Last Updated:
Darshan Case: ಇತ್ತ ಮಾಫಿ ಸಾಕ್ಷಿಯಾಗೋಕೆ ಆರೋಪಿಗಳ ಮಧ್ಯೆಯೇ ತಿಕ್ಕಾಟ! ಅತ್ತ ದರ್ಶನ್-ಪವಿತ್ರಾಗೆ ಢವ ಢವ, ಮಾಫಿ ಸಾಕ್ಷಿಯಾಗೋದ್ಯಾರು?
ಜೈಲಿನಲ್ಲಿರುವ ನಟ ದರ್ಶನ್ (Darshan) ಹಾಗೂ ಪವಿತ್ರಾಗೌಡಗೆ (Pavithra Gowda) ಮತ್ತೆ ಟೆನ್ಷನ್ ಶುರುವಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy Case) ಮೂವರು ಆರೋಪಿಗಳು ಮಾಫಿ ಸಾಕ್ಷಿಯಾಗಲು ಒಪ್ಪಿ ಕೋರ್ಟ್‌ಗೆ ಅರ್ಜಿ ಹಾಕೊಂಡಿದ್ದಾರೆ.
A14 ಪ್ರದೂಷ್, A8 ರವಿಶಂಕರ್ ಹಾಘೂ A10 ವಿನಯ್ CrPC 307 ಅಡಿಯಲ್ಲಿ ಮಾಫಿ ಸಾಕ್ಷಿಗಾಗಿ ಅರ್ಜಿ ಹಾಕೊಂಡಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್, ಪ್ರದೂಷ್ ಮಾಫಿ ಸಾಕ್ಷಿಗೆ ಒಪ್ಪಿಗೆ ಸೂಚಿಸಿದೆ.
ಪ್ರದೂಷ್ ಸಲ್ಲಿಸಿರುವ ಅರ್ಜಿಗೆ ಉಳಿದ ಆರೋಪಿಗಳ ಆಕ್ಷೇಪ ಪರಿಗಣಿಸಬೇಕೇ ಬೇಡವೇ ಎಂಬ ಬಗ್ಗೆ ಸೋಮವಾರ ಕೋರ್ಟ್ ಆದೇಶ ಮಾಡಲಿದೆ. 59ನೇ ಸೆಷನ್ಸ್ ಕೋರ್ಟ್ ವಿಚಾರಣೆ ಸೋಮವಾರಕ್ಕೆ ಮುಂದೂಡಿದೆ.
ಆರೋಪಿ 10 ವಿನಯ್ ಕೂಡ ಮಾಫಿ ಸಾಕ್ಷಿ ಆಗೋದಾಗಿ ಅರ್ಜಿ ಸಲ್ಲಿಸುತ್ತೇವೆ. ಮಾಫಿ ಸಾಕ್ಷಿ ಅರ್ಜಿ ಸಲ್ಲಿಸುವ ಮುನ್ನ ಕೆಲ ಕಾನೂನಾತ್ಮಕ ವಾದಕ್ಕೆ ಮನವಿ ಮಾಡಿದ್ದಾರೆ. ಮಾಫಿ ಸಾಕ್ಷಿ ಅರ್ಜಿಯನ್ನು ಪ್ರಾಸಿಕ್ಯೂಷನ್ ನಿಂದ ಸಲ್ಲಿಕೆ ಆಗಬೇಕು. ಆರೋಪಿಗಳಿಂದ ಮಾಫಿ ಸಾಕ್ಷಿ ಅರ್ಜಿ ಸಲ್ಲಿಕೆ ಆಗಬಾರದು ಎಂದು ರಂಗನಾಥರೆಡ್ಡಿ ವಾದ ಮಾಡಿದ್ದಾರೆ.
ಪ್ರಕರಣದಲ್ಲಿ ಯಾವ ಆರೋಪಿಯನ್ನ ಮಾಫಿ ಸಾಕ್ಷಿ ಮಾಡಬೇಕು ಎಂದು ಪ್ರಾಸಿಕ್ಯೂಷನ್ ನಿರ್ಧಾರ ಮಾಡಬೇಕು. ಯಾವುದೋ ಆರೋಪಿ ಸಲ್ಲಿಸಿದ ಮಾಫಿ ಸಾಕ್ಷಿ ಅರ್ಜಿಗೆ ಪ್ರಾಸಿಕ್ಯೂಷನ್ ಒಪ್ಪಿಗೆ ನೀಡಬಾರದು. ಆರೋಪಿಗಳ ಪಾತ್ರದ ಮೇಲೆ ಮಾಫಿ ಸಾಕ್ಷಿಗೆ ಪ್ರಾಸಿಕ್ಯೂಷನ್ ನಿರ್ಧಾರ ಮಾಡಬಹುದು ಎಂದು ವಕೀಲ ರಂಗನಾಥ್ ರೆಡ್ಡಿ ವಾದ ಮಂಡಿಸಿದ್ದಾರೆ.
ಎ10 ವಿನಯ್ ಕೋರ್ಟ್ ಗೆ ಮಾಫಿ ಸಾಕ್ಷಿ ಆಗೋದಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಈಗ ನಟ ದರ್ಶನ್ ಪವಿತ್ರಗೌಡಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಇದುವರೆಗೂ ಇಬ್ಬರು ಆರೋಪಿಗಳು ಮಾಫಿ ಸಾಕ್ಷಿ ಆಗೋದಾಗಿ ಅರ್ಜಿ ಸಲ್ಲಿಸಿದ್ದಾರೆ. A14 ಪ್ರದೋಷ್ ಹಾಗೂ A10 ವಿನಯ್ ಇಂದ ಅರ್ಜಿ ಸಲ್ಲಿಕೆಯಾಗಿದೆ.
ವರದಿ: ಮಂಜುನಾಥ್ ಎನ್. ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು
Bangalore,Karnataka














