ದರ್ಶನ್ ಭೇಟಿ ಬಳಿಕ ಧನ್ವೀರ್ ಕೊಟ್ಟ ರಿಯಾಕ್ಷನ್ ಏನು?
ಆದರೆ, ಇಲ್ಲಿವರೆಗೂ ಏನ್ ಮಾತನಾಡಿದ್ದೇವೆ ಅಂತ ಧನ್ವೀರ್ ಹೆಚ್ಚಾಗಿ ಏನೂ ಹೇಳಿಕೊಂಡಿಲ್ಲ. ಈಗಲೂ ಅಷ್ಟೆನೆ ನೋಡಿ,
ದರ್ಶನ್ರನ್ನ ಧನ್ವೀರ್ ಗೌಡ ಮೀಟ್ ಆಗಿಯೇ ಬಂದಿದ್ದಾರೆ. ಮಾತನಾಡಿಯೂ ಬಂದಿದ್ದಾರೆ. ಅವರ ಆರೋಗ್ಯವನ್ನು ವಿಚಾರಸಿದ್ದಾರೆ.
ಆದರೆ, ಹಿಂದೆ ಹಿಂದೆ ಕ್ಯಾಮರಾ ಬರ್ತಿದೆ ಅನ್ನುವ ಕಲ್ಪನೆ ಇತ್ತೋ ಇಲ್ವೋ. ‘ದರ್ಶನ್ ಸರ್ ಹೇಗಿದ್ದಾರೆ” ಅನ್ನು ಪ್ರಶ್ನೆಗೆ ಧನ್ವೀರ್ ಮೊದಲು ಶಾಕ್ ಕೂಡ ಆಗಿದ್ದಾರೆ ನೋಡಿ.
ದರ್ಶನ್ ಹೇಗಿದ್ದಾರೆ ಅಂತ ಕೇಳಿದಾಕ್ಷಣ ಧನ್ವೀರ್ ಮೊದಲು ಶಾಕ್ ಆಗಿದ್ದಾರೆ. ಅದು ಇವರ ಮುಖದಲ್ಲಿಯೇ ಕಾಣಿಸುತ್ತದೆ. ಆದರೆ, ಆ ಕೂಡಲೇ ಸ್ಮೈಲ್ ಮಾಡಿದ ಧನ್ವೀರ್, ‘ಪರವಾಗಿಲ್ಲ’ ಅಂತಲೇ ಹೇಳಿದ್ದಾರೆ.
ಹೀಗೆ ಧ್ವನೀರ್ ಕೊಟ್ಟಿರೋ ರಿಯಾಕ್ಷನ್ ವಿಡಿಯೋವನ್ನ TV-19 ಚಾನೆಲ್ ತನ್ನ ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಂಡಿದೆ. ದರ್ಶನ್ ಭೇಟಿ ಬಳಿಕ ಧನ್ವೀರ್ ರಿಯಾಕ್ಷನ್ ಅಂತಲೂ ಬರೆದುಕೊಂಡಿದೆ.
ಧನ್ವೀರ್ ಮೊದಲ ರಿಯಾಕ್ಷನ್
ದರ್ಶನ್ ಮತ್ತು ಧನ್ವೀರ್ ದೂರ ಆದರು. ಇವರ ನಡುವೆ ಏನೋ ಆಗಿದೆ. ಈ ರೀತಿ ಸುದ್ದಿ ಹರಿದಾಡ್ತಾನೇ ಇತ್ತು. ಇದಕ್ಕೆ ಪೂರಕ ಅನ್ನುವ ಹಾಗೆ ಧನ್ವೀರ್ ಕೂಡ ಪರಪ್ಪನ ಅಗ್ರಹಾರಕ್ಕೆ ಬಂದಿರೋ ಸುದ್ದಿಗಳು ಇರಲಿಲ್ಲ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡಿರಲಿಲ್ಲ.
ಧನ್ವೀರ್ ಪರಪ್ಪನ ಅಗ್ರಹಾರಕ್ಕೆ ಬಂದಿರೋ ವಿಡಿಯೋ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದ ಇನ್ಸ್ಟಾಗ್ರಾಮ್ ಪೇಜ್ ಗಳಲ್ಲಿ ಧನ್ವೀರ್ ಪರಪ್ಪನ ಅಗ್ರಹಾರಕ್ಕೆ ಬಂದಿರೋ ವಿಡಿಯೋ ಶೇರ್ ಆಗಿವೆ.
ಸುಳ್ಳು ಸುದ್ದಿಗೆ ಬ್ರೇಕ್
ಧನ್ವೀರ್ ಹಾಗೂ ಅವರ ಸ್ನೇಹಿತರು ಈ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾರು ಇಳಿದು ಪರಪ್ಪನ ಅಗ್ರಹಾರದ ಕಡೆಗೆ ಹೋಗುವ ದೃಶ್ಯದ ಈ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿವೆ.
ದರ್ಶನ್ ಮತ್ತು ಧನ್ವೀರ್ ದೂರ ಅನ್ನುವ ಸುದ್ದಿಗಳು ಹೆಚ್ಚಾಗಿಯೇ ಹರಿದಾಡಿದ್ದವು. ಆದರೆ, ಇದೆಲ್ಲ ಸುಳ್ಳು ಸುದ್ದಿ, ಇದರಲ್ಲಿ ನಿಜ ಇಲ್ವೆ ಇಲ್ಲ ಅನ್ನುವ ಅರ್ಥದಲ್ಲಿಯೇ ಧನ್ವೀರ್ ಈ ವಿಡಿಯೋದಲ್ಲಿ ಕಾಣಿಸಿಕೊಂಡಂತೆ ಇದೆ.
ಈ ಒಂದು ವಿಡಿಯೋ ಹಂಚಿಕೊಂಡವರು ಕೂಡ ಇದೇ ಅರ್ಥದಲ್ಲಿಯೇ ವಿಡಿಯೋಗಳಿಗೆ ಟೆಕ್ಸ್ಟ್ ಹಾಕಿದ್ದಾರೆ. ಇನ್ನುಳಿದಂತೆ ಧನ್ವೀರ್ ಮತ್ತು ದರ್ಶನ್ ನಡುವೆ ಎಲ್ಲವು ಚೆನ್ನಾಗಿದೆ ಅನ್ನುವ ಅರ್ಥದಲ್ಲಿಯೇ ವಿಡಿಯೋಗಳು ಈಗ ಹರಿದಾಡುತ್ತಿವೆ ಅಂತ ಹೇಳಬಹುದು.













