Rashmika Mandanna: ‘ಅಮ್ಮ ನಿಮ್ಮ ಪಾತ್ರ ಮಾಡ್ತಿದ್ದೀನಿ’, MS ಸುಬ್ಬುಲಕ್ಷ್ಮಿಯಾಗಿ ರಶ್ಮಿಕಾ, ಕಮಲ್ ಹಾಸನ್ ಕೊಟ್ಟ ಸಲಹೆ ಏನು? | | ACTPnews

'ಅಮ್ಮ ನಿಮ್ಮ ಪಾತ್ರ ಮಾಡ್ತಿದ್ದೀನಿ', MS ಸುಬ್ಬುಲಕ್ಷ್ಮಿಯಾಗಿ ರಶ್ಮಿಕಾ, ಕಮಲ್ ಹಾಸನ್ ಕೊಟ್ಟ ಸಲಹೆ ಏನು?(ಚಿತ್ರ ಕೃಪೆ: ಸಿನಿಮಾ ಟೀಮ್‌)


Last Updated:

ಭಾರತೀಯ ಚಿತ್ರರಂಗದ ದಂತಕತೆ ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಜೀವನ ಚರಿತ್ರೆ ಸಿನಿಮಾ ಆಗುತ್ತಿದೆ. ಇವರ 108 ನೇ ಜನ್ಮ ದಿನದಂದು ಈ ಚಿತ್ರ ಲಾಂಚ್ ಆಗಿದೆ. ರಶ್ಮಿಕಾ ಮಂದಣ್ಣ ಇಲ್ಲಿ ಎಂ.ಎಸ್.ಸುಬ್ಬುಲಕ್ಷ್ಮಿ ಪಾತ್ರ ಮಾಡುತ್ತಿದ್ದಾರೆ. ಈ ಕ್ಷಣ ಕಮಲ್ ಹಾಸನ್ ಅವರು ರಶ್ಮಿಕಾ ಮಂದಣ್ಣ ಅವರಿಗೆ ಸಲಹೆ ಕೊಟ್ಟಿದ್ದಾರೆ. ರಶ್ಮಿಕಾ ಎಮೋಷನಲ್ ಕೂಡ ಆಗಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

'ಅಮ್ಮ ನಿಮ್ಮ ಪಾತ್ರ ಮಾಡ್ತಿದ್ದೀನಿ', MS ಸುಬ್ಬುಲಕ್ಷ್ಮಿಯಾಗಿ ರಶ್ಮಿಕಾ, ಕಮಲ್ ಹಾಸನ್ ಕೊಟ್ಟ ಸಲಹೆ ಏನು?(ಚಿತ್ರ ಕೃಪೆ: ಸಿನಿಮಾ ಟೀಮ್‌)
‘ಅಮ್ಮ ನಿಮ್ಮ ಪಾತ್ರ ಮಾಡ್ತಿದ್ದೀನಿ’, MS ಸುಬ್ಬುಲಕ್ಷ್ಮಿಯಾಗಿ ರಶ್ಮಿಕಾ, ಕಮಲ್ ಹಾಸನ್ ಕೊಟ್ಟ ಸಲಹೆ ಏನು?(ಚಿತ್ರ ಕೃಪೆ: ಸಿನಿಮಾ ಟೀಮ್‌)

ಭಾರತೀಯ ಚಿತ್ರರಂಗದ ದಂತಕತೆ ಎಂ.ಎಸ್.ಸುಬ್ಬುಲಕ್ಷ್ಮಿ (M.S. Subbulakshmi) ಅವರ ಜೀವನ ಚರಿತ್ರೆ ಸಿನಿಮಾ ಆಗುತ್ತಿದೆ. ಎಂ.ಎಸ್ ಸುಬ್ಬುಲಕ್ಷ್ಮಿ ಅವರ ಪಾತ್ರವನ್ನ ನಟಿ ರಶ್ಮಿಕಾ ಮಂದಣ್ಣ ಮಾಡುತ್ತಿದ್ದಾರೆ. ಎಂ.ಎಸ್.ಸುಬ್ಬುಲಕ್ಷ್ಮಿ (M.S. Subbulakshmi) ಅವರ ಜನ್ಮ ದಿನದಂದು ಈ ಚಿತ್ರ ಸೆಟ್ಟೇರಿದೆ. ಕಮಲ್ ಹಾಸನ್ ಬಂದು ಕ್ಲಾಪ್ ಮಾಡಿದ್ದಾರೆ. ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna) ಈ ಕ್ಷಣ ಎಮೋಷನಲ್ ಆಗಿಯೇ ಮಾತನಾಡಿದ್ದಾರೆ. “ನಮ್ಮ ಕೆಲಸ ಕಂಡು ನಿಮ್ಮ ಮೊಗದಲ್ಲಿ ಒಂದು ಸಣ್ಣ ನಗು ಮೂಡಿದರೆ ಸಾಕು” ನಾನು ಧನ್ಯ ಅನ್ನುವ ಅರ್ಥದಲ್ಲೂ ಹೇಳಿಕೊಂಡಿದ್ದಾರೆ. ಕಮಲ್ ಹಾಸನ್ (Kamal Haasn) ತುಂಬಾನೆ ಒಳ್ಳೆ ಸಲಹೆ ಕೊಟ್ಟಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.

ನಿಮ್ಮ ಒಂದು ಸಣ್ಣ ನಗು ಸಾಕು

ಅಮ್ಮ ನಾನು ನಿಮ್ಮ ಪಾತ್ರ ಮಾಡುತ್ತಿದ್ದೇನೆ. ನಿಮ್ಮ ಗಾಯನದಲ್ಲಿ ಒಂದು ದೈವತ್ವ ಇದೆ. ಇದನ್ನ ಕೇಳುವಾಗ ದೇವರ ಸನ್ನಿಧಿಯಲ್ಲಿ ಕುಳಿತ ಅನುಭವ ಆಗುತ್ತದೆ.

rashmika mandanna ms subbulakshmi biopic kamal haasan advice to rashmika

ನಿಮ್ಮ ಒಂದು ಸಣ್ಣ ನಗು ಸಾಕು

(ಚಿತ್ರ ಕೃಪೆ: ಸಿನಿಮಾ ಟೀಮ್‌)

“ನೀವು ಎಲ್ಲಿದ್ದಿರೋ ಅಲ್ಲಿಂದಲೇ ನಮ್ಮ ಕೆಲಸವನ್ನ ಕಂಡು ನಿಮ್ಮ ಮೊಗದಲ್ಲಿ ಒಂದು ಸಣ್ಣ ನಗು ಮೂಡಿರೆ ಸಾಕು.” ಅಂತಲೇ ರಶ್ಮಿಕಾ ಹೇಳಿದ್ದಾರೆ.

ನಿಮ್ಮ ಜನ್ಮ ದಿನದಂದು ನಮ್ಮ ಈ ಚಿತ್ರ ಶುರು ಆಗುತ್ತಿದೆ. ಇದು ತುಂಬಾನೆ ಖುಷಿಯ ವಿಚಾರವೇ ಆಗಿದೆ. ಎಲ್ಲರೂ ನಿಮ್ಮ ಈ ಒಂದು ಹುಟ್ಟುಹಬ್ಬ ಆಚರಿಸಲು ಸೇರಿದ್ದೇವೆ. ನಾನು ನಿಮ್ಮ ಪಾತ್ರವಾಗಿಯೇ ಇದನ್ನ ಸೆಲೆಬ್ರೇಟ್ ಮಾಡುತ್ತೇನೆ ಅಂತಲೂ ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ.

ನಿಮ್ಮ ಜೀವನದ ಭಾಗವಾಗಲು…

ಅಮ್ಮ ನಿಮ್ಮ ಜೀವನದ ಒಂದು ಭಾಗವಾಗಲು ನನ್ನ ಆಯ್ಕೆ ಮಾಡಿದ್ದೀರಿ. ಇದಕ್ಕೆ ನಾನು ಸದಾ ಕೃತಜ್ಞಳಾಗಿರುತ್ತೇನೆ. ನಿಮ್ಮ ಈ ಂಒಂದು ಪಾತ್ರವನ್ನ ನಿರ್ವಹಿಸಲು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ ಅಂತಲೂ ಎಮೋಷನಲ್ ಆಗಿಯೇ ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ.
ಕಮಲ್ ಹಾಸನ್ ಹೇಳಿದ್ದೇನು

ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಬಯೋಪಿಕ್ ಚಿತ್ರ ಮಾಡುವುದು ಅಷ್ಟು ಸುಲಭವೇನು ಇಲ್ಲ. ಮೈಕಲ್ ಜಾಕ್ಸನ್ ಅವರ ಬಯೋಪಿಕ್ ಮಾಡುವ ಒಬ್ಬ ಕಲಾವಿದನಿಗೆ ಅದೆಷ್ಟು ಒತ್ತಡ ಇರುತ್ತದೆಯೋ ಅಷ್ಟೆ ಒತ್ತಡ ಹಾಗೂ ಜವಾಬ್ದಾರಿ ಇದೀಗ ರಶ್ಮಿಕಾ ಮಂದಣ್ಣ ಮೇಲೆ ಇದೆ ಅಂತ ಕಮಲ್ ಹಾಸನ್ ಹೇಳಿದ್ದಾರೆ.

ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಕಣ್ಣುಗಳಲ್ಲಿ ಕರುಣೆ ಇತ್ತು. ಆ ಕರುಣೆಯನ್ನ ರಶ್ಮಿಕಾ ಮಂದಣ್ಣ ತಮ್ಮ ಕಣ್ಣುಗಳಲ್ಲಿ ತರಬೇಕು. ಹಾಗೆ ಮಾಡಿದರೆ ಆಯಿತು. ಅರ್ಧ ಯುದ್ಧ ಗೆದ್ದ ಹಾಗೇನೆ ನೋಡಿ ಅಂತಲೂ ಕಮಲ್ ಹಾಸನ್ ಅಭಿಪ್ರಾಯ ಪಟ್ಟಿದ್ದಾರೆ.

rashmika mandanna ms subbulakshmi biopic kamal haasan advice to rashmika

ಕಮಲ್ ಹಾಸನ್ ಹೇಳಿದ್ದೇನು

(ಚಿತ್ರ ಕೃಪೆ: ಸಿನಿಮಾ ಟೀಮ್‌)

ನನಗೆ ಈ ಪಾತ್ರ ಅಸಾಧ್ಯ

ನಾನು ಎಷ್ಟೆ ಅವತಾರಗಳನ್ನ ಮಾಡಿದರೂ ಅಷ್ಟೆನೆ ಬಿಡಿ. ಗಡ್ಡ ತೆಗೆದರೂ ಅಷ್ಟೇನೆ. ಎಂ.ಎಸ್.ಸುಬ್ಬಲಕ್ಷ್ಮಿ ಅಮ್ಮನ ಪಾತ್ರ ಮಾಡುವುದಕ್ಕೆ ಆಗೋದಿಲ್ಲ ಅಂತಲೂ ತಮಾಷೆ ಮಾಡಿದ್ದಾರೆ.

‘ಎಂ.ಎಸ್. ಎ ಲೆಗಸಿ ಆನ್ ಸ್ಕ್ರೀನ್’

ಎಂ.ಎಸ್.ಸುಬ್ಬಲಕ್ಷ್ಮಿ ಅವರ ಬಯೋಪಿಕ್‌ಗೆ ಈ ಹೆಸರು ಇಟ್ಟಿದ್ದಾರೆ. ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಸುಬ್ಬಲಕ್ಷ್ಮಿ ಅವರ ಪಾತ್ರ ಮಾಡುತ್ತಿದ್ದಾರೆ. ಗೌತಮ್ ತಿನ್ನನೂರಿ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ.

ಈ ಚಿತ್ರವನ್ನ ಮೂವರು ನಿರ್ಮಿಸುತ್ತಿದ್ದಾರೆ. ಅಲ್ಲು ಅರವಿಂದ್, ರಾಕ್ ಲೈನ್ ವೆಂಕಟೇಶ್, ಬನ್ನಿ ವಾಸು ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed