Darshan: ಜೈಲಿನಲ್ಲಿರುವ ನಟ ದರ್ಶನ್​ಗೆ ಕೊನೆಗೂ ಸಿಕ್ತು ಗುಡ್​ ನ್ಯೂಸ್ | | ACTPnews

ದರ್ಶನ್


Last Updated:

Darshan: ವಿಜಯಲಕ್ಷ್ಮಿ ಮನವಿ ಮೇರೆಗೆ ಹಿರಿಯ ಅಧಿಕಾರಿಗಳು ಪತ್ನಿ, ಮಗ ಸೇರಿದಂತೆ ಒಟ್ಟು ಐದು ಜನರಿಗೆ ದರ್ಶನ್ ಭೇಟಿ ಮಾಡಲು ಅವಕಾಶ ನೀಡುವಂತೆ ಸೂಚಿಸಿದ್ದಾರೆ. ಈ ಸಂಬಂಧ ಜೈಲು ಅಧಿಕಾರಿಗಳು ಸುಮಾರು 30 ನಿಮಿಷಗಳ ಕಾಲ ಒಳ ಸಂದರ್ಶನಕ್ಕೆ ಅನುಮತಿ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳ ಮಾಹಿತಿ ತಿಳಿಸಿವೆ.

 ದರ್ಶನ್
ದರ್ಶನ್

ರೇಣುಕಾಸ್ವಾಮಿ ಕೊಲೆ‌ ಪ್ರಕರಣ ಸಂಬಂಧ ಕಳೆದ 9 ತಿಂಗಳಿಂದ  ನಟ ದರ್ಶನ್ (Darshan) ಪರಪ್ಪನ ಅಗ್ರಹಾರದಲ್ಲೆ ಕಳೆದಿದ್ದಾರೆ. ಈ ಮದ್ಯ ಸುಪ್ರಿಂ ಕೋರ್ಟ್ ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿ ಶಾಕ್ ಒಳಗಾಗಿದ್ರು. ಇದು ದರ್ಶನ್ ಗೆ ಮತ್ತಷ್ಟು ಚಿಂತೆಗೀಡು ಮಾಡುವಂತೆ ಮಾಡಿದೆ. ಈ ಮದ್ಯ ನಾಳೆ ದರ್ಶನ್ ಗೆ ವಿವಾಹ ವಾರ್ಷಿಕೊತ್ಸವದ ದಿನ. ಈ ಹಿಂದೆ ಪ್ರತಿಬಾರಿ ಪತ್ನಿ, ಮಗ, ಕುಟುಂಬದವರ ಜೊತೆ ಸೇರಿ ದೇವಸ್ಥಾನಕ್ಕೆ ಹೋಗಿ ಆಶಿರ್ವಾದ ಪಡೆದ ಬಳಿಕ ಸೆಲಬರೇಷನ್ ಮಾಡ್ತಿದ್ರು. ಆದ್ರೆ ಈ ಬಾರಿ ಕೊಲೆ ಸಂಬಂಧ ಜೈಲಿನಲ್ಲಿ ಇರುವ ಹಿನ್ನೆಲೆ ಸೆಲಬರೇಷನ್ ಗೆ ಬ್ರೇಕ್ ಬಿದ್ದಿದೆ.

ಇದಾಗ್ಯು ಪತ್ನಿ ವಿಜಯಲಕ್ಷ್ಮಿ ನಾಳೆ ಜೈಲಿನಲ್ಲಿ ದರ್ಶನ್ ಭೇಟಿ ಮಾಡಲು ಅನುಮತಿ ಕೋರಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಮನವಿ ಮೇರೆಗೆ ಹಿರಿಯ ಅಧಿಕಾರಿಗಳು ಪತ್ನಿ, ಮಗ ಸೇರಿದಂತೆ ಒಟ್ಟು ಐದು ಜನರಿಗೆ ದರ್ಶನ್ ಭೇಟಿ ಮಾಡಲು ಅವಕಾಶ ನೀಡುವಂತೆ ಸೂಚಿಸಿದ್ದಾರೆ. ಈ ಸಂಬಂಧ ಜೈಲು ಅಧಿಕಾರಿಗಳು ಸುಮಾರು 30 ನಿಮಿಷಗಳ ಕಾಲ ಒಳ ಸಂದರ್ಶನಕ್ಕೆ ಅನುಮತಿ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳ ಮಾಹಿತಿ ತಿಳಿಸಿವೆ.

ಇದನ್ನೂ ಓದಿ: Mouni Roy: ಮೌನಿ ರಾಯ್ ಡಿವೋರ್ಸ್‌ಗೆ ಆ ವ್ಯಕ್ತಿಯೇ ಕಾರಣ? ನಟಿ ಮಾಜಿ ಗಂಡ ಅಚ್ಚರಿ ಹೇಳಿಕೆ!

ಮೇ 15ರಂದು ದರ್ಶನ್ ಪರಪ್ಪನ ಅಗ್ರಹಾರ ಕಾರಾಗೃಹದ ಎಸ್‌ಪಿಗೆ ಪತ್ರ ಬರೆದಿದ್ದರು, ಹಾಗೆಯೇ ಮೇ 16ರಂದು ಡಿಜಿಪಿ ಅಲೋಕ್ ಕುಮಾರ್ ಅವರನ್ನು ವಿಜಯಲಕ್ಷ್ಮಿ ದರ್ಶನ್ ಭೇಟಿ ಮಾಡಿ ಮನವಿ ಮಾಡಿದ್ದರು .  ಭೇಟಿ ವೇಳೆ ಸುಪ್ರಿಂ ಕೋರ್ಟ್ ನಲ್ಲಿ ಜಾಮೀನು ಸಿಗದ ಹಿನ್ನಲೆ ಮಾನಸಿಕವಾಗಿ ದರ್ಶನ್ ಕುಗ್ಗಿದ್ದಾರೆ ಎಂದು ಪತ್ನಿ ವಿಜಯಲಕ್ಷ್ಮಿ ತಿಳಿಸಿದ್ದರು. ಇದೇ ಕಾರಣಕ್ಕೆ ಒಳ ಸಂದರ್ಶನಕ್ಕೆ ಜೈಲಾಧಿಕಾರಿಗಳು ಅವಕಾಶ ನೀಡಿದ್ದಾರೆ ಎಂದು ವರದಿಯಾಗಿದೆ.

ಹಾಗೆಯೇ ಜೈಲಿನ ಮ್ಯಾನ್ಯುಯಲ್ ಪ್ರಕಾರ ಓರ್ವ ಕೈದಿ ಮಾನಸಿಕ ಹಾಗೂ ಶಾರೀರಿಕವಾಗಿ ಕುಗ್ಗಿದ ಸಂದರ್ಭದಲ್ಲಿ ಈ ರೀತಿಯ ಅವಕಾಶ ಕೊಡಲಾಗುತ್ತೆ. ಹೀಗಾಗಿಯೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಈ ಬೇಡಿಕೆಗೆ ಅನುಮತಿ ನೀಡಲಾಗಿದೆ ಎಂದು ಹೇಳಲಾಗಿದೆ.

ವರದಿ: ಗಂಗಾಧರ ವಾಗಟ, ನ್ಯೂಸ್ 18 ಕನ್ನಡ, ಬೆಂಗಳೂರು 



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed