Last Updated:
Darshan Case: ರೇಣುಕಾಸ್ವಾಮಿ ಕೊಲೆ ನಡೆದಿದ್ದು ಹೇಗೆ? ನೇಣು ಹಾಕೋಕೆ ನಡೆದಿತ್ತು ಪ್ರಯತ್ನ, ಎದೆಗೆ ಎರಡೂ ಕಾಲಿನಿಂದ ಒದ್ದಿದ್ದ ದರ್ಶನ್! ಮಾಫಿ ಸಾಕ್ಷಿ ಪ್ರದೋಶ್ ಬಿಚ್ಚಿಟ್ಟ ಕೊಲೆಯ ಇಂಚಿಂಚು ಮಾಹಿತಿ!
ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ಶಾಕಿಂಗ್ ಮಾಹಿತಿ ರಿವೀಲ್ ಆಗಿದೆ. ಈಗಾಗಲೇ ಮಾಫಿ ಸಾಕ್ಷಿ (Approver) ವಿಚಾರವಾಗಿ ಸಾಕಷ್ಟು ಚರ್ಚೆಯಾಗುತ್ತಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗ ಒಟ್ಟು 11 ಪುಟಗಳ ವಿಸ್ತೃತ ಅಂಶಗಳನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿಯಲ್ಲಿ ಪ್ರಕರಣದ ಇಂಚಿಂಚು ಘಟನೆಯನ್ನು ಕೂಡಾ ಅರೋಪಿ 14 ಪ್ರದೋಶ್ (Pradosh) ವಿವರಿಸಿದ್ದು ನ್ಯೂಸ್18 ಕನ್ನಡಕ್ಕೆ ಮಾಹಿತಿ ಲಭ್ಯವಾಗಿದೆ.














