Darshan Vijaylakshmi: ಧರ್ಮಸ್ಥಳದಲ್ಲಿ ಮದುವೆ, ದರ್ಶನ್-ವಿಜಯಲಕ್ಷ್ಮಿ ದಾಂಪತ್ಯಕ್ಕೆ 23 ವರ್ಷ | | ACTPnews

ಧರ್ಮಸ್ಥಳದಲ್ಲಿ ಮದುವೆ, 23 ವರ್ಷದ ದಾಂಪತ್ಯ ಜೀವನ; ಪತಿ ನೆನಪಲ್ಲಿ ವಿಜಯಲಕ್ಷ್ಮಿ!


Last Updated:

ದರ್ಶನ್ ಮತ್ತು ವಿಜಯಲಕ್ಷ್ಮಿ ಅವರಿಗೆ ಮೇ-19 ವಿಶೇಷ ದಿನವೇ ಆಗಿದೆ. ಪ್ರತಿ ವರ್ಷವೂ ಇದನ್ನ ಅಷ್ಟೆ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಆದರೆ, ಈ ಸಲ ಇದು ಸಾಧ್ಯ ವಾಗೋದಿಲ್ಲ. ದರ್ಶನ್ ಇನ್ನು ಜೈಲಿನಲ್ಲಿಯೇ ಇದ್ದಾರೆ. ಇವರ ಮದುವೆಯ ಆ ದಿನದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಧರ್ಮಸ್ಥಳದಲ್ಲಿ ಮದುವೆ, 23 ವರ್ಷದ ದಾಂಪತ್ಯ ಜೀವನ; ಪತಿ ನೆನಪಲ್ಲಿ ವಿಜಯಲಕ್ಷ್ಮಿ!
ಧರ್ಮಸ್ಥಳದಲ್ಲಿ ಮದುವೆ, 23 ವರ್ಷದ ದಾಂಪತ್ಯ ಜೀವನ; ಪತಿ ನೆನಪಲ್ಲಿ ವಿಜಯಲಕ್ಷ್ಮಿ!

ಆಗ ಇನ್ನು ದರ್ಶನ್ (Darshan) ಅಭಿನಯ ಲಂಕೇಶ್ ಪತ್ರಿಕೆ ಚಿತ್ರ (Lankesh Patrike Movie) ರಿಲೀಸ್ ಆಗಿತ್ತು. ಈ ಸಿನಿಮಾ ನೋಡಿದ ಜನರಿಗೆ ದರ್ಶನ್ (Darshan) ಮದುವೆ ಆಗ್ತಿರೋ ವಿಷಯವೂ ಗೊತ್ತಾಗಿತ್ತು. ಆದರೆ, ಇವರ ಮದುವೆ ಸಿಂಪಲ್ ಆಗಿದೆ. ಧರ್ಮಸ್ಥಳದಲ್ಲಿಯೇ ಇವರು ಮದುವೆ ಆಗಿದ್ದಾರೆ. ಮೇ-19 ರಂದು ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಾಗೆ ಸರಳವಾಗಿ ಮದುವೆ (Marriage) ಆದ ಈ ಜೋಡಿಯ ದಾಂಪತ್ಯ ಜೀವನಕ್ಕೆ ಈಗ 23 ವರ್ಷ ತುಂಬಿದೆ. ಆದರೆ, ಈ ವರ್ಷ ಇದನ್ನ ಸೆಲೆಟ್ರೇಬ್ ಮಾಡೋಕೆ ದರ್ಶನ್ ಜೊತೆಗೆ ಇಲ್ವೇ ಇಲ್ಲ. ಇನ್ನೂ ಒಂದು ವರ್ಷ ಹೊರಗೆ ಬರುವ ಸಾಧ್ಯತೆನೂ ಇಲ್ಲ ಬಿಡಿ….

23 ನೇ ವಿವಾಹ ವಾರ್ಷಿಕೋತ್ಸ….

ದರ್ಶನ್ ಮತ್ತು ವಿಜಯಲಕ್ಷ್ಮಿ 19, 2003 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ, ಇವರ ಮದುವೆ ಅದ್ದೂರಿ ಆಗಿಯೇ ಏನು ನಡೆದಿಲ್ಲ.
darshan Vijayalakshmi 23rd wedding anniversary latest Updates

23 ನೇ ವಿವಾಹ ವಾರ್ಷಿಕೋತ್ಸ….

(ಚಿತ್ರ ಕೃಪೆ: ವಿಜಯಲಕ್ಷ್ಮಿ ದರ್ಶನ್ ಇನ್‌ಸ್ಟಾಗ್ರಾಮ್)

ತಂಬಾನೆ ಸಿಂಪಲ್ ಆಗಿಯೇ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ, ಈ ವೇಳೆಗಾಗಲೇ ದರ್ಶನ್ ಅಭಿನಯದ ಕರಿಯಾ ಚಿತ್ರ ಬಂದಿತ್ತು. ಲಂಕೇಶ್ ಪತ್ರಿಕೆ ಚಿತ್ರವೂ ರಿಲೀಸ್ ಆಗಿತ್ತು.

ಯಾವ ಮುಹೂರ್ತದಲ್ಲಿ ಮದುವೆ

ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ಮದುವೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದಿದೆ. ಮೇ-19, 2003 ರಂದು ಇಲ್ಲಿಯ ವಸಂತ್ ಮಹಲ್‌ನಲ್ಲಿಯೇ ಇವರ ವಿವಾಹ ನಡೆದಿದೆ.

ಬೆಳಗ್ಗೆ 9:10 ರಿಂದ 9:50 ರ ನಡುವಿನ ಶುಭ ಮಿಥುನ ಲಗ್ನದಲ್ಲಿ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಈ ಮದುವೆ ಸರಳವಾಗಿಯೇ ಆಗಿದೆ. ಪ್ರತಿ ವರ್ಷವೂ ಇವರು ತಮ್ಮ ಈ ಒಂದು ವಿವಾಹ ವಾರ್ಷಿಕೋತ್ಸವವನ್ನ ಕೇಕ್ ಕಟ್ ಮಾಡಿಯೇ ಆಚರಣೆ ಮಾಡಿದ್ದರು.

ಕಳೆದ ವರ್ಷ ಹೇಗಿತ್ತು…

ಆದರೆ, ಕಳೆದ ವರ್ಷ 2025 ರಂದು ಇವರು ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿದ್ದರು. ಕೇಕ್ ಕಟ್ ಮಾಡಿ ಸೆಲೆಬ್ರೇಟ್ ಮಾಡಿದ್ದರು.

darshan Vijayalakshmi 23rd wedding anniversary latest Updates

ಕಳೆದ ವರ್ಷ ಹೇಗಿತ್ತು…

ಆದರೆ, ಈ ವರ್ಷ ಅದು ಸಾಧ್ಯವೇ ಇಲ್ಲ ನೋಡಿ. ರೇಣುಕಾಸ್ವಾಮಿ ಕೇಸ್ ಹಿನ್ನೆಲೆಯಲ್ಲಿ ದರ್ಶನ್ ಪರಪ್ಪನ ಅಗ್ರಹಾರದಲ್ಲಿಯೇ ಇದ್ದಾರೆ. ಜೈಲಿನ ನಿಯಮದ ಅಡಿಯಲ್ಲಿ ವಿಶೇಷ ಮುಖಾಮುಖಿ ಭೇಟಿಗಾಗಿಯೇ ಅನುಮತಿ ಕೂಡ ಕೋರಿದ್ದಾರೆ ಅನ್ನುವ ಸುದ್ದಿನೂ ಇದೆ.

ಎಮೋಷನಲ್ ಪೋಸ್ಟ್

ವಿಜಯಲಕ್ಷ್ಮಿ ದರ್ಶನ್ ಅವರು ಎಮೋಷನಲ್ ಪೋಸ್ಟ್ ಕೂಡ ಹಾಕಿದ್ದರು. ಲಂಕೇಶ್ ಪತ್ರಿಕೆಯ ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು, ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು ಅನ್ನುವ ಹಾಡಿನ ಸಾಲುಗಳನ್ನೆ ಬರೆದಿದ್ದಾರೆ. ಈ ಂಮೂಲಕ ಪತಿಯನ್ನ ಮಿಸ್ ಮಾಡಿಕೊಂಡಿದ್ದಾರೆ.

ಇದರೊಟ್ಟಿಗೆ ವಿಜಯಲಕ್ಷ್ಮಿ ಅವರು ಪತಿ ದರ್ಶನ್ ಅವರ ಒಂದು ಚೆಂದದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋ ಆಗಿದೆ. ವಿಜಯಲಕ್ಷ್ಮಿ ಅವರ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports