Salman Khan: ಸಲ್ಮಾನ್ ಖಾನ್ ಹೊಸ ಲಕ್ಸುರಿ ವಾಚ್ ವೈರಲ್! ಬೆಲೆ ಕೇಳಿ ಬೆರಗಾದ ಫ್ಯಾನ್ಸ್ | | ACTPnews

ಸಲ್ಮಾನ್ ಖಾನ್‌


Last Updated:

ಇದೀಗ ಸಲ್ಮಾನ್ ಖಾನ್‌ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೊಸ ಐಷಾರಾಮಿ ವಾಚ್ (Luxury watch) ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸಲ್ಮಾನ್ ಖಾನ್‌
ಸಲ್ಮಾನ್ ಖಾನ್‌

ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್ (Salman Khan) ಸಿನಿಮಾ ಮಾತ್ರವಲ್ಲ, ತಮ್ಮ ಸ್ಟೈಲ್ ಮತ್ತು ಫ್ಯಾಷನ್‌ನಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಸಲ್ಲು ಧರಿಸುವ ಉಡುಪು, ಆಭರಣ ಮತ್ತು ಐಷಾರಾಮಿ ಪರಿಕರಗಳು ಅಭಿಮಾನಿಗಳ ಗಮನ ಸೆಳೆಯುತ್ತವೆ. ಇದೀಗ ಸಲ್ಮಾನ್ ಖಾನ್‌ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೊಸ ಐಷಾರಾಮಿ ವಾಚ್ (Luxury watch) ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರಸಿದ್ಧ ಐಷಾರಾಮಿ ವಾಚ್ ಬ್ರ್ಯಾಂಡ್ ಜಾಕೋಬ್ & ಕಂ, ಸಲ್ಮಾನ್ ಖಾನ್ ಹೆಸರಿನಲ್ಲಿ ವಿಶೇಷ ಆವೃತ್ತಿಯ ಕೈಗಡಿಯಾರವನ್ನು ಬಿಡುಗಡೆ ಮಾಡಿದೆ. The World Is Yours Dual Time Zone Salman Khan Edition ಎಂಬ ಹೆಸರಿನ ಈ ವಾಚ್ ಅನ್ನು ಸಲ್ಮಾನ್ ಖಾನ್ ಅನಾವರಣಗೊಳಿಸಿರುವ ವಿಡಿಯೊ ಈಗ ವೈರಲ್ ಆಗಿದೆ.

ಗಡಿಯಾರವನ್ನು ಅನ್ಬಾಕ್ಸ್ ಮಾಡುವ ವೇಳೆ ಮಾತನಾಡಿದ ಸಲ್ಮಾನ್ ಖಾನ್, ಇದು ಅತ್ಯಂತ ಸುಂದರವಾಗಿದೆ ಮತ್ತು ತನ್ನ ಮನಸ್ಸಿಗೆ ತುಂಬಾ ಇಷ್ಟವಾಗಿದೆ ಎಂದು ಹೇಳಿದ್ದಾರೆ. ಬ್ರ್ಯಾಂಡ್‌ನ ಸಂಸ್ಥಾಪಕರನ್ನು ಉದ್ದೇಶಿಸಿ, ಈ ವಿನ್ಯಾಸ ನಿಜಕ್ಕೂ ಅದ್ಭುತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಲೆ ಎಷ್ಟು?

ಈ ವಿಶೇಷ ಆವೃತ್ತಿಯ ಜಾಕೋಬ್ & ಕಂ ವಾಚ್ ಪ್ರಸ್ತುತ ಎಥೋಸ್ ಇಂಡಿಯಾದಲ್ಲಿ ಲಭ್ಯವಿದೆ. ಇದರ ಬೆಲೆ ಸುಮಾರು ₹41,00,000 ಆಗಿದ್ದು, ಐಷಾರಾಮಿ ವಾಚ್ ಪ್ರಿಯರ ಗಮನ ಸೆಳೆಯುತ್ತಿದೆ.

ಸಲ್ಮಾನ್ ಖಾನ್ ಈ ವಾಚ್ ಧರಿಸಿರುವ ವಿಡಿಯೊ ಮತ್ತು ಅದರ ವಿಶೇಷ ವಿನ್ಯಾಸ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ವಾಚ್‌ನ ಲುಕ್, ಅದರ ವೈಶಿಷ್ಟ್ಯಗಳು ಮತ್ತು ಬೆಲೆ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಸಿನಿಮಾ ಮಾತ್ರವಲ್ಲ, ಫ್ಯಾಷನ್ ಮತ್ತು ಐಷಾರಾಮಿ ಜೀವನಶೈಲಿಯಲ್ಲೂ ಸಲ್ಮಾನ್ ಖಾನ್ ತಮ್ಮದೇ ಆದ ಪ್ರಭಾವವನ್ನು ಮುಂದುವರಿಸುತ್ತಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಮೂಲಗಳ ಪ್ರಕಾರ, ಚಿತ್ರದ ಕೆಲವು ದೃಶ್ಯಗಳು ಹಾಗೂ ವಿಶೇಷವಾಗಿ ಚೀನಾ ದೇಶಕ್ಕೆ ಸಂಬಂಧಿಸಿದ ಕೆಲವು ಉಲ್ಲೇಖಗಳ ಬಗ್ಗೆ ರಕ್ಷಣಾ ಸಚಿವಾಲಯವು ಆಕ್ಷೇಪಣೆ ವ್ಯಕ್ತಪಡಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡವು ಸಂಬಂಧಿತ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದು, ಅಗತ್ಯ ಬದಲಾವಣೆಗಳ ಬಗ್ಗೆ ಚರ್ಚೆ ಮುಂದುವರಿದಿದೆ.

ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಕಡಿಮೆಯಾಗಿದೆ. ಇದೇ ಕಾರಣದಿಂದ ಸಿನಿಮಾ ಮುಂದಿನ ವರ್ಷಕ್ಕೆ ಮುಂದೂಡಲ್ಪಡುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ವರದಿಗಳು ಸೂಚಿಸುತ್ತಿವೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports