Last Updated:
Darshan: ನಟ ದರ್ಶನ್ ಅವರು ಡಿಸ್ಚಾರ್ಜ್ ಆದ್ಮೇಲೆ ಎಲ್ಲಿಗೆ ಹೋಗುತ್ತಾರೆ? ಪತ್ನಿ ವಿಜಯಲಕ್ಷ್ಮಿ ಅವರು ಗಂಡನಿಗಾಗಿ ಮಾಡಿರೋ ಪ್ಲಾನ್ ಏನು?
ನಟ ದರ್ಶನ್ (Darshan) ಜೈಲಿನಿಂದ ಬೇಲ್ ಪಡೆದಿದ್ದರೂ ಸದ್ಯ ಅವರು ಮನೆಗೆ ಹೋಗಿಲ್ಲ. ಬಿಜಿಎಸ್ ಆಸ್ಪತ್ರೆಯಲ್ಲಿಯೇ (BGS Hospital) ನಟ ಚಿಕಿತ್ಸೆ ಪಡೆಯುತ್ತಿದ್ದಾರೆ. 2 ದಿನಗಳ ಚಿಕಿತ್ಸೆಯ ನಂತರ ದರ್ಶನ್ ಅವರು ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿತ್ತು. ಸದ್ಯ ಪತಿಗಾಗಿ ವಿಜಯಲಕ್ಷ್ಮಿ (Vijaylakshmi) ದರ್ಶನ್ ಅವರು ಸಾಕಷ್ಟು ಪ್ಲಾನಿಂಗ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.
ಜಾಮೀನು ಪಡೆದು ಆಸ್ಪತ್ರೆಯಲ್ಲಿರೋ ದರ್ಶನ್ ಅವರಿಗೆ ಬಿಜಿಎಸ್ ಚಿಕಿತ್ಸೆ ಮುಂದುವರಿದಿದೆ ಎನ್ನಲಾಗಿದೆ. ಇವತ್ತು ಕೂಡಾ ಫಿಸಿಯೋಥೆರಪಿ ಮೂಲಕವೇ ದರ್ಶನ್ ಅವರಿಗೆ ಚಿಕಿತ್ಸೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಮನೆಯಲ್ಲಿ ನಟನಿಗೆ ಯಾವ ರೀತಿ ಟ್ರೀಟ್ಮೆಂಟ್ ನೀಡುವುದು ಎನ್ನುವ ವಿಧಾನದ ಬಗ್ಗೆ ಕುಟುಂಬಸ್ಥರು ಮಾಹಿತಿ ಪಡೆದಿದ್ದಾರಂತೆ. ಬಹುತೇಕ ಆಸ್ಪತ್ರೆಯಿಂದ ದರ್ಶನ್ ಇಂದು ಡಿಸ್ಚಾರ್ಜ್ ಆಗಬಹುದು ಎನ್ನಲಾಗಿದೆ.
ಈ ಬಗ್ಗೆ ವೈದ್ಯರ ಬಳಿಯೂ ಚರ್ಚಿಸಿರೋ ದರ್ಶನ್ ಕುಟುಂಬಸ್ಥರು ಚರ್ಚಿಸಿದ್ದಾರಂತೆ. ಡಿಸ್ಚಾರ್ಜ್ ಆಗಿ ಮನೆಯಲ್ಲೇ ಟ್ರೀಟ್ಮೆಂಟ್ ಪಡೆಯಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಬಹುತೇಕ ಹೊಸಕೆರೆಹಳ್ಳಿಯ ಪತ್ನಿ ನಿವಾಸದಲ್ಲೇ ದರ್ಶನ್ ಉಳಿಯಲಿದ್ದಾರೆ ಎನ್ನಲಾಗಿದೆ.
ದರ್ಶನ್ ಅವರು ಈ ಹಿಂದೆ ಮೆಡಿಕಲ್ ಗ್ರೌಂಡ್ಸ್ ಮೇಲೆ ಜಾಮೀನು ಪಡೆದು ಬಂದಿದ್ದರು. ಆ ನಂತರ ಅವರನ್ನು ಬಿಜಿಎಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಅವರಿಗೆ ಸರ್ಜರಿ ಮಾಡಿಸಲಾಗುತ್ತದೆ ಎನ್ನಲಾಗಿತ್ತು. ಆದರೆ ಇನ್ನೂ ಸರ್ಜರಿ ಮಾಡಿಸಿಲ್ಲ. ಸದ್ಯ ಅವರಿಗೆ ಫಿಸಿಯೋಥೆರಪಿ ಮೂಲಕವೇ ಚಿಕಿತ್ಸೆ ನೀಡಲಾಗುತ್ತದೆ ಎನ್ನಲಾಗುತ್ತಿದೆ.
ವಿಜಯಲಕ್ಷ್ಮಿ ಅವರು ದರ್ಶನ್ಗೆ ಸರ್ಜರಿ ಮಾಡಿಸಬೇಕು ಎಂದಾಗ ಸಹಿ ಹಾಕಿರಲಿಲ್ಲ. ಸರ್ಜರಿ ಅಡ್ಡ ಪರಿಣಾಮಗಳು, ಬೇರೆ ಸಮಸ್ಯೆಗಳ ಬಗ್ಗೆ ಆತಂಕದಲ್ಲಿರುವ ವಿಜಯಲಕ್ಷ್ಮಿ ದರ್ಶನ್ ಗಂಡನ ಅರ್ಜರಿಗೆ ಸೈನ್ ಮಾಡಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಆದರೆ ನಾರ್ಮಲ್ ಬೇಲ್ ಸಿಗುತ್ತಿದ್ದಂತೆ ನಟ ದರ್ಶನ್ ಸರ್ಜರಿ ಮಾಡಿಸಲ್ಲ ಫಿಸಿಯೋ ಥೆರಪಿಯಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಯ್ತು.
ನಟ ದರ್ಶನ್ ಅವರಿಗೆ ಮನೆಯಲ್ಲಿಯೇ ಫಿಸಿಯೋಥೆರಪಿ ಮೂಲಕ ಚಿಕಿತ್ಸೆ ನೀಡಲು ವಿಜಯಲಕ್ಷ್ಮಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರಂತೆ. ಅವರು ಪತಿಯನ್ನು ತಮ್ಮ ಕತ್ರಿಗುಪ್ಪೆ ಫ್ಲಾಟ್ಗೆ ಕರೆದುಕೊಂಡು ಹೋಗಬಹುದು ಎಂದು ಹೇಳಲಾಗುತ್ತಿದೆ. ನಟ ಮತ್ತೆ ಆರ್ಆರ್ ನಗರದ ಮನೆಗೆ ಸದ್ಯಕ್ಕೆ ಹೋಗಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ವರದಿ: ಗಂಗಾಧರ ವಾಗಟ, ನ್ಯೂಸ್18 ಕನ್ನಡ ಪ್ರತಿನಿಧಿ
Bangalore,Karnataka













