೆಸುತ್ತಿರುವ ಅಭಿಯಾನಗಳಿಂದಲೂ ಗುರುತಿಸಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ತಮ್ಮ ಖಿನ್ನತೆಯ ಅನುಭವವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ಅವರು ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಕಾರಣರಾಗಿದ್ದರು. ಇದೀಗ ಅವರ ತಂದೆ ಹಾಗೂ ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆ (Prakash Padukone), ಮಗಳ ಆ ನಿರ್ಧಾರದ ಹಿಂದೆ ಕುಟುಂಬ ಹೇಗೆ ಸಂಪೂರ್ಣ ಬೆಂಬಲವಾಗಿ ನಿಂತಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಕಾಶ್ ಪಡುಕೋಣೆ, ದೀಪಿಕಾ ಅವರ ಜೀವನ ಪಯಣ, ಮಾನಸಿಕ ಆರೋಗ್ಯದ ಕುರಿತು ಅವರ ಬದ್ಧತೆ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸಲು ಅವರು ಕೈಗೊಂಡ ಪ್ರಯತ್ನಗಳ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮನರಂಜನಾ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: Darshan: ಲೈವ್ ಬಂದು ಅಭಿಮಾನಿಗಳ ಬಗ್ಗೆ ಮಾತನಾಡಿದ್ದ ನಟ ದರ್ಶನ್! ವಿಡಿಯೋ ವೈರಲ್

ಮಾನಸಿಕ ಆರೋಗ್ಯದಂತಹ ಸೂಕ್ಷ್ಮ ವಿಷಯದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಸುಲಭದ ವಿಷಯವಲ್ಲ. ವಿಶೇಷವಾಗಿ ಸಿನಿಮಾ ಕ್ಷೇತ್ರದ ದೊಡ್ಡ ತಾರೆಯೊಬ್ಬರು ತಮ್ಮ ವೈಯಕ್ತಿಕ ಹೋರಾಟವನ್ನು ಬಹಿರಂಗಪಡಿಸುವುದು ಸಾಕಷ್ಟು ಧೈರ್ಯವನ್ನು ಬೇಡುತ್ತದೆ. ಈ ವಿಚಾರವನ್ನು ಉಲ್ಲೇಖಿಸಿದ ಪ್ರಕಾಶ್ ಪಡುಕೋಣೆ, ದೀಪಿಕಾ ತಮ್ಮ ಅನುಭವವನ್ನು ಹಂಚಿಕೊಳ್ಳುವ ಬಗ್ಗೆ ಮೊದಲಿಗೆ ಕುಟುಂಬದೊಂದಿಗೆ ಚರ್ಚಿಸಿದ್ದರು ಎಂದು ಹೇಳಿದ್ದಾರೆ.

ದೀಪಿಕಾ ಪಡುಕೋಣೆ ತಮ್ಮ ಖಿನ್ನತೆಯ ಅನುಭವವನ್ನು ಬಹಿರಂಗಪಡಿಸಿದ ಬಳಿಕ ಮಾನಸಿಕ ಆರೋಗ್ಯ ಜಾಗೃತಿಯ ಕಡೆ ಹೆಚ್ಚು ಗಮನ ಹರಿಸಲು ಆರಂಭಿಸಿದರು. ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಉತ್ಸಾಹವು ಕಾಲಕ್ರಮೇಣ ಮತ್ತಷ್ಟು ಹೆಚ್ಚಾಯಿತು ಎಂದು ಪ್ರಕಾಶ್ ಪಡುಕೋಣೆ ಹೇಳಿದ್ದಾರೆ.

ವಿಶೇಷವಾಗಿ ತಮ್ಮ ಆಪ್ತ ಸ್ನೇಹಿತರೊಬ್ಬರನ್ನು ಕಳೆದುಕೊಂಡ ನಂತರ, ಮಾನಸಿಕ ಆರೋಗ್ಯದ ಕುರಿತು ಸಮಾಜದಲ್ಲಿ ಅರಿವು ಮೂಡಿಸುವ ಅಗತ್ಯವನ್ನು ದೀಪಿಕಾ ಇನ್ನಷ್ಟು ಗಂಭೀರವಾಗಿ ಪರಿಗಣಿಸಿದರು. ಇದೇ ಕಾರಣದಿಂದ ಅವರು ಮಾನಸಿಕ ಆರೋಗ್ಯ ಜಾಗೃತಿಗೆ ಸಂಬಂಧಿಸಿದ ಪ್ರತಿಷ್ಠಾನವನ್ನು ಆರಂಭಿಸುವ ಆಲೋಚನೆ ಮಾಡಿದರು. ಈ ಯೋಜನೆಯನ್ನು ಕುಟುಂಬದೊಂದಿಗೆ ಚರ್ಚಿಸಿದಾಗಲೂ ಎಲ್ಲರೂ ಅವರನ್ನು ಪ್ರೋತ್ಸಾಹಿಸಿದ್ದರು ಎಂದು ಪ್ರಕಾಶ್ ತಿಳಿಸಿದ್ದಾರೆ.

ಸಂದರ್ಶನದ ವೇಳೆ ಪ್ರಕಾಶ್ ಪಡುಕೋಣೆ ಮಾನಸಿಕ ಆರೋಗ್ಯದ ಕುರಿತ ಕಳಂಕದ ಬಗ್ಗೆ ಕೂಡ ಮಾತನಾಡಿದರು. ಇಂದಿಗೂ ಅನೇಕರು ಖಿನ್ನತೆ, ಆತಂಕ ಅಥವಾ ಇತರ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಆದರೆ ಇದು ದೈಹಿಕ ಆರೋಗ್ಯದಷ್ಟೇ ಪ್ರಮುಖ ವಿಷಯವಾಗಿದ್ದು, ಅದರ ಬಗ್ಗೆ ಮುಕ್ತವಾಗಿ ಚರ್ಚಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed