Last Updated:
ಪ್ರದೋಷ್ ಹೇಳಿಕೆ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಘಟನೆಗಳ ಕುರಿತು ಹೇಳಿಕೆ ಮುಂದುವರಿಯುವ ಸಾಧ್ಯತೆಯಿದೆ. ವಿಶೇಷವಾಗಿ ಶರಣಾಗತಿ ಪ್ರಕ್ರಿಯೆ ಹಾಗೂ ಮೈಸೂರಿಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಸೋಮವಾರದ ವಿಚಾರಣೆಯಲ್ಲಿ ಮಾಹಿತಿ ದಾಖಲಾಗುವ ನಿರೀಕ್ಷೆಯಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ವಿಚಾರಣೆ ಇದೀಗ ಮತ್ತೊಂದು ಮಹತ್ವದ ಹಂತ ತಲುಪಿದೆ. ಪ್ರಕರಣದಲ್ಲಿ 14ನೇ ಆರೋಪಿ ಆಗಿದ್ದ ಪ್ರದೋಷ್ ರಾವ್ (Pradosh Rao) ಮಾಫಿ ಸಾಕ್ಷಿಯಾಗಿದ್ದು, ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಸೆಪ್ಟೆಂಬರ್ 28ರಿಂದ ನಡೆಯುತ್ತಿದೆ. ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಇನ್-ಕ್ಯಾಮೆರಾ ವಿಚಾರಣೆ ನಡೆಯುತ್ತಿದ್ದು, ಮೂರು ದಿನಗಳಾದರೂ ಪ್ರದೋಷ್ ಸಂಪೂರ್ಣ ಹೇಳಿಕೆ ದಾಖಲಾಗಿಲ್ಲ. ಹೀಗಾಗಿ ನ್ಯಾಯಾಲಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.
ಸೆಪ್ಟೆಂಬರ್ 28ರಂದು ಪ್ರದೋಷ್ ನ ಬಿಗಿ ಭದ್ರತೆಯ ನಡುವೆ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಅಂದು ಸುಮಾರು ಮೂರು ಗಂಟೆಗಳ ಕಾಲ ಹೇಳಿಕೆ ದಾಖಲಿಸಲಾಗಿತ್ತು. ಹೇಳಿಕೆ ದೀರ್ಘವಾಗಿದ್ದ ಹಿನ್ನೆಲೆಯಲ್ಲಿ ಮುಂದಿನ ದಿನವೂ ವಿಚಾರಣೆ ಮುಂದುವರಿಯಿತು.
ಪ್ರದೋಷ್ ಹೇಳಿಕೆ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಘಟನೆಗಳ ಕುರಿತು ಹೇಳಿಕೆ ಮುಂದುವರಿಯುವ ಸಾಧ್ಯತೆಯಿದೆ. ವಿಶೇಷವಾಗಿ ಶರಣಾಗತಿ ಪ್ರಕ್ರಿಯೆ ಹಾಗೂ ಮೈಸೂರಿಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಸೋಮವಾರದ ವಿಚಾರಣೆಯಲ್ಲಿ ಮಾಹಿತಿ ದಾಖಲಾಗುವ ನಿರೀಕ್ಷೆಯಿದೆ.
ಮೂರು ದಿನಗಳ ಕಾಲ ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆದಿದ್ದರೂ ಸಂಪೂರ್ಣ ಹೇಳಿಕೆ ಇನ್ನೂ ಮುಕ್ತಾಯವಾಗಿಲ್ಲ. ಹೀಗಾಗಿ 59ನೇ ಸಿಸಿಹೆಚ್ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಸೋಮವಾರದ ವಿಚಾರಣೆಯಲ್ಲಿ ಶರಣಾಗತಿ ಪ್ರಕ್ರಿಯೆ, ಮೈಸೂರು ಸೇರಿದಂತೆ ಇನ್ನೂ ಬಾಕಿ ಇರುವ ಪ್ರಮುಖ ಘಟನೆಗಳ ಕುರಿತು ಪ್ರದೋಷ್ ಹೇಳಿಕೆ ದಾಖಲಾಗುವ ಸಾಧ್ಯತೆಯಿದೆ.