Last Updated:
Darshan: ದರ್ಶನ್ ಆತ್ಮಹತ್ಯೆ ಯತ್ನ ವದಂತಿ ವಿಚಾರವಾಗಿ ಈಗ ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದಾರೆ. ಅವರು ಹೇಳಿದ್ದೇನು?
ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪದ ಮೇಲೆ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ (Darshan) ಅವರ ಜಾಮೀನು ಅರ್ಜಿ ಇತ್ತೀಚೆಗೆ ಸುಪ್ರೀಂ ಕೋರ್ಟ್ನಲ್ಲಿ (Supreme Court) ರಿಜೆಕ್ಟ್ ಆಗಿತ್ತು. ಅಷ್ಟೇ ಅಲ್ಲದೆ ಅವರು ಇನ್ನೂ ಒಂದು ವರ್ಷದ ತನಕ ಜಾಮೀನಿಗೆ ಅರ್ಜಿ ಕೂಡಾ ಸಲ್ಲಿಸುವ ಹಾಗಿಲ್ಲ. ಹೀಗಿರುವಾಗಲೇ ದರ್ಶನ್ ಅವರು ಜೈಲಿನಲ್ಲಿ ಆತ್ಯಹತ್ಯೆಗೆ ಪ್ರಯತ್ನಿಸಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು.
ದರ್ಶನ್ ಆತ್ಮಹತ್ಯೆ ಯತ್ನ ವದಂತಿ ವಿಚಾರವಾಗಿ ಈಗ ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದಾರೆ. ಈಗಾಗಲೇ ಈ ಸಂಬಂಧ ಕೇಳಿ ಬಂದ ಎಲ್ಲಾ ವದಂತಿಗಳಿಗೆ, ಸುದ್ದಿಗಳಿಗೆ ಅವರು ಕ್ಲಾರಿಟಿ ಕೊಟ್ಟರು.
ಈ ಸಂಬಂಧವಾಗಿ ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಆ ವಿಚಾರ ನಾನು ಕೇಳ್ಪಟ್ಟಾಗ, ಅಧಿಕಾರಿಗಳಿಂದ ಮೌಖಿಕವಾಗಿ ಕೇಳಿದ್ದೆ. ಆ ರೀತಿ ಘಟನೆ ನಡೆದಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಹೊರತು ಇನ್ನೇನೂ ವಿಚಾರ ಇಲ್ಲ ಎಂದಿದ್ದಾರೆ.
ನಟ ದರ್ಶನ್ ತೂಗುದೀಪ ಅವರ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಗಳನ್ನು ಡಿಜಿಪಿ ಅಲೋಕ್ ಕುಮಾರ್ ಕೂಡಾ ತಳ್ಳಿಹಾಕಿದ್ದಾರೆ. ಪ್ರಸ್ತುತ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ತೂಗುದೀಪ ‘ಆರೋಗ್ಯವಾಗಿದ್ದಾರೆ’ ಮತ್ತು ಅವರ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಗಳು ‘ಸಂಪೂರ್ಣವಾಗಿ ಆಧಾರರಹಿತ’ ಎಂದು ಅವರು ಹೇಳಿದ್ದರು.
“ದರ್ಶನ್ ತನಗೆ ತಾನೇ ಹಾನಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿಗಳು ಸತ್ಯಕ್ಕೆ ದೂರ. ಅವರು ಚೆನ್ನಾಗಿದ್ದಾರೆ” ಎಂದು ಡಿಜಿಪಿ ಹೇಳಿದ್ದಾರೆ.
ದರ್ಶನ್ ಗೆ ಪ್ರತಿ ಹಂತದಲ್ಲೂ ಕಾನೂನು ಹೋರಾಟ ಹಿನ್ನಡೆ ಆಗುತ್ತಿದೆ. ಈ ನಡುವೆ ಜೈಲಾಧಿಕಾರಿಗಳ ಬಳಿ ಒಳ ಸಂದರ್ಶನಕ್ಕೆ ಮನವಿ ಮಾಡಿದ್ದು, ಅವಕಾಶ ಕೊಡಲಾಗಿದೆ. ನಟ ದರ್ಶನ್ ಒಳ ಸಂದರ್ಶನ ಭೇಟಿಗೆ ಜೈಲರ್ ಅವಕಾಶ ನೀಡಲಾಗಿದ್ದು ಪತ್ನಿ ಮಗನ ಬಿಗಿದಪ್ಪಿ ದರ್ಶನ್ ಭಾವುಕರಾದರೆ ಪತ್ನಿ ಮಗ ಕಣ್ಣೀರಿಟ್ಟಿದ್ದಾರೆ. ಸುಪ್ರಿಂ ಕೋರ್ಟ್ ನಲ್ಲಿ ಜಾಮೀನು ತಿರಸ್ಕೃತ ಬಳಿಕ ಮಾನಸಿಕವಾಗಿ ನೊಂದಿರೋ ದರ್ಶನ್ ಪತ್ನಿ ಮಗನ ಭೇಟಿಗೆ ಕಾತುರದಿಂದ ಕಾಯುತ್ತಿದ್ದರು.
ದರ್ಶನ್-ಜಿ ಪರಮೇಶ್ವರ್
ಓರ್ವ ಅಡಿಷನಲ್ ಸೂಪರ್ಡೆಂಟ್ ಸಮ್ಮುಖದಲ್ಲಿ ದರ್ಶನ್ ಭೇಟಿಗೆ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ಮ್ಯಾನೇಜರ್ ನಾಗರಾಜು ಸೇರಿ ಓರ್ವ ಮಹಿಳೆ ಭೇಟಿ ಮಾಡಿದ್ದಾರೆ. ಇನ್ನು ನಟ ದರ್ಶನ್ ಬ್ಯಾರಕ್ ಒಳಗೆ ಕೇವಲ ಹಣ್ಣುಗಳಿಗೆ ಮಾತ್ರ ಅವಕಾಶ ಕೊಡಲಾಗಿತ್ತು. ಪತ್ನಿ ವಿಜಯಲಕ್ಷ್ಮಿ ಸೇರಿ ಮಗ ವಿನೀಶ್ ಹೋಗ್ತಿದ್ದಂತೆ ಭಾವುಕನಾದ ದರ್ಶನ್ ಬಿಗಿದಪ್ಪಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.
ಅಲ್ಲದೆ ಪತ್ನಿ ಮಗ ಕೂಡಾ ದರ್ಶನ್ ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಪತಿ ದರ್ಶನ್ ಕೈ ಹಿಡಿದ ವಿಜಯಲಕ್ಷ್ಮಿ ವಿವಾಹ ವಾರ್ಷಿಕೋತ್ಸವದ ವಿಶ್ ಮಾಡಿದ್ದು, ದರ್ಶನ್ ಕೂಡಾ ಶುಭಾಶಯ ಹೇಳಿದ್ದಾರೆ. ಈ ನಡುವೆ ಮಗ ವಿನೀಶ್ ನನ್ನ ಪಕ್ಕದಲ್ಲೇ ಕುಳಿಸಿಕೊಂಡ ದರ್ಶನ್ , ಸ್ವಲ್ಪ ತಲೆಹರಟೆ ಮಾಡಿ ಮನಸಾರೆ ನಕ್ಕಿದ್ದಾರೆ.
ಇನ್ನು ಮ್ಯಾನೇಜರ್ ನಾಗರಾಜ್ ಹಾಗೂ ಪತ್ನಿ ವಿಜಯಲಕ್ಷ್ಮಿ ಜೊತೆ ಚರ್ಚೆ ನಡೆಸಿದ್ದು, ವಿಜಯಲಕ್ಷ್ಮಿ ಬೇಸರದಲ್ಲೇ ಇದ್ರು ಎನ್ನಲಾಗಿದೆ. ಬ್ಯಾರಕ್ ನಲ್ಲಿ ಅಡಿಷನಲ್ ಸೂಪರ್ಡೆಂಟ್ ಸಮ್ಮುಖದಲ್ಲಿ ಭೇಟಿಗೆ ಅವಕಾಶ ಕೊಟ್ಟಿದ್ದು, ಸಿಟಿಟಿವಿ ನಿಗಾದಲ್ಲಿ ದರ್ಶನ್ ಕುಟುಂಬಕ್ಕೆ ಅವಕಾಶ ಕೊಡಲಾಗಿತ್ತು.
ವರದಿ: ಮುನಿರಾಜು. ಕೆಜಿ, ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು
Bangalore,Karnataka
May 23, 2026 12:12 PM IST













