Danny Lamb: ಕೇವಲ 30 ವರ್ಷಕ್ಕೆ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ಕ್ರಿಕೆಟರ್ | ಕ್ರೀಡಾ ಸುದ್ದಿ | ACTPnews

ಡ್ಯಾನಿ ಲ್ಯಾಂಬ್


Last Updated:

ಲ್ಯಾಂಬ್ ಅವರ ವೃತ್ತಿಪರ ವೃತ್ತಿಜೀವನವು ಒಂದು ದಶಕಕ್ಕೂ ಹೆಚ್ಚು ಕಾಲ ನಡೆದಿದೆ. ಈ ಸಮಯದಲ್ಲಿ ಅವರು ಲಂಕಾಷೈರ್ ಮತ್ತು ಸಸೆಕ್ಸ್ ಅನ್ನು ಪ್ರತಿನಿಧಿಸಿ, ವಿವಿಧ ಸ್ವರೂಪಗಳಲ್ಲಿ ತಂಡಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದರು.

 ಡ್ಯಾನಿ ಲ್ಯಾಂಬ್
ಡ್ಯಾನಿ ಲ್ಯಾಂಬ್

ಇಂಗ್ಲೆಂಡ್ ಆಲ್‌ರೌಂಡರ್ ಮತ್ತು ಸಸೆಕ್ಸ್ ಆಟಗಾರ ಡ್ಯಾನಿ ಲ್ಯಾಂಬ್ ಎಲ್ಲಾ ಮಾದರಿಯ ಕ್ರಿಕೆಟ್​​​ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಕುತ್ತಿಗೆಗೆ ಆದ ಗಂಭೀರ ಗಾಯದಿಂದಾಗಿ ಕೇವಲ 30ನೇ ವಯಸ್ಸಿನಲ್ಲಿ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ಈ ಋತುವಿನ ಆರಂಭದಲ್ಲಿ ಅವರ ಕುತ್ತಿಗೆಯಲ್ಲಿ ಡಿಸ್ಕ್ ಹರ್ನಿಯೇಷನ್ ​​ಉಂಟಾಗಿತ್ತು, ಇದು ಅವರ ಸ್ಪೈನಲ್ ಕಾರ್ಡ್​ ಸಹ ಹಾನಿಯಾಗಿತ್ತು. ಕಳೆದ ತಿಂಗಳು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಆದರೆ ಗಾಯದ ಅಡ್ಡಪರಿಣಾಮಗಳು ಮುಂದುವರೆದವು. ವೈದ್ಯರ ಸಲಹೆಯನ್ನು ಅನುಸರಿಸಿ ಲ್ಯಾಂಬ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮದ ಮೂಲಕ ಈ ಸುದ್ದಿಯನ್ನು ಪ್ರಕಟಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed