Last Updated:
ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ತಂದೆಯಿಂದ ಇಲಿಪಾಷಾಣ ಸೇವಿಸಿ 10 ವರ್ಷದ ಮಗಳು ಸಾವು, 8 ವರ್ಷದ ಮಗನ ಸ್ಥಿತಿ ಗಂಭೀರ. ತಂದೆ ಆತ್ಮಹತ್ಯೆಗೆ ಯತ್ನ.
ದಂಪತಿಗಳ ನಡುವೆ (Couple) ಎದುರಾದ ಭಿನ್ನಾಭಿಪ್ರಾಯ, ಅನುಮಾನಗಳು ಇಬ್ಬರು ಮಕ್ಕಳು (Children) ಜೀವನ್ಮರಣ ಹೋರಾಟ ಮಾಡಲು ಕಾರಣವಾಗಿದೆ. ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕಾದ ತಂದೆಯೇ (Father) ಇಬ್ಬರು ಮಕ್ಕಳಿಗೆ ಜ್ಯೂಸ್ನಲ್ಲಿ ಇಲಿಪಾಷಾಣ ನೀಡಿ, ತಾನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ದಾರುಣ ಘಟನೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ 10 ವರ್ಷದ ಹೆಣ್ಣು ಮಗಳು ಸಾವನ್ನಪ್ಪಿದರೆ, 08 ವರ್ಷದ ಮಗ ಸಾವು (Andhra Pradesh) ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲು ನಗರದಲ್ಲಿ ಘಟನೆ ನಡೆದಿದ್ದು, ಬಾಪಟ್ಲ ಜಿಲ್ಲೆಯ ಚೀರಾಲ ಸಾಯಿ ಕಲೋನಿಯಲ್ಲಿ ವಾಸಿಸುತ್ತಿದ್ದ ಪ್ರವಾಳಿಕಳನ್ನು, ಪ್ರಕಾಶಂ ಜಿಲ್ಲೆಯ ಸಂತನೂತಲಪಾಡು ಮಂಡಲದ ಪೆರ್ನಮಿಟ್ಟಕ್ಕೆ ಸೇರಿದ ಕೊರಿಶಪಾಟಿ ವಿಜಯಕುಮಾರ್ಗೆ 12 ವರ್ಷದ ಹಿಂದೆಯೇ ಕಾಲೇಜಿನಲ್ಲಿ ಪ್ರೀತಿ ಮಾಡಿ ಮದುವೆ ಮಾಡಿಕೊಂಡಿದ್ದರು. ದಂಪತಿಗೆ 10 ವರ್ಷದ ಮಗಳು ಆದ್ಯಾ, 8 ವರ್ಷದ ಮಗ ಸುಪ್ರೀತ್ ಕೂಡ ಇದ್ದ. ಆದರೆ ಕೆಲ ಸಮಯದಿಂದ ವಿಜಯ್ ಯಾವುದೇ ಕೆಲಸ ಮಾಡದೆ ಮನೆಯಲ್ಲೇ ಇರ್ತಿದ್ದನಂತೆ. ಅಲ್ಲದೇ ಪತ್ನಿಗೆ ಹಿಂಸೆ ನೀಡುತ್ತಿದ್ದನಂತೆ. ಪತಿಯ ಹಿಂಸೆ ತಡೆದುಕೊಳ್ಳಲು ಆಗದೆ ಪ್ರವಾಳಿಕ ಒಂಗೋಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳಂತೆ. ಪೊಲೀಸರು ಇಬ್ಬರಿಗೂ ಕೌನ್ಸಿಲಿಂಗ್ ನೀಡಿದ್ದರಂತೆ. ಆದರೂ ವಿಜಯ್ ನಡೆಯಲ್ಲಿ ಯಾವುದೇ ಬದಲಾವಣೆ ಬರಲಿಲ್ಲವಂತೆ. ಇದರೊಂದಿಗೆ ಪತಿಯ ಕಿರುಕುಳ ತಡೆದುಕೊಳ್ಳಲಾಗದೆ ಮಕ್ಕಳನ್ನು ಆತನ ಬಳಿಯೇ ಬಿಟ್ಟು, ಮೂರು ತಿಂಗಳಿನಿಂದ ಒಂಗೋಲು ನಗರದ ಮಹಿಳಾ ಶಕ್ತಿ ಭವನದಲ್ಲಿ ವಾಸ ಮಾಡುತ್ತಿದ್ದಳಂತೆ.
ಇದರ ನಡುವೆ ಮಕ್ಕಳನ್ನು ನವೋದಯ ಸ್ಕೂಲ್ಗೆ ಸೇರ್ಪಡೆ ಮಾಡಲು ಈ ತಿಂಗಳು 18ನೇ ತಾರೀಕು ಪತಿಗೆ ಕರೆಮಾಡಿದ್ದಳಂತೆ. ವಿಜಯ್ ಮಕ್ಕಳಿಗೆ ಪುಸ್ತಕ ಕೊಡಿಸಿ, ಪತ್ನಿಗೆ ಮತ್ತೆ ಮನೆಗೆ ಬರುವಂತೆ ಕರೆದಿದ್ದನಂತೆ. ಆದರೆ ಆಕೆ ಮತ್ತೆ ವಾಪಸ್ ಬರಲು ನಿರಾಕರಿಸಿದ್ದಳಂತೆ. ಇದರಿಂದ ಅಸಮಾಧಾನಗೊಂಡ ವಿಜಯ್, ಈ ತಿಂಗಳ 19ನೇ ತಾರೀಕು ಮಕ್ಕಳಿಗೆ ಕೂಲ್ ಡ್ರಿಂಕ್ ಕೊಡಿಸಿ, ಅದರಲ್ಲಿ ಇಲಿ ವಿಷ ಹಾಕಿ ಕೊಡಿಸಿದ್ದಾನೆ. ಆ ಬಳಿಕ ತಾನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷ ಕುಡಿದ ಮಕ್ಕಳನ್ನು ತಾಯಿ ಬಳಿ ಬಿಟ್ಟು ಏನು ಗೊತ್ತಿಲ್ಲದಂತ ಅಲ್ಲಿಂದ ತೆರಳಿದ್ದಾನೆ. ಆದರೆ ಮಹಿಳಾ ಕೇಂದ್ರದಲ್ಲಿ ಮಕ್ಕಳು ಅಸ್ವಸ್ಥರಾಗುತ್ತಿದ್ದಂತೆ ತಕ್ಷಣ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಮಕ್ಕಳ ಸ್ಥಿತಿ ಗಂಭೀರವಾಗಿದ್ದರಿಂದ ಚೆನ್ನೈನ ಎಗ್ಮೋರ್ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ.
ಚೆನ್ನೈ ಎಗ್ಮೋರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ವರ್ಷದ ಆದ್ಯಾ ಕೊನೆಯುಸಿರೆಳೆದಿದ್ದಾಳೆ. ಬಾಲಕ ಸುಪ್ರೀತ್ ಪರಿಸ್ಥಿತಿ ಇನ್ನು ಗಂಭೀರವಾಗಿದ್ದು, ಇತ್ತ ವಿಷ ಕುಡಿದ ವಿಜಯ್ ಕುಮಾರ್ಗೆ ಒಂಗೋಲು ಜಿಜಿಹೆಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಗಳು ಸಾವನ್ನಪ್ಪುತ್ತಿದ್ದಂತೆ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಇದರಂತೆ ಆರೋಪಿ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿಯಿಂದ ಹೇಳಿಕೆ ಪಡೆದುಕೊಂಡಿದ್ದೇವೆ ಎಂದು ಒಂಗೋಲು ಸಿಐ ವಿಜಯ್ ಕೃಷ್ಣ ತಿಳಿಸಿದ್ದಾಗಿ ಟಿವಿ9 ತೆಲುಗು ವರದಿ ಮಾಡಿದೆ.














