Dam Water Level: ನಿಮ್ಮೂರಿನ ಡ್ಯಾಮ್‍ನಲ್ಲಿ ಎಷ್ಟಿದೆ ನೀರು? ರಾಜ್ಯದ ಜಲಾಶಯಗಳ ಇಂಚಿಂಚೂ ಅಚ್ಚರಿಯ ಮಾಹಿತಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

News18


Last Updated:

ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ: ಆಲಮಟ್ಟಿ, ಹಿಡ್ಕಲ್ ಭರ್ತಿ. ಕೆ.ಆರ್.ಎಸ್ 56.28%, ಹೇಮಾವತಿ 48.96% ಸಂಗ್ರಹ. ತುಂಗಭದ್ರಾ 79.22%, ಭದ್ರಾ 87.10% ಭರ್ತಿ.

News18
News18

ಬೆಂಗಳೂರು: ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ (Reservoir) ನೀರಿನ ಮಟ್ಟ (Water Level) ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಕೆಲವು ಅಣೆಕಟ್ಟುಗಳು (Dams) ಭರ್ತಿಯಾಗುವ ಹಂತ ತಲುಪಿದ್ದರೆ, ಇನ್ನು ಕೆಲವು ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಮಧ್ಯಮ ಸ್ಥಿತಿಯಲ್ಲಿದೆ. ಸೆಪ್ಟೆಂಬರ್ 18, 2026ರ ಲೇಟೆಸ್ಟ್ ಅಂಕಿಅಂಶಗಳ ಆಧಾರದ ಮೇಲೆ ಸಿದ್ಧಪಡಿಸಿದ ಸಂಪೂರ್ಣ ವಿವರ ಇಲ್ಲಿದೆ.

ಜಲಾಶಯಗಳ ಪ್ರಸ್ತುತ ನೀರಿನ ಮಟ್ಟದ ಸ್ಥಿತಿ-ಗತಿ

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಮಳೆ ಹಾಗೂ ಒಳಹರಿವಿನ ಪ್ರಮಾಣಕ್ಕೆ ತಕ್ಕಂತೆ ನೀರಿನ ಸಂಗ್ರಹದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಪ್ರಮುಖ ಜಲಾಶಯಗಳ ವಿವರವಾದ ಮಾಹಿತಿ ಇಲ್ಲಿದೆ.

ಉತ್ತರ ಕರ್ನಾಟಕದ ದೈತ್ಯರು (ಆಲಮಟ್ಟಿ ಮತ್ತು ಹಿಡ್ಕಲ್)

ಆಲಮಟ್ಟಿ ಅಣೆಕಟ್ಟು: ಗರಿಷ್ಠ ಮಟ್ಟ 1704.81 ಅಡಿಗಳಿದ್ದು, ಪ್ರಸ್ತುತ 1704.179 ಅಡಿಗೆ ತಲುಪಿದೆ. ಒಟ್ಟು 123.081 ಟಿಎಂಸಿ ಸಾಮಥ್ರ್ಯದಲ್ಲಿ 97.69% (120.248 ಟಿಎಂಸಿ) ನೀರು ಸಂಗ್ರಹಗೊಂಡಿದೆ. 12,679 ಕ್ಯೂಸೆಕ್ ಹೊರಹರಿವು ಇದೆ.

ಹಿಡ್ಕಲ್ ಅಣೆಕಟ್ಟು: ಗರಿಷ್ಠ ಮಟ್ಟ 2175 ಅಡಿಗಳಿದ್ದು, ಪ್ರಸ್ತುತ 99.69% ಅಂದರೆ 2174.60 ಅಡಿಗಳಷ್ಟು ಭರ್ತಿಯಾಗಿದೆ. 51 ಟಿಎಂಸಿ ಸಾಮಥ್ರ್ಯದಲ್ಲಿ 50.843 ಟಿಎಂಸಿ ನೀರು ಲಭ್ಯವಿದೆ.

ಕಾವೇರಿ ಕೊಳ್ಳದ ಜಲಾಶಯಗಳು

ಕೆ.ಆರ್.ಎಸ್ (ಕೃಷ್ಣರಾಜ ಸಾಗರ): ಗರಿಷ್ಠ ಮಟ್ಟ 2468.80 ಅಡಿಗಳಿದ್ದು, ಪ್ರಸ್ತುತ ಮಟ್ಟ 2449.94 ಅಡಿಯಲ್ಲಿದೆ. ಒಟ್ಟು 49.452 ಟಿಎಂಸಿ ಸಾಮಥ್ರ್ಯದಲ್ಲಿ 56.28% (27.833 ಟಿಎಂಸಿ) ನೀರು ಸಂಗ್ರಹವಾಗಿದೆ. ಒಳಹರಿವು 4,152 ಕ್ಯೂಸೆಕ್‍ಗಳಷ್ಟಿದೆ.

ಹೇಮಾವತಿ ಅಣೆಕಟ್ಟು

ಗರಿಷ್ಠ ಮಟ್ಟ 2922 ಅಡಿಗಳಿದ್ದು, ಪ್ರಸ್ತುತ ಮಟ್ಟ 2897.31 ಅಡಿಯಲ್ಲಿದೆ. ಒಟ್ಟು ಸಾಮಥ್ರ್ಯ 37.103 ಟಿಎಂಸಿ ಇದ್ದು, 48.96% (18.168 ಟಿಎಂಸಿ) ನೀರು ಸಂಗ್ರಹವಿದೆ. ಇಲ್ಲಿ 9,300 ಕ್ಯೂಸೆಕ್ ಭರ್ಜರಿ ಹೊರಹರಿವು ಮುಂದುವರಿದಿದೆ.

ಹಾರಂಗಿ ಹಾಗೂ ಕಬಿನಿ

ಹಾರಂಗಿ ಅಣೆಕಟ್ಟು 72.18% (6.136 ಟಿಎಂಸಿ) ಮತ್ತು ಕಬಿನಿ ಅಣೆಕಟ್ಟು 56.10% ರಷ್ಟು ಭರ್ತಿಯಾಗಿವೆ.

ಮಲೆನಾಡು ಹಾಗೂ ಇಂತರ ಜಲಾಶಯಗಳು

ತುಂಗಭದ್ರಾ ಅಣೆಕಟ್ಟು: ಒಟ್ಟು 105.788 ಟಿಎಂಸಿ ಸಾಮಥ್ರ್ಯದಲ್ಲಿ 79.22% (83.812 ಟಿಎಂಸಿ) ನೀರು ಸಂಗ್ರಹವಾಗಿದ್ದು, ಪ್ರಸ್ತುತ ಮಟ್ಟ 1627.17 ಅಡಿಯಲ್ಲಿದೆ.

ಭದ್ರಾ ಅಣೆಕಟ್ಟು: 87.10% (62.311 ಟಿಎಂಸಿ) ನೀರು ತುಂಬಿಕೊಂಡಿದ್ದು, ಉತ್ತಮ ಸ್ಥಿತಿಯಲ್ಲಿದೆ.

ನಾರಾಯಣಪುರ ಅಣೆಕಟ್ಟು 84.19% ರಷ್ಟು ಹಾಗೂ ಭೀಮಾ ಲಿಫ್ಟ್ ಅಣೆಕಟ್ಟು (ಸೊನ್ನ ಬ್ಯಾರೇಜ್) 90.58% ರಷ್ಟು ಭರ್ತಿಯಾಗಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed