[ad_1]
Last Updated:
ಎಸ್‌ಆರ್‌ಟಿಸಿ ಬೆಂಗಳೂರು ಕೇಂದ್ರ ವಿಭಾಗವು ಅಕ್ಟೋಬರ್ 13ರಿಂದ 28ರವರೆಗೆ ಬೆಂಗಳೂರು–ಮೈಸೂರು ಪ್ಯಾಕೇಜ್ ಟೂರ್ ಆರಂಭಿಸಿದೆ. ವಯಸ್ಕರಿಗೆ ₹950 ಮತ್ತು 6ರಿಂದ 12 ವರ್ಷದ ಮಕ್ಕಳಿಗೆ ₹750 ದರ ನಿಗದಿಪಡಿಸಲಾಗಿದೆ
ಬೆಂಗಳೂರು: ಮೈಸೂರು ದಸರಾ ಸಂಭ್ರಮದ ನಡುವೆ ಪ್ರವಾಸಿಗರಿಗೆ (Tourist) ಅನುಕೂಲ ಕಲ್ಪಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬೆಂಗಳೂರು ಕೇಂದ್ರ ವಿಭಾಗವು ಬೆಂಗಳೂರು–ಮೈಸೂರು ಪ್ಯಾಕೇಜ್ ಟೂರ್ ಆರಂಭಿಸಿದೆ. ಅಕ್ಟೋಬರ್ 13ರಿಂದ 28ರವರೆಗೆ ಅಶ್ವಮೇಧ ಕ್ಲಾಸಿಕ್ ಬಸ್‌ನಲ್ಲಿ ಈ ಪ್ರವಾಸ ಸೇವೆ ಕಾರ್ಯನಿರ್ವಹಿಸಲಿದೆ. ಆದರೆ ಅಕ್ಟೋಬರ್ 20 ಮತ್ತು 21ರಂದು ಸೇವೆ ಇರುವುದಿಲ್ಲ. ಈ ಪ್ಯಾಕೇಜ್‌ನಲ್ಲಿ ಶ್ರೀರಂಗಪಟ್ಟಣದ ಐತಿಹಾಸಿಕ ತಾಣಗಳು, ಮೈಸೂರು ಅರಮನೆ, ಮೃಗಾಲಯ ಹಾಗೂ ಚಾಮುಂಡಿ ಬೆಟ್ಟ ಸೇರಿದಂತೆ ಹಲವು ಪ್ರಮುಖ ಸ್ಥಳಗಳನ್ನು ಒಂದೇ ದಿನದಲ್ಲಿ ವೀಕ್ಷಿಸಲು ಅವಕಾಶವಿದೆ. ವಯಸ್ಕರಿಗೆ ₹950 ಹಾಗೂ 6ರಿಂದ 12 ವರ್ಷದ ಮಕ್ಕಳಿಗೆ ₹750 ಟಿಕೆಟ್ ದರ ನಿಗದಿಪಡಿಸಲಾಗಿದೆ.
ಕೆಎಸ್‌ಆರ್‌ಟಿಸಿ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ಬೆಳಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಪ್ರಯಾಣ ಆರಂಭವಾಗಲಿದೆ. ರಾತ್ರಿ 10 ಗಂಟೆಗೆ ಬೆಂಗಳೂರಿಗೆ ಮರಳುವಂತೆ ಪ್ರವಾಸದ ವೇಳಾಪಟ್ಟಿ ರೂಪಿಸಲಾಗಿದೆ.
ಪ್ಯಾಕೇಜ್ ಟೂರ್ ವೇಳಾಪಟ್ಟಿ ಇಲ್ಲಿದೆ
- ಬೆಳಗ್ಗೆ 6ರಿಂದ 8: ಬೆಂಗಳೂರು–ನಿಮಿಷಾಂಬ ದೇವಸ್ಥಾನದ ಮಾರ್ಗದಲ್ಲಿ ಪ್ರಯಾಣ
- ಬೆಳಗ್ಗೆ 8ರಿಂದ 9: ನಿಮಿಷಾಂಬ ದೇವಸ್ಥಾನ ವೀಕ್ಷಣೆ ಮತ್ತು ಉಪಾಹಾರ
- ಬೆಳಗ್ಗೆ 9ರಿಂದ 11: ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಸ್ಥಾನ, ದರಿಯಾ ದೌಲತ್, ಗುಂಬಜ್ ಮತ್ತು ಸಂಗಮ
- ಬೆಳಗ್ಗೆ 11ರಿಂದ 11.30: ಶ್ರೀರಂಗಪಟ್ಟಣದಿಂದ ಮೈಸೂರಿಗೆ ಪ್ರಯಾಣ
- ಬೆಳಗ್ಗೆ 11.30ರಿಂದ ಮಧ್ಯಾಹ್ನ 12: ಸಂತ ಫಿಲೋಮಿನಾ ಚರ್ಚ್
- ಮಧ್ಯಾಹ್ನ 12ರಿಂದ 1: ಊಟದ ವಿರಾಮ
- ಮಧ್ಯಾಹ್ನ 1ರಿಂದ 2: ಕಾವೇರಿ ಆರ್ಟ್ ಗ್ಯಾಲರಿ ಮತ್ತು ಕ್ರಾಫ್ಟ್ ಎಂಪೋರಿಯಂ
- ಮಧ್ಯಾಹ್ನ 2ರಿಂದ ಸಂಜೆ 4: ಮೈಸೂರು ಅರಮನೆ
- ಸಂಜೆ 4ರಿಂದ 5.30: ಮೈಸೂರು ಮೃಗಾಲಯ
- ಸಂಜೆ 5.30ರಿಂದ ರಾತ್ರಿ 8: ಚಾಮುಂಡಿ ಬೆಟ್ಟ
- ರಾತ್ರಿ 8ರಿಂದ 10: ಎಕ್ಸ್‌ಪ್ರೆಸ್ ಹೈವೇ ಮೂಲಕ ಬೆಂಗಳೂರಿಗೆ ವಾಪಸ್ ಪ್ರಯಾಣ
ಕೆಎಸ್‌ಆರ್‌ಟಿಸಿ ನಿಗದಿಪಡಿಸಿರುವ ಪ್ಯಾಕೇಜ್ ಟೂರ್ ಟಿಕೆಟ್ ದರಗಳು ಹೀಗಿವೆ:
- ವಯಸ್ಕರು: ₹950
- 6ರಿಂದ 12 ವರ್ಷದ ಮಕ್ಕಳು: ₹750
ಈ ದರಗಳು ಅಕ್ಟೋಬರ್ 13ರಿಂದ 28ರವರೆಗೆ ಅನ್ವಯಿಸಲಿದ್ದು, ಅಕ್ಟೋಬರ್ 20 ಮತ್ತು 21ರಂದು ಪ್ಯಾಕೇಜ್ ಟೂರ್ ಇರುವುದಿಲ್ಲ ಎಂದು ನಿಗಮದ ಪ್ರಕಟಣೆ ತಿಳಿಸಿದೆ.
ಟಿಕೆಟ್ ಬುಕ್ಕಿಂಗ್ ಎಲ್ಲಿ?
www.ksrtc.in
www.ksrtc.karnataka.gov.in
ಸಂಪರ್ಕ ಸಂಖ್ಯೆಗಳು: 080-26252625, 7760990100, 7760990560, 7760990287.
ಒಂದೇ ದಿನದಲ್ಲಿ ಶ್ರೀರಂಗಪಟ್ಟಣ ಮತ್ತು ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬಯಸುವವರಿಗೆ ಈ ಪ್ಯಾಕೇಜ್ ಟೂರ್ ಅನುಕೂಲಕರ ಆಯ್ಕೆಯಾಗಲಿದೆ.
[ad_2]
Source link













