Last Updated:
ಲ್ಯಾಂಬ್ ಅವರ ವೃತ್ತಿಪರ ವೃತ್ತಿಜೀವನವು ಒಂದು ದಶಕಕ್ಕೂ ಹೆಚ್ಚು ಕಾಲ ನಡೆದಿದೆ. ಈ ಸಮಯದಲ್ಲಿ ಅವರು ಲಂಕಾಷೈರ್ ಮತ್ತು ಸಸೆಕ್ಸ್ ಅನ್ನು ಪ್ರತಿನಿಧಿಸಿ, ವಿವಿಧ ಸ್ವರೂಪಗಳಲ್ಲಿ ತಂಡಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದರು.
ಇಂಗ್ಲೆಂಡ್ ಆಲ್ರೌಂಡರ್ ಮತ್ತು ಸಸೆಕ್ಸ್ ಆಟಗಾರ ಡ್ಯಾನಿ ಲ್ಯಾಂಬ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಕುತ್ತಿಗೆಗೆ ಆದ ಗಂಭೀರ ಗಾಯದಿಂದಾಗಿ ಕೇವಲ 30ನೇ ವಯಸ್ಸಿನಲ್ಲಿ ವೃತ್ತಿಪರ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ಈ ಋತುವಿನ ಆರಂಭದಲ್ಲಿ ಅವರ ಕುತ್ತಿಗೆಯಲ್ಲಿ ಡಿಸ್ಕ್ ಹರ್ನಿಯೇಷನ್ ಉಂಟಾಗಿತ್ತು, ಇದು ಅವರ ಸ್ಪೈನಲ್ ಕಾರ್ಡ್ ಸಹ ಹಾನಿಯಾಗಿತ್ತು. ಕಳೆದ ತಿಂಗಳು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಆದರೆ ಗಾಯದ ಅಡ್ಡಪರಿಣಾಮಗಳು ಮುಂದುವರೆದವು. ವೈದ್ಯರ ಸಲಹೆಯನ್ನು ಅನುಸರಿಸಿ ಲ್ಯಾಂಬ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮದ ಮೂಲಕ ಈ ಸುದ್ದಿಯನ್ನು ಪ್ರಕಟಿಸಿದರು.














