Darshan: ವಾರಕ್ಕೆ ಮೂರು ಪುಸ್ತಕ ಓದುತ್ತಿದ್ದಾರಂತೆ ದರ್ಶನ್, ಕಂಬಿ ಹಿಂದೆ ರೀಡಿಂಗ್ ಟೈಮ್ | | ACTPnews

ದರ್ಶನ್


Last Updated:

Darshan: ನಟ ದರ್ಶನ್ ಅವರು ವಾರದಲ್ಲಿ ಈಗ ಮೂರು ಪುಸ್ತಕಗಳನ್ನು ಓದುತ್ತುದ್ದಾರಂತೆ. 1 ವರ್ಷದ ತನಕ ಜೈಲಿನಿಂದ ಹೊರ ಬರುವ ಸಾಧ್ಯತೆ ಇಲ್ಲದ ಕಾರಣ ನಟ ರೀಡಿಂಗ್​​ ಮೂಲಕ ಸಮಯ ಕಳೆಯುತ್ತಿದ್ದಾರೆ.

ದರ್ಶನ್
ದರ್ಶನ್

ನಟ ದರ್ಶನ್​ಗೆ (Darshan) ಸುಪ್ರೀಂ ಕೋರ್ಟ್​ನಲ್ಲಿ (Supreme Court) ಜಾಮೀನು (Bail) ನಿರಾಕರಣೆಯಾಗಿದ್ದು ಅವರು ಒಂದು ವರ್ಷದ ಕಾಲ ಜೈಲಿನಲ್ಲಿರುವು (Jail) ಫಿಕ್ಸ್ ಆಗಿದೆ. ರೇಣುಕಾಸ್ವಾಮಿ ಕೇಸ್​​ ಒಂದು ವರ್ಷದಲ್ಲಿ ಮುಗಿಸುವಂತೆ ಸುಪ್ರೀಂ ಕೂಡಾ ನಿರ್ದೇಶನ ನೀಡಿದೆ. ಹೀಗಿರುವಾಗ ಬೇರೆ ದಾರಿ ಇಲ್ಲ ಎನ್ನುವಂತೆ ದರ್ಶನ್ ಕಂಬಿ ಹಿಂದೆಯೇ ಇದ್ದಾರೆ.

ಹೀಗಿರುವಾಗಲೇ ಸಮಯ ಕಳೆಯುವುದಕ್ಕಾಗಿ ಈಗ ದರ್ಶನ್ ಅವರು ಪುಸ್ತಕಗಳ ಮೊರೆ ಹೋಗಿದ್ದಾರೆ. ಜೈಲಿನಲ್ಲಿದ್ದುಕೊಂಡೇ ನಟ ಹಲವಾರು ಪುಸ್ತಕಗಳನ್ನು ಓದುತ್ತಿದ್ದಾರೆ ಎಂದು ಹೇಳಲಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಪುಸ್ತಕದ ಮೊರೆ ಹೋಗಿದ್ದು, ಆರೋಪಿ ಪವಿತ್ರಾಗೌಡ ಬರವಣಿಗೆಯ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಜೈಲಿನಲ್ಲಿರುವ ದರ್ಶನ್, ಕಾಲ ಕಳೆಯಲು ಪುಸ್ತಕದ ಮೊರೆ ಹೋಗಿದ್ದಾರೆ. ಸಹ ಕೈದಿಗಳೊಡನೆ ಒಂದೇ ಬ್ಯಾರಕ್‌ನಲ್ಲಿದ್ದು, ವಾರಕ್ಕೆ 2-3 ಪುಸ್ತಕ ಓದುತ್ತಿದ್ದಾರಂತೆ. ಎ1 ಪವಿತ್ರಾ ಗೌಡ ಪರಪ್ಪನ ಅಗ್ರ ಹಾರ ಜೈಲಿನಲ್ಲಿದ್ದು, ಬರವಣಿಗೆಯ ಮೊರೆ ಹೋಗಿದ್ದಾರೆ.

ದರ್ಶನ್​ಗೆ ಇಲ್ಲ ಜಾಮೀನು

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಮಹತ್ವದ ತೀರ್ಪು ಇದೀಗ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ಐವರು ಪ್ರಮುಖ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.

ಪ್ರಕರಣದ ಆರೋಪಿಗಳಾದ ಪವನ್, ರಾಘವೇಂದ್ರ, ನಂದೀಶ್, ವಿನಯ್ ಮತ್ತು ಧನರಾಜ್ ಅವರಿಗೆ ಸೆಷನ್ಸ್ ಕೋರ್ಟ್ ಈ ಹಿಂದೆ ಜಾಮೀನು ಮಂಜೂರು ಮಾಡಿತ್ತು. ಈ ಆರೋಪಿಗಳು ಹೊರಗಿದ್ದರೆ ಸಾಕ್ಷ್ಯ ನಾಶಪಡಿಸುವ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿತ್ತು. ಆದರೆ ಆ ವಾದವನ್ನು ಹೈಕೋರ್ಟ್ ಸಂಪೂರ್ಣವಾಗಿ ಒಪ್ಪದೇ ಜಾಮೀನು ಆದೇಶವನ್ನು ಎತ್ತಿಹಿಡಿದಿದೆ. ಆರೋಪಿಗಳಾದ ರಾಘವೇಂದ್ರ, ಧನರಾಜ್ ಹಾಗೂ ವಿನಯ್ ಪರವಾಗಿ ಹಿರಿಯ ವಕೀಲ ರಂಗನಾಥ್ ರೆಡ್ಡಿ ವಾದ ಮಂಡಿಸಿದ್ದರು.

ನ್ಯೂಸ್ 18 ಜೊತೆ ಮಾತನಾಡಿದ ಹಿರಿಯ ವಕೀಲ ರಂಗನಾಥ್ ರೆಡ್ಡಿ, ಈ ಆದೇಶವು ದರ್ಶನ್ ಹೊರತುಪಡಿಸಿ ಉಳಿದ ಆರೋಪಿಗಳಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ. ಅವರ ಪ್ರಕಾರ, ಈ ಹಿಂದೆ ಸೆಷನ್ಸ್ ಕೋರ್ಟ್ ನೀಡಿದ್ದ ಜಾಮೀನಿನ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದರೂ, ಈಗ ಹೈಕೋರ್ಟ್ ಅದನ್ನು ಎತ್ತಿಹಿಡಿದಿದೆ.

ಇದನ್ನೂ ಓದಿ: Vijay Kollur Visit: ‘ವಿಜಯ್​​ಗಾಗಿ ವಿಶೇಷ ಪೂಜೆ ಇಲ್ಲ’ ಕೊಲ್ಲೂರು ಅರ್ಚಕರು ಹೇಳಿದ್ದೇನು?

ಹಾಗೆಯೇ ದರ್ಶನ್ ಕಡೆಯವರಿಗೂ ಸಲಹೆ ಕೊಟ್ಟಿದ್ದೆ, ಅವರ ಪರ ವಕೀಲರು ಅರ್ಜಿ ಸಲ್ಲಿಕೆ ಮಾಡಬಹುದು. ಆದ್ರೆ ದರ್ಶನ್ ಅವರು ಅವಸರ ಪಟ್ಟು ಸುಪ್ರೀಂಕೋರ್ಟ್ ಗೆ ಹೋದ್ರು ಅನ್ಸುತ್ತೆ. ಹೀಗಾಗಿ ಈಗ ದರ್ಶನ್‌ಗೆ ಇಂದಿನ ಹೈಕೋರ್ಟ್ ಆದೇಶ ಅನ್ವಯ ಆಗುವು ಸಾಧ್ಯತೆ ಕಡಿಮೆ. ಜೊತೆಗೆ ದರ್ಶನ್ ಸುಪ್ರೀಂಕೋರ್ಟ್ ಗೆ ಹೋಗಿರಲಿಲ್ಲ ಅಂದ್ರೆ ಈಗ ದರ್ಶನ್ ಗೆ ಜಾಮೀನು ಪಡೆದುಕೊಳ್ಳಬಹುದಿತ್ತುಎಂದು ಹಿರಿಯ ವಕೀಲ ರಂಗನಾಥ್ ರೆಡ್ಡಿ ತಿಳಿಸಿದ್ದಾರೆ .



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed