Daali Dhananjaya: “ರಗಸದಅ” ಇದು ಡಾಲಿ ಸಾಹಿತ್ಯ, ಮದರ್ ಪ್ರಾಮಿಸ್ ಹೊಸ ಹಾಡು | | ACTPnews

ಮದರ್ ಪ್ರಾಮಿಸ್ ಹೊಸ ಹಾಡು ಜೂನ್-18 ಔಟ್.!


Last Updated:

ಮದರ್ ಪ್ರಾಮಿಸ್ ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ.ಇದು ಹಾಡಿನ ವಿಚಾರವೇ ಆಗಿದೆ. ಡಾಲಿ ಈ ಹಾಡು ಬರೆದಿದ್ದಾರೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ.

ಮದರ್ ಪ್ರಾಮಿಸ್ ಹೊಸ ಹಾಡು ಜೂನ್-18 ಔಟ್.!
ಮದರ್ ಪ್ರಾಮಿಸ್ ಹೊಸ ಹಾಡು ಜೂನ್-18 ಔಟ್.!

ಡಾಲಿ ಧನಂಜಯ್ (Daali Dhananjaya) ಅಭಿನಯದ ಮದರ್ ಪ್ರಾಮಿಸ್ ಸಿನಿಮಾದ (mother promise) ಹೊಸ ಮಾಹಿತಿ ಹೊರ ಬಂದಿದೆ. ಈ ಮಾಹಿತಿಯ ಪ್ರಕಾರ ಜೂನ್-18 ರಂದು ಈ ಚಿತ್ರದ ಮಸ್ತ್ ಹಾಡೊಂದು ರಿಲೀಸ್ (Song Release) ಆಗುತ್ತಿದೆ. ಇದರ ಪೋಸ್ಟರ್ (Poster) ನೋಡಿದ್ದೇನೆ ಸಾಕು ನೋಡಿ. ಇದು ಅದೆಷ್ಟು ಕಲರ್‌ಫುಲ್ ಅನಿಸುತ್ತದೆ. ಇನ್ನು ಇದನ್ನ ಹಾಡಿವರು. ಇದರ ಲಿರಿಕ್ಸ್ ಎಲ್ಲವೂ ಅಷ್ಟೆ ವಿಶೇಷ ಅನಿಸುತ್ತವೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಇದು ಮಸ್ತ್ ಸಾಂಗ್

ಮದರ್ ಪ್ರಾಮಿಸ್ ಚಿತ್ರದಲ್ಲಿ ಡಾಲಿ ಧನಂಜಯ್ ಪಾತ್ರದ ಖದರ್ ಬೇರೆ ಇದೆ. ರೇಸರ್ ಪಾತ್ರದಲ್ಲಿಯೇ ಡಾಲಿ ಧನಂಜಯ್ ಇಲ್ಲಿ ನಟಿಸಿದ್ದಾರೆ.
daali dahanajaya mother promise Song latest updates

“ರಗಸದಅ” ಇದು ಡಾಲಿ ಬರೆದ ಸಾಹಿತ್ಯ

ಇವರ ಈ ಚಿತ್ರದಲ್ಲಿ ಹಳೆ ನಟಿ ಗೀತಾ ಇದ್ದಾರೆ. ವಿನಯ ಪ್ರಸಾದ್ ಅಮ್ಮನ ರೋಲ್ ಮಾಡಿದ್ದಾರೆ. ಡಾಲಿ ಧನಂಜಯ್ ಗೆಳೆಯ ಪೂರ್ಣ ಮೈಸೂರು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.

ನವನೀತ್ ಶ್ಯಾಮ್ ಸಂಗೀತದ ಸಿನಿಮಾ

ನವನೀತ್ ಶ್ಯಾಮ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಇವರ ಸಂಗೀತದ ಹಾಡು ಜೂನ್-18 ರಂದು ರಿಲೀಸ್ ಆಗುತ್ತಿದೆ. ಡಾಲಿ ಧನಂಜಯ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ವಾಸುಕಿ ವೈಭವ್ ಈ ಒಂದು ಹಾಡನ್ನ ಹಾಡಿದ್ದಾರೆ. ಇವರ ಈ ಹಾಡಿನ ಲಿರಿಕ್ಸ್ ಮಜವಾಗಿದೆ. “ರಗಸದಅ” ಅಂತಲೇ ಇದು ಸಾಗುತ್ತದೆ. ಇದನ್ನ ವಾಸುಕಿ ವೈಭವ್ ಮಜವಾಗಿಯೇ ಹಾಡ್ತಾರೆ ಬಿಡಿ.

ಡಾಲಿ ಪಾತ್ರದ ಹೆಸರೇನು ಗೊತ್ತಾ

ಡಾಲಿ ಧನಂಜಯ್ ಈ ಚಿತ್ರದಲ್ಲಿ ರೋಸಿ ಅನ್ನುವ ರೋಲ್ ಮಾಡಿದ್ದಾರೆ. ಆದರೆ, ಅಸಲಿಗೆ ಇದು ಗೆಳಯರು ಕರೆಯುವ ಹೆಸರಾಗಿದೆ. ಪೂರ್ತಿ ಹೆಸರು ಬೇರೆ ಇದೆ. ಅದು ರಾಮಚಂದ್ರ ಸಿ. ಅನ್ನೋದೇ ಆಗಿದೆ.

daali dahanajaya mother promise Song latest updates

ಈ ಚಿತ್ರದ ಕತೆ ಹಿಂದಿನ ಕತೆ

ಚಿತ್ರದ ಕತೆ ಅಂತ ಬಂದ್ರೆ ಇದು ಗ್ಯಾಂಗ್‌ಸ್ಟರ್ ಕಾಮಿಡಿ ಹಾಗೂ ಎಮೋಷನಲ್ ಥ್ರಿಲ್ಲರ್ ಚಿತ್ರವೇ ಆಗಿದೆ. ಈ ಚಿತ್ರದ ನಿರ್ದೇಶಕರಿಗೆ ಇದು ಮೊದಲ ನಿರ್ದೇಶನದ ಚಿತ್ರವೇ ಆಗಿದೆ. ಡಾಲಿ ಧನಂಜಯ್ ಗೆಳೆಯರೂ ಆಗಿರೋ ಪೂರ್ಣ ಮೈಸೂರು ಈ ಚಿತ್ರದ ಮೂಲಕವೇ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

ಈ ಚಿತ್ರದ ಕತೆ ಹಿಂದಿನ ಕತೆ

ಈ ಚಿತ್ರದ ಕತೆ ಹೆಚ್ಚು ಕಡಿಮೆ 6 ತಿಂಗಳು ಡಾಲಿ ಧನಂಜಯ್ ಟೇಬಲ್ ಮೇಲೆ ಇತ್ತು. ಆದರೆ, ಡಾಲಿ ಇದನ್ನ ನೋಡಿಯೇ ಇರಲಿಲ್ಲ. ಗೆಳೆಯ ಪೂರ್ಣ ಒಂದು ಕತೆ ಮಾಡ್ತಿದ್ದಾರೆ ಅನ್ನೋದು ಗೊತ್ತಿತ್ತು.

ಹಾಗೆ ಒಮ್ಮೆ ನಿನ್ನ ಸಿನಿಮಾ ಏನಾಯಿತೋ ಅಂತಲೇ ಡಾಲಿ ಧನಂಜಯ್ ಕೇಳಿದ್ದರು. ಆಗಲೇ ಪೂರ್ಣ ಕತೆ ನಿನ್ನ ಟೇಬಲ್ ಮೇಲೆನೆ ಇದೆ ಅಂತ ಹೇಳಿದರು. ಆಗಲೇ ಡಾಲಿ ಆ ಕತೆಯನ್ನ ಓದೋಕೆ ಶುರು ಮಾಡಿದರು.

ಇದನ್ನ ನಾನೇ ಪ್ರೊಡ್ಯೂಸ್ ಮಾಡುವೆ

ಈ ಚಿತ್ರದ ಕತೆ ಓದಿದ್ಮೇಲೆ ಡಾಲಿ ಕಾಲ್ ಮಾಡಿದರು. ಕತೆ ತುಂಬಾನೆ ಚೆನ್ನಾಗಿದೆ. ಆದರೆ, ಪೂರ್ತಿ ಮಾಡು, ಇದನ್ನ ನಾನೇ ಪ್ರೊಡ್ಯೂಸ್ ಮಾಡುವೆ ಅಂತಲೇ ಡಾಲಿ ಹೇಳಿದರು.

ಆದರೆ, ಪೂರ್ಣ ಇನ್ನೂ ಒಂದು ಮಾತು ಹೇಳಿದರು. ನೀವು ಪ್ರೊಡ್ಯೂಸ್ ಮಾಡೋದಷ್ಟೆ ಅಲ್ಲ. ಈ ಕತೆಯ ಕಥಾನಾಯಕ ಕೂಡ ನೀವೇ ಆಗ್ಬೇಕು ಅಂತಲೂ ಹೇಳಿದರು. ಹೀಗೆ ಈ ಚಿತ್ರ ಶುರು ಆಗಿದೆ. ಇದೀಗ ರಿಲೀಸ್ ಹಂತಕ್ಕೆ ಬಂದಿದೆ. ಹಾಡುಗಳು ರಿಲೀಸ್ ಆಗುತ್ತಿವೆ. ಸಿನಿಮಾದ ಬಗ್ಗೆ ಒಂದು ಭರವಸೆ ಕೂಡ ಇದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports