Last Updated:
ಆಸ್ಟ್ರೇಲಿಯಾದ ಮಾಜಿ ಸ್ಟಾರ್ ಕ್ರಿಕೆಟ್ ಪ್ಲೇಯರ್ ಡೇವಿಡ್ ವಾರ್ನರ್ ಮತ್ತೊಮ್ಮೆ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಅವರು ಜೈಲು ಸೇರುವುದು ಖಚಿತ ಎಂದು ವರದಿಗಳು ಹೇಳಿವೆ.
ಆಸ್ಟ್ರೇಲಿಯಾ(Australia)ದ ಮಾಜಿ ಸ್ಟಾರ್ ಕ್ರಿಕೆಟ್ (Cricket) ಪ್ಲೇಯರ್ ಡೇವಿಡ್ ವಾರ್ನರ್ (David Warner) ಮತ್ತೊಮ್ಮೆ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಅವರು ಜೈಲು ಸೇರುವುದು ಖಚಿತ ವರದಿಗಳು ಹೇಳಿವೆ. ಕುಡಿದು ವಾಹನ (Drink Driving) ಚಲಾಯಿಸಿದ ಆರೋಪದಲ್ಲಿ ನ್ಯಾಯಾಲಯದಲ್ಲಿ ವಾರ್ನರ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈಗ ಅವರಿಗೆ ಕಠಿಣ ಶಿಕ್ಷೆಯಾಗುವ ಸಾಧ್ಯತೆ ಇದೆ. ವಾರ್ನರ್ ಅವರ ಈ ತಪ್ಪು ಸಿಡ್ನಿ ಥಂಡರ್ (Sydney Thunder) ತಂಡದ ನಾಯಕತ್ವಕ್ಕೂ ಸಮಸ್ಯೆ ಉಂಟುಮಾಡಿದೆ.
ಡೇವಿಡ್ ವಾರ್ನರ್ 2016ರ ಏಪ್ರಿಲ್‌ನಲ್ಲಿ ಮದ್ಯಪಾನ ಮಾಡಿ ಕಾರು ಓಡಿಸಿದ್ದಕ್ಕಾಗಿ ಅವರ ಮೇಲೆ ಕೇಸ್ ದಾಖಲಾಗಿತ್ತು. ಡೇವಿಡ್ ವಾರ್ನರ್ ಕುಡಿದು ವಾಹನ ಓಡಿಸಿದ ಆರೋಪವನ್ನು ಒಪ್ಪಿಕೊಂಡಿದ್ದಾರೆ ಎಂದು ಅವರ ವಕೀಲ ಬಾಬಿ ಹಿಲ್ ಸ್ಪಷ್ಟಪಡಿಸಿದ್ದಾರೆ. ಉಸಿರು ಪರೀಕ್ಷೆಯಲ್ಲಿ ತಪ್ಪಿದ್ದಕ್ಕೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಬಿಬಿಸಿ ವರದಿ ಮಾಡಿದೆ.
ಏಪ್ರಿಲ್ 5 ರಂದು ಸಿಡ್ನಿಯ ಪೂರ್ವ ಉಪನಗರದಲ್ಲಿ ಡೇವಿಡ್ ವಾರ್ನರ್ ಆರ್ಬಿಟಿ (Random Breath Testing) ಪರೀಕ್ಷೆಯಲ್ಲಿ ಸಿಕ್ಕಿಬಿದ್ದರು. ನಂತರ ಅವರನ್ನು ಮರೂಬ್ರಾ ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ಅವರ ರಕ್ತದಲ್ಲಿ ಆಲ್ಕೋಹಾಲ್ ಪ್ರಮಾಣ 0.104 ಇತ್ತು. ಇದು ಕಾನೂನು ಮಿತಿಗಿಂತ ಎರಡು ಪಟ್ಟು ಹೆಚ್ಚಾಗಿತ್ತು. ಇದಾದ ಬಳಿಕ ವಾರ್ನರ್ ಅವರ ವಕೀಲರು ನ್ಯಾಯಾಲಯಕ್ಕೆ ಅವರು ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಆಗಸ್ಟ್ 18 ರಂದು ಡೇವಿಡ್ ವಾರ್ನರ್‌ಗೆ ತೀರ್ಪು ನೀಡಲಾಗುವುದು ಎಂದು ವರದಿಗಳಾಗಿವೆ. ಅವರಿಗೆ ಕನಿಷ್ಠ ಆರು ತಿಂಗಳ ಕಾಲ ವಾಹನ ಚಲಾಯಿಸುವುದನ್ನು ನಿಷೇಧಿಸಬಹುದು. ಜೊತೆಗೆ 2,200 ಆಸ್ಟ್ರೇಲಿಯನ್ ಡಾಲರ್ ದಂಡ ಮತ್ತು ಗರಿಷ್ಠ ಒಂಬತ್ತು ತಿಂಗಳ ಜೈಲು ಶಿಕ್ಷೆಯೂ ಆಗಬಹುದು. ವಾರ್ನರ್ ಹಿಂದೆಯೂ ಹಲವು ವಿವಾದಗಳಲ್ಲಿ ಸಿಕ್ಕಿಕೊಂಡಿದ್ದರು. ಈಗ ಮತ್ತೊಮ್ಮೆ ಅವರು ಅಭಿಮಾನಿಗಳ ನಡುವೆ ಚರ್ಚೆಯ ವಿಷಯವಾಗಿದ್ದಾರೆ.
ಈ ಘಟನೆಯು ಸಿಡ್ನಿ ಥಂಡರ್ ತಂಡದ ನಾಯಕತ್ವದ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಕೊಂಡಿವೆ. ವಾರ್ನರ್ ತನ್ನ ತಪ್ಪನ್ನು ಒಪ್ಪಿಕೊಂಡ ನಂತರ ತಂಡದಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಸಿಡ್ನಿ ಥಂಡರ್, ಸಿಡ್ನಿ ಸಿಕ್ಸರ್ಸ್ ಮತ್ತು NSW ಬ್ಲೂಸ್ ತಂಡಗಳು ರಾಜ್ಯ ಸರ್ಕಾರದ ಮದ್ಯಪಾನ ಮತ್ತು ವಾಹನ ಚಾಲನೆ ವಿರೋಧಿ ಅಭಿಯಾನದ ಭಾಗವಾಗಿವೆ ಎಂಬುದು ಗಮನಿಸಬೇಕಾದ ಸಂಗತಿ.
ಕ್ರಿಕೆಟ್ NSWನ ಮುಖ್ಯ ಕಾರ್ಯನಿರ್ವಾಹಕ ಲೀ ಜರ್ಮನ್ ಅವರು, “ಈ ವಿಷಯ ತುಂಬಾ ಗಂಭೀರವಾದುದು. ನಾವು ಸುರಕ್ಷಿತ ಚಾಲನೆಯನ್ನು ಬೆಂಬಲಿಸುತ್ತೇವೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದಿಲ್ಲ” ಎಂದು ಹೇಳಿದ್ದಾರೆ.
ವಾರ್ನರ್ ಇತ್ತೀಚೆಗೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕರಾಚಿ ಕಿಂಗ್ಸ್ ತಂಡದ ನಾಯಕರಾಗಿದ್ದರು. 2018ರಲ್ಲಿ ನಡೆದ ಸ್ಯಾಂಡ್‌ಪೇಪರ್ ಬಾಲ್ ಟ್ಯಾಂಪರಿಂಗ್ ಹಗರಣದಿಂದಾಗಿ ಅವರಿಗೆ ಜೀವಮಾನ ನಾಯಕತ್ವ ನಿಷೇಧವಿತ್ತು. ಅದನ್ನು 2024ರಲ್ಲಿ ತೆಗೆದುಹಾಕಲಾಯಿತು. ನಂತರ ಅವರನ್ನು ಸಿಡ್ನಿ ಥಂಡರ್ ತಂಡದ ನಾಯಕರನ್ನಾಗಿ ನೇಮಿಸಲಾಯಿತು. ಈಗ ಈ ಹೊಸ ವಿವಾದದಿಂದ ಅವರ ನಾಯಕತ್ವದ ಭವಿಷ್ಯವೇ ಪ್ರಶ್ನೆಗೊಳಗಾಗಿದೆ.














