Dam Water Level: ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಇಂದಿನ ಸಂಪೂರ್ಣ ವರದಿ ಇಲ್ಲಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಜಲಾಶಯದ ನೀರಿನ ಮಟ್ಟ


Last Updated:

ಕರ್ನಾಟಕದಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಕೆಆರ್‍ಎಸ್ ಶೇ. 34.81, ಆಲಮಟ್ಟಿ ಶೇ. 82.36 ಭರ್ತಿ.

ಜಲಾಶಯದ ನೀರಿನ ಮಟ್ಟ
ಜಲಾಶಯದ ನೀರಿನ ಮಟ್ಟ

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಮುಂದುವರಿದಿದ್ದು, ರಾಜ್ಯದ ಪ್ರಮುಖ ಜಲಾಶಯಗಳಿಗೆ ( (Reservoirs)) ನೀರಿನ (Water) ಒಳಹರಿವು ಹೆಚ್ಚಾಗಿದೆ. ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಜಲ ಮೂಲಗಳ ಸ್ಥಿತಿಗತಿ ಹೇಗಿದೆ ಎಂಬುದರ ಸಂಪೂರ್ಣ ಚಿತ್ರಣ ಇಲ್ಲಿದೆ. ಜಲಾಶಯಗಳ ಪ್ರಸ್ತುತ ನೀರಿನ ಮಟ್ಟ (Level) ಮತ್ತು ಸಂಗ್ರಹದ ವಿವರಗಳು ಇಲ್ಲಿವೆ.

ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ಸ್ಥಿತಿ

ಹಾರಂಗಿ ಅಣೆಕಟ್ಟು: ಶೇ. 84.78 ರಷ್ಟು ಭರ್ತಿಯಾಗಿದ್ದು, ಪ್ರಸ್ತುತ ಮಟ್ಟ 2855.18 ಅಡಿ ತಲುಪಿದೆ. ಒಳಹರಿವು 4326 ಕ್ಯೂಸೆಕ್ ಇದೆ.

ಹೇಮಾವತಿ ಅಣೆಕಟ್ಟು: ಶೇ. 61.36 ರಷ್ಟು ತುಂಬಿದ್ದು, ಪ್ರಸ್ತುತ ನೀರಿನ ಮಟ್ಟ 2904.57 ಅಡಿ ಇದೆ.

ಕೆ.ಆರ್.ಸಾಗರ (KRS) ಅಣೆಕಟ್ಟು: ಮಂಡ್ಯದ ಜೀವನಾಡಿಯಾಗಿರುವ ಕೆಆರ್‍ಎಸ್‍ನಲ್ಲಿ ಪ್ರಸ್ತುತ ಮಟ್ಟ 2436.08 ಅಡಿ (ಶೇ. 34.81 ಭರ್ತಿ) ತಲುಪಿದ್ದು, 1800 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಕಬಿನಿ ಅಣೆಕಟ್ಟು: ಶೇ. 66.70 ರಷ್ಟು ಭರ್ತಿಯಾಗಿದ್ದು, ಪ್ರಸ್ತುತ ಮಟ್ಟ 2272.65 ಅಡಿ ದಾಖಲಾಗಿದೆ.

ಆಲಮಟ್ಟಿ ಅಣೆಕಟ್ಟು: ರಾಜ್ಯದ ಅತಿ ದೊಡ್ಡ ಅಣೆಕಟ್ಟುಗಳಲ್ಲಿ ಒಂದಾದ ಆಲಮಟ್ಟಿಯಲ್ಲಿ ನೀರಿನ ಮಟ್ಟ ಭರ್ತಿಯಾಗುತ್ತಿದ್ದು, ಪ್ರಸ್ತುತ ಶೇ. 82.36 (1700.27 ಅಡಿ) ತುಂಬಿದೆ. ಇಲ್ಲಿಗೆ 63792 ಕ್ಯೂಸೆಕ್ ಭಾರೀ ಒಳಹರಿವು ಹರಿದುಬರುತ್ತಿದೆ!

ತುಂಗಭದ್ರಾ ಅಣೆಕಟ್ಟು: ಶೇ. 25.00 ರಷ್ಟು ಭರ್ತಿಯಾಗಿದ್ದು, ಪ್ರಸ್ತುತ ಸಂಗ್ರಹ 26.45 ಟಿಎಂಸಿ ಇದೆ.

ಭದ್ರಾ ಅಣೆಕಟ್ಟು: ಶೇ. 48.31 ರಷ್ಟು ತುಂಬಿದ್ದು, ಪ್ರಸ್ತುತ ಮಟ್ಟ 2122.33 ಅಡಿ ತಲುಪಿದೆ.

ಹಿಡ್ಕಲ್ ಹಾಗೂ ಮಲಪ್ರಭಾ: ಹಿಡ್ಕಲ್ ಅಣೆಕಟ್ಟು ಶೇ. 48.72 ಹಾಗೂ ಮಲಪ್ರಭಾ ಅಣೆಕಟ್ಟು ಶೇ. 32.46 ರಷ್ಟು ಭರ್ತಿಯಾಗಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed