Nani in Bengaluru: ಸಿಲಿಕಾನ್​ ಸಿಟಿಗೆ ಬಂದ ಕಿಚ್ಚನ ಫ್ರೆಂಡ್, ಬೆಂಗಳೂರಲ್ಲಿ ನಾನಿ | | ACTPnews

Tollywood Actor Nani Bengaluru Visit to Promote the Paradise Movie


ನಾನಿ ಲಾಂಗ್ ಹೇರ್ ಲುಕ್

ನಾನಿ ಲಾಂಗ್ ಹೇರ್ ಬಿಟ್ಟಿರೊದು ಯಾಕ್ ಗೊತ್ತಾ? ಹೌದು, ನಾನಿ ಲಾಂಗ್ ಹೇರ್ ಅನ್ನ ದಿ ಪ್ಯಾರಡೈಸ್ ಚಿತ್ರಕ್ಕಾಗಿಯೇ ಬಿಟ್ಟಿದ್ದಾರೆ. ಈ ಚಿತ್ರದಲ್ಲಿ ಕ್ರಾಂತಿಕಾರಿ ಪಾತ್ರವನ್ನೆ ಮಾಡಿದ್ದಾರೆ.

ನಾನಿ ಲಾಂಗ್ ಹೇರ್ ಲುಕ್

(ಚಿತ್ರ ಕೃಪೆ: ಸಿನಿಮಾ ಟೀಮ್ ಪಿಆರ್‌ಓ ವಿಡಿಯೋ)

ಈ ಚಿತ್ರದಲ್ಲಿ ನಾನಿಗೆ ಒಂದಲ್ಲ, ಎರಡು ಜಡೆ ಇವೆ. ಈ ಒಂದು ಲುಕ್ ಅಲ್ಲಿಯೇ ಇಡೀ ಚಿತ್ರದಲ್ಲಿ ಕಂಗೊಳಿಸಿದ್ದಾರೆ. ಆದರೆ, ಇಲ್ಲಿ ರಕ್ತದೋಕುಳಿ ಹರಿಯುತ್ತದೆ. ಚಿತ್ರ ತಂಡ ಬಿಟ್ಟಿರೋ ಟೀಸರ್ ಅಲ್ಲಿ ಇದು ಕಾಣಿಸುತ್ತದೆ.

1.30ಕ್ಕೆ ಗಂಟೆಗೆ ಪ್ರೆಸ್ ಮೀಟ್

ಬೆಂಗಳೂರಿನಲ್ಲಿ ನಾನಿ ಪ್ರೆಸ್ ಮೀಟ್ ಮಾಡ್ತಿದ್ದಾರೆ. ಈ ಒಂದು ಪ್ರೆಸ್ ಮೀಟ್ ಅಲ್ಲಿ ತಮ್ಮ ದಿ ಪ್ಯಾರಡೈಸ್ ಚಿತ್ರದ ಕುರಿತು ಹೇಳಿಕೊಳ್ಳಲಿದ್ದಾರೆ. ಚಿತ್ರದ ಮಾಹಿತಿ ಏನಿದೆ ಅದನ್ನ ಕೊಡಲಿದ್ದಾರೆ.
ಸಿನಿಮಾ ಡೈರೆಕ್ಟರ್ ಯಾರು

ಈ ಚಿತ್ರವನ್ನ ಶ್ರೀಕಾಂತ್ ಓಡೇಲಾ ಡೈರೆಕ್ಷನ್ ಮಾಡಿದ್ದಾರೆ. ಕಯಾದು ಲೋಹರ್ ಈ ಚಿತ್ರದ ನಾಯಕಿ ಆಗಿದ್ದಾರೆ. ಮೋಹನ್ ಬಾಬು, ಸೋನಾಲಿ ಕುಲಕರ್ಣಿ, ಕೀರ್ತಿ ಸುರೇಶ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರಕ್ಕೆ A ಪ್ರಮಾಣ ಪತ್ರ ಬಂದಿದೆ. ಈ ಚಿತ್ರದಲ್ಲಿ 1980 ಕಾಲಘಟ್ಟದ ಕತೆ ಇದೆ. ಸಿಕಂದರಾಬಾದ್‌ನ ಕೊಳಚೆ ಪ್ರದೇಶದ ವಾಸಿಗಳ ಕತೆ ಇದರಲ್ಲಿದೆ. ತುಳಿತಕ್ಕೆ ಒಳಗಾದ ಬುಡಕಟ್ಟು ಸಮುದಾಯದ ಕತೆ ಇಲ್ಲಿದೆ. ಹೋರಾಟದ ಸ್ಟೋರಿನೂ ಇಲ್ಲಿದೆ.

Tollywood Actor Nani Bengaluru Visit to Promote the Paradise Movie

ನಾನಿ ವಿಭಿನ್ನ ಲುಕ್

(ಚಿತ್ರ ಕೃಪೆ: ಸಿನಿಮಾ ಟೀಮ್ ಪಿಆರ್‌ಓ ವಿಡಿಯೋ)

ಇದು ಎಷ್ಟು ಗಂಟೆ ಸಿನಿಮಾ

ನಾನಿ ಅಭಿನಯದ ದಿ ಪ್ಯಾರಡೈಸ್ ಸಿನಿಮಾದ ರನ್ ಟೈಮ್ ಕೂಡ ಗೊತ್ತಾಗಿದೆ. 2 ಗಂಟೆ 49 ನಿಮಿಷದ ಚಿತ್ರ ಇದಾಗಿದೆ. ಈ ಚಿತ್ರದ ಟ್ರೈಲರ್ ರಿಲೀಸ್ ಏನು ಆಗಿಲ್ಲ. ಆಗೋದು ಇಲ್ಲ.

ಬೆಳ್ಳಿ ತೆರೆ ಮೇಲೇನೆ ಜನ ಎಲ್ಲ ನೋಡಲಿ ಅಂತ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವಿಷಯವನ್ನ ಸ್ವತಃ ನಾನಿ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದಾರೆ. ಹಾಗೆ ಈ ತೆಲುಗು ಚಿತ್ರ ಸದ್ದು ಮಾಡುತ್ತಿದೆ. ಒಂದು ಆ್ಯಕ್ಷನ್ ಮತ್ತು ಇನ್ನೂ ಒಂದು ನಾನಿಯ ಲುಕ್‌ನಿಂದ ಅಂತಲೇ ಹೇಳಬಹುದು.

ನಾನಿ ವಿಭಿನ್ನ ಲುಕ್

ನಾನಿ ಇಲ್ಲಿವರೆಗೂ ಮಾಡಿರೋ ಚಿತ್ರಗಳಲ್ಲಿ ಈ ರೀತಿ ಲುಕ್ ಅಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ಈಗ ಹೊಸ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಷ್ಟೆ ಸಖತ್ ಆಗಿಯೇ ಇದೆ.

ಇನ್ನುಳಿದಂತೆ ಈ ಚಿತ್ರ ಸೆಪ್ಟೆಂಬರ್-24 ರಂದು ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಇದು ತೆರೆಗೆ ಬರ್ತಿದೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ. ಈ ಚಿತ್ರವು ಕನ್ನಡದ ಟಾಕ್ಸಿಕ್ ಚಿತ್ರದ ತರವೇ ಇದೆ ಅನ್ನುವ ಮಾತು ಕೇಳಿ ಬರ್ತಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed