Cocktail 2 Movie Review: ‘ಹಿಂದಿ ಉಚ್ಛಾರಣೆ ಸರಿ ಇಲ್ಲ’! ರಶ್ಮಿಕಾ ಅಭಿನಯಕ್ಕೆ ವಿಮರ್ಶಕರಿಂದ ಭಾರೀ ಟೀಕೆ | | ACTPnews

ರಶ್ಮಿಕಾ ಹಿಂದಿ ಭಾಷೆ ಉಚ್ಛಾರಣೆ ಸರಿ ಇಲ್ಲ; ಪಾತ್ರಕ್ಕೆ ಸ್ಕೋಪ್ ಇಲ್ಲ!


Last Updated:

ಕಾಕ್‌ಟೇಲ್ -2 ಸಿನಿಮಾದಲ್ಲಿ ರಶ್ಮಿಕಾ ಪಾತ್ರಕ್ಕೆ ಸ್ಕೋಪ್ ಇಲ್ವೇ? ಹಿಂದಿ ಭಾಷೆ ಬಗ್ಗೆ ಟೀಕೆಗಳು ಕೇಳಿ ಬರ್ತಿವೇಯೇ? ಈ ಚಿತ್ರದ ವಿಮರ್ಶೆಗಳು ಹೇಗಿವೆ? ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ರಶ್ಮಿಕಾ ಹಿಂದಿ ಭಾಷೆ ಉಚ್ಛಾರಣೆ ಸರಿ ಇಲ್ಲ; ಪಾತ್ರಕ್ಕೆ ಸ್ಕೋಪ್ ಇಲ್ಲ!
ರಶ್ಮಿಕಾ ಹಿಂದಿ ಭಾಷೆ ಉಚ್ಛಾರಣೆ ಸರಿ ಇಲ್ಲ; ಪಾತ್ರಕ್ಕೆ ಸ್ಕೋಪ್ ಇಲ್ಲ!

ಕಾಕ್​​ಟೇಲ್ 2 ಚಿತ್ರ (Cocktail 2 Movie) ರಿಲೀಸ್ ಆಗಿದೆ. ಆದರೆ, ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಸೈಡ್ ಲೈನ್ ಆದ್ರೇ? ಈ ಪ್ರಶ್ನೆನೂ ಇದೆ. ಕಾರಣ, ಇಲ್ಲಿ ಕೃತಿ ಸೆನೋನ್ (Kriti Sanon) ಇದ್ದಾರೆ. ಶಾಹಿದ್ ಕಪೂರ್ (Shahid Kapoor) ಮೋಡಿನೂ ಇದೆ. ಇವರ ನಡುವೆ ರಶ್ಮಿಕಾ ಮಂದಣ್ಣ (Rashmika Mandanna) ಕಳೆದೇ ಹೊದ್ರು ಅನ್ನೋದು ಮಾತು ಕೇಳಿ ಬರ್ತಿದೆ. ಇದರ ಹೊರತಾಗಿ ಈ ಚಿತ್ರ ನಾಲ್ಕು ಸ್ಟಾರ್ ರಿವ್ಯೂ ಪಡೆದುಕೊಂಡಿದೆ. ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಈ ಚಿತ್ರಕ್ಕೆ ನಾಲ್ಕು ಸ್ಟಾರ್ ಕೊಟ್ಟಿದ್ದಾರೆ. ಈ ಸಿನಿಮಾದ ರಿವ್ಯೂ ವಿವರ ಇಲ್ಲಿದೆ ಓದಿ.

ಕಾಕ್‌ಟೇಲ್-2 ಚಿತ್ರ ಹೇಗಿದೆ

ಕಾಕ್‌ಟೇಲ್ -2 ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬರ್ತಿದೆ. ಉತ್ತಮ ರಿವ್ಯೂ ಕೂಡ ಬಂದಿವೆ. ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಈ ಚಿತ್ರವನ್ನ ಕೊಂಡಾಡಿದ್ದಾರೆ.
Rashmika Mandanna Shahid Kapoor Kriti Sanon Cocktail 2 Review

ರಶ್ಮಿಕಾ ಅಭಿನಯ ಟೀಕಿಸಿದ ವಿಮರ್ಶಕರು

(ಚಿತ್ರ ಕೃಪೆ: ಶಾಹಿದ್ ಕಪೂರ್ ಇನ್‌ಸ್ಟಾಗ್ರಾಮ್)

ಈ ಚಿತ್ರದ ಮ್ಯೂಸಿಕ್ ಇವರಿಗೆ ಸೂಪರ್ ಅನಿಸಿದೆ. ಎಲ್ಲರ ಅಭಿನಯವಂತೂ ಸಾಲಿಡ್ ಫೀಲ್ ಕೊಟ್ಟಿದೆ. ಈ ಚಿತ್ರ ವಿಷ್ಯೂಲಿ ಸ್ಟನಿಂಗ್ ಆಗಿದೆ.

ಸೂಪರ್ ಸ್ಕ್ರಿಪ್ಟ್

ಈ ಚಿತ್ರದ ಸ್ಕ್ರಿಪ್ಟ್ ಇವರಿಗೆ ಉತ್ತಮ ಅನಿಸಿದೆ. ಹೃದಯ ತಟ್ಟುವ ಬರವಣಿಗೆ ಇದೆ ಅಂತಲೂ ಬಣ್ಣಿಸಿದ್ದಾರೆ. ಈ ಚಿತ್ರದಲ್ಲಿ ತ್ರಿಕೋನ ಪ್ರೇಮಕ ಕಥೆ ಇದೆ.

ಶಾಹಿದ್ ಕಪೂರ್

ಶಾಹಿದ್ ಕಪೂರ್ ಅಭಿನಯ ಉತ್ತಮವಾಗಿದೆ. ಭಾವನಾತ್ಮಕ ಸನ್ನಿವೇಷಗಳನ್ನ ತುಂಬಾನೆ ಚೆನ್ನಾಗಿ ಮಾಡಿದ್ದಾರೆ. ಚಿತ್ರದಲ್ಲಿ ಬರುವ ಹಾಸ್ಯ ದೃಶ್ಯಗಳಲ್ಲೂ ಚೆನ್ನಾಗಿ ಮಾಡಿದ್ದಾರೆ.

ಟೋಟಲ್ ಆಗಿ ಹೇಳೋದೇ ಆದ್ರೆ, ಶಾಹಿತ್ ಕಪೂರ್ ಇಲ್ಲಿ ಟಾಪ್ ಅಲ್ಲಿಯೇ ಇದ್ದಾರೆ. ಈ ಚಿತ್ರದಲ್ಲಿ ಶಾಹಿದ್ ಸೂಪರ್ ಅನ್ನುವ ಅರ್ಥದಲ್ಲಿಯೇ ವಿಶ್ಲೇಷಣೆ ಮಾಡಿದ್ದಾರೆ.

ಕೃತಿ ಸೆನೋನ್

ನಟಿ ಕೃತಿ ಸೆನೋನ್ ಇಲ್ಲಿ ಅದ್ಭುತವಾಗಿಯೇ ನಟಿಸಿದ್ದಾರೆ. ಕೆಲವು ದೃಶ್ಯದಲ್ಲಿ ತುಂಬಾನೆ ಚೆನ್ನಾಗಿ ಮ್ಯಾನೇಜ್ ಮಾಡಿದ್ದಾರೆ. ಈ ಚಿತ್ರದ ಅಭಿನಯ ಕೃತಿ ಸೆನೋನ್ ಚಿತ್ರ ಬದುಕಿನ ದಿ ಬೆಸ್ಟ್ ಆಗಿದೆ ಅಂತಲೂ ವಿಶ್ಲೇಷಣೆ ಮಾಡಿದ್ದಾರೆ.

Rashmika Mandanna Shahid Kapoor Kriti Sanon Cocktail 2 Review

ಕೃತಿ ಸೆನೋನ್

ಆದರೆ, ರಶ್ಮಿಕಾ ಮಂದಣ್ಣ ಡಲ್ ಹೊಡೆದಿದ್ದಾರೆ. ಇವರ ಪಾತ್ರದ ಬಗ್ಗೆ ಅಂತಹ ವಿಶೇಷ ವಿಶ್ಲೇಷಣೆ ಏನೂ ಇಲ್ಲ. ಆದರೆ, ಕಟುವಾಗಿಯೇ ಟೀಕಿಸಿದ್ದಾರೆ ಅಂತ ಹೇಳಬಹುದು.

ಹಿಂದಿ ಉಚ್ಛಾರಣೆ ಸರಿ ಹೋಗ್ಬೇಕು

ರಶ್ಮಿಕಾ ಮಂದಣ್ಣ ಹಿಂದಿ ಉಚ್ಛಾರಣೆ ಸರಿ ಹೋಗಬೇಕಿದೆ. ಆದರೆ, ಈ ಒಂದು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರ ಪಾತ್ರಕ್ಕೆ ಸ್ಕೋಪ್ ಕೂಡ ಇಲ್ಲ. ಹಾಗಾಗಿಯೇ ರಶ್ಮಿಕಾ ಇಲ್ಲಿ ಹೆಚ್ಚು ಮಿಂಚಲು ಆಗಿಲ್ಲ ಅನ್ನೋದನ್ನು ತರಣ್ ಆದರ್ಶ್ ಬರೆದುಕೊಂಡಿದ್ದಾರೆ.

ಕಾಕ್‌ಟೇಲ್ -2 ಸಿನಿಮಾ

ಕಾಕ್‌ಟೇಲ್ -2 ಚಿತ್ರವನ್ನ ಹೋಮಿ ಅದಜಾನಿಯಾ ಡೈರೆಕ್ಷನ್ ಮಾಡಿದ್ದಾರೆ.150 ಕೋಟಿ ಬಜೆಟ್ ಅಲ್ಲಿ ಇದು ತಯಾರಾಗಿದೆ. ಜೂನ್-19 ರಂದು ಇದರು ತೆರೆ ಕಂಡಿದೆ.

Luv ರಂಜನ್ ಬರೆದ ಈ ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿದ್ದಾರೆ. ಪ್ರೀತಂ ಅವರ ಸಂಗೀತ ಈ ಚಿತ್ರಕ್ಕಿದೆ. ಇನ್ನುಳಿದಂತೆ ಈ ಚಿತ್ರಕ್ಕೆ ಒಳ್ಳೆ ವಿಮರ್ಶೆ ಬಂದಿವೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports