Last Updated:
ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ: ಆಲಮಟ್ಟಿ, ಹಿಡ್ಕಲ್ ಭರ್ತಿ. ಕೆ.ಆರ್.ಎಸ್ 56.28%, ಹೇಮಾವತಿ 48.96% ಸಂಗ್ರಹ. ತುಂಗಭದ್ರಾ 79.22%, ಭದ್ರಾ 87.10% ಭರ್ತಿ.
ಬೆಂಗಳೂರು: ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ (Reservoir) ನೀರಿನ ಮಟ್ಟ (Water Level) ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಕೆಲವು ಅಣೆಕಟ್ಟುಗಳು (Dams) ಭರ್ತಿಯಾಗುವ ಹಂತ ತಲುಪಿದ್ದರೆ, ಇನ್ನು ಕೆಲವು ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಮಧ್ಯಮ ಸ್ಥಿತಿಯಲ್ಲಿದೆ. ಸೆಪ್ಟೆಂಬರ್ 18, 2026ರ ಲೇಟೆಸ್ಟ್ ಅಂಕಿಅಂಶಗಳ ಆಧಾರದ ಮೇಲೆ ಸಿದ್ಧಪಡಿಸಿದ ಸಂಪೂರ್ಣ ವಿವರ ಇಲ್ಲಿದೆ.
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಮಳೆ ಹಾಗೂ ಒಳಹರಿವಿನ ಪ್ರಮಾಣಕ್ಕೆ ತಕ್ಕಂತೆ ನೀರಿನ ಸಂಗ್ರಹದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಪ್ರಮುಖ ಜಲಾಶಯಗಳ ವಿವರವಾದ ಮಾಹಿತಿ ಇಲ್ಲಿದೆ.
ಹಿಡ್ಕಲ್ ಅಣೆಕಟ್ಟು: ಗರಿಷ್ಠ ಮಟ್ಟ 2175 ಅಡಿಗಳಿದ್ದು, ಪ್ರಸ್ತುತ 99.69% ಅಂದರೆ 2174.60 ಅಡಿಗಳಷ್ಟು ಭರ್ತಿಯಾಗಿದೆ. 51 ಟಿಎಂಸಿ ಸಾಮಥ್ರ್ಯದಲ್ಲಿ 50.843 ಟಿಎಂಸಿ ನೀರು ಲಭ್ಯವಿದೆ.
ಕೆ.ಆರ್.ಎಸ್ (ಕೃಷ್ಣರಾಜ ಸಾಗರ): ಗರಿಷ್ಠ ಮಟ್ಟ 2468.80 ಅಡಿಗಳಿದ್ದು, ಪ್ರಸ್ತುತ ಮಟ್ಟ 2449.94 ಅಡಿಯಲ್ಲಿದೆ. ಒಟ್ಟು 49.452 ಟಿಎಂಸಿ ಸಾಮಥ್ರ್ಯದಲ್ಲಿ 56.28% (27.833 ಟಿಎಂಸಿ) ನೀರು ಸಂಗ್ರಹವಾಗಿದೆ. ಒಳಹರಿವು 4,152 ಕ್ಯೂಸೆಕ್ಗಳಷ್ಟಿದೆ.
ಗರಿಷ್ಠ ಮಟ್ಟ 2922 ಅಡಿಗಳಿದ್ದು, ಪ್ರಸ್ತುತ ಮಟ್ಟ 2897.31 ಅಡಿಯಲ್ಲಿದೆ. ಒಟ್ಟು ಸಾಮಥ್ರ್ಯ 37.103 ಟಿಎಂಸಿ ಇದ್ದು, 48.96% (18.168 ಟಿಎಂಸಿ) ನೀರು ಸಂಗ್ರಹವಿದೆ. ಇಲ್ಲಿ 9,300 ಕ್ಯೂಸೆಕ್ ಭರ್ಜರಿ ಹೊರಹರಿವು ಮುಂದುವರಿದಿದೆ.
ಹಾರಂಗಿ ಅಣೆಕಟ್ಟು 72.18% (6.136 ಟಿಎಂಸಿ) ಮತ್ತು ಕಬಿನಿ ಅಣೆಕಟ್ಟು 56.10% ರಷ್ಟು ಭರ್ತಿಯಾಗಿವೆ.
ತುಂಗಭದ್ರಾ ಅಣೆಕಟ್ಟು: ಒಟ್ಟು 105.788 ಟಿಎಂಸಿ ಸಾಮಥ್ರ್ಯದಲ್ಲಿ 79.22% (83.812 ಟಿಎಂಸಿ) ನೀರು ಸಂಗ್ರಹವಾಗಿದ್ದು, ಪ್ರಸ್ತುತ ಮಟ್ಟ 1627.17 ಅಡಿಯಲ್ಲಿದೆ.
ಭದ್ರಾ ಅಣೆಕಟ್ಟು: 87.10% (62.311 ಟಿಎಂಸಿ) ನೀರು ತುಂಬಿಕೊಂಡಿದ್ದು, ಉತ್ತಮ ಸ್ಥಿತಿಯಲ್ಲಿದೆ.
ನಾರಾಯಣಪುರ ಅಣೆಕಟ್ಟು 84.19% ರಷ್ಟು ಹಾಗೂ ಭೀಮಾ ಲಿಫ್ಟ್ ಅಣೆಕಟ್ಟು (ಸೊನ್ನ ಬ್ಯಾರೇಜ್) 90.58% ರಷ್ಟು ಭರ್ತಿಯಾಗಿವೆ.














