Last Updated:
ಮದರ್ ಪ್ರಾಮಸ್ ನಮ್ಮ ಚಿತ್ರ ನಿಮಗೆ ಮಜಾ ಕೊಡುತ್ತದೆ. ಟ್ರೈಲರ್ ನೋಡಿ ಇದೊಂದು ರೌಡಿಸಂ ಚಿತ್ರ ಅನ್ಕೋಬೇಡಿ. ಇಲ್ಲಿ ಬೇರೇನೆ ಇದೆ ಅಂತ ಡಾಲಿ ಧನಂಜಯ್ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಡಾಲಿ ಧನಂಜಯ್ (Daali Dhananjaya) ಒಂದು ಭರವಸೆ ಕೊಟ್ಟಿದ್ದಾರೆ. ಅದು ನಗುವಿನ ಭರವಸೆನೆ ಆಗಿದೆ. ಈ ಹಿಂದಿನ ಚಿತ್ರಗಳನ್ನ ಕೈ ಹಿಡಿದ ಜನರಿಗೆ ಈ ಸಲ ಹಾಸ್ಯದ (Comedy) ರಸದೌತಣ ಕೊಡ್ತಿದ್ದಾರೆ. ಸಿನಿಮಾದ ಟ್ರೈಲರ್ (Trailer) ನೋಡಿ ಇದೊಂದು ರೌಡಿಂಸಂ ಸಿನಿಮಾ ಅನ್ಕೋಬೇಡಿ. ಇದರಲ್ಲಿ ಎಲ್ಲವೂ ಇದೆ. ಸಿನಿಮಾನೇ ಗೊತ್ತಿಲ್ಲದವರಿಗೆ ಈ ಚಿತ್ರ ತೋರಿಸಿದ್ದೇವೆ. ಎಲ್ಲರೂ ಸೂಪರ್ ಅಂತ ಹೇಳಿದ್ದಾರೆ. ನೀವೂ ಇದನ್ನ ನೋಡಿದ್ಮೇಲೆ ಅದನ್ನೆ ಹೇಳ್ತೀರಿ ಅಂತ ನಂಬಿಕೆ ಇದೆ ಅಂತಲೇ ಡಾಲಿ ಧನಂಜಯ್ (Daali Dhananjaya) ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಪುಸ್ತಕ ರೂಪದಲ್ಲಿ ಮಾಹಿತಿ
(ಚಿತ್ರ ಕೃಪೆ: ಡಾಲಿ ಧನಂಜಯ್ ಇನ್‌ಸ್ಟಾಗ್ರಾಮ್)
ಈ ಚಿತ್ರವನ್ನ ಈಗಾಗಲೇ ಸಿನಿಮಾ ಬಗ್ಗೆ ಗೊತ್ತೇ ಇರದವರಿಗೆ ತೋರಿಸಿದ್ದೇವೆ. ಅವರೂ ಈ ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ. ಸೂಪರ್ ಅನ್ನುವ ಅಭಿಪ್ರಾಯವನ್ನು ಕೊಟ್ಟಿದ್ದಾರೆ. ನೀವು ಬಂದು ಚಿತ್ರ ನೋಡಿದರೂ ನಿಮಗೂ ಅದೇ ಅನುಭವ ಆಗುತ್ತದೆ ಅಂತಲೇ ಡಾಲಿ ಧನಂಜಯ್ ಹೇಳಿದ್ದಾರೆ.
ಮದರ್ ಪ್ರಾಮಿಸ್ ಚಿತ್ರದ ಟ್ರೈಲರ್ ನೋಡಿದವರಿಗೆ ಇದು ರೌಡಿಸಂ ಚಿತ್ರ ಅನಿಸುತ್ತದೆ. ಮದರ್ ಸೆಂಟಿಮೆಂಟ್ ಇರೋ ಸಿನಿಮಾ ಕೂಡ ಅನಿಸುತ್ತದೆ.
ಆದರೆ, ಚಿತ್ರದ ಒಳಗೆ ಬೇರೆ ಮ್ಯಾಟರ್ ಇದೆ. ಹಾಸ್ಯಕ್ಕೆ ಏನು ಕೊರತೇನೆ ಇಲ್ಲ. ಚಿತ್ರ ನೋಡ್ತಾ ಹೋದಂತೆ ನಿಮಗೆ ಮಜಾ ಸಿಗೋದು ಪಕ್ಕ ಅಂತಲೂ ಸ್ವತಃ ಡಾಲಿ ಧನಂಜಯ್ ಹೇಳಿಕೊಂಡಿದ್ದಾರೆ.
ಈ ಚಿತ್ರ ಶುರು ಆಗುವ ಮೊದಲು ಡಾಲಿ ಧನಂಜಯ್ ಒಂದು ಹೊಸ ಐಡಿಯಾ ಮಾಡಿದ್ದರು. ಪುಸ್ತಕದ ಪುಟದ ರೂಪದಲ್ಲಿಯೇ ಸಿನಿಮಾ ಶುರು ಆದ ರೀತಿ ಮತ್ತು ಮೊದಲು ಸ್ಕ್ರಿಪ್ಟ್ ಓದಿದಾಗ ಆದ ಅನುಭವದ ಕುರಿತು ಹೇಳಿಕೊಂಡಿದ್ದರು.
ಜುಲೈ-10ಕ್ಕೆ ಚಿತ್ರ ರಿಲೀಸ್
(ಚಿತ್ರ ಕೃಪೆ: ಡಾಲಿ ಧನಂಜಯ್ ಇನ್‌ಸ್ಟಾಗ್ರಾಮ್)
ಅದೇ ರೀತಿನೇ ಇದೀಗ ತಮ್ಮ ಮದರ್ ಪ್ರಾಮಿಸ್ ಚಿತ್ರದಲ್ಲಿರೋ ವಿಷಯದ ಝಲಕ್ ಕೊಟ್ಟಿದ್ದಾರೆ. ಹಾಗೆ ಕೊಟ್ಟಿರೋ ಮಾಹಿತಿ ಕೂಡ ಪುಸ್ತಕದ ಪುಟದಲ್ಲಿ ಬರೆದಂತೆ ಇದೆ.
ಈ ಚಿತ್ರದ ಸದ್ಯದ ವಿಷಯವನ್ನ ಡಾಲಿ ಧನಂಜಯ್ ಹೇಳಿದ್ದಾರೆ. ಅದು ಅಕ್ಷರ ರೂಪದಲ್ಲಿ ಪುಟದ ಮೇಲೆ ಮೂಡುತ್ತದೆ. ಅದು ನೋಡಲು ಅಷ್ಟೆ ಖುಷನೂ ಕೊಡುತ್ತದೆ. ಹಾಗೆ ಚಿತ್ರದ ಬಗೆಗಿನ ಕುತೂಹಲವನ್ನು ಹೆಚ್ಚಿಸುತ್ತದೆ.
ಮದರ್ ಪ್ರಾಮಿಸ್ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಮುಂದಿನ ತಿಂಗಳು ಅಂದ್ರೆ ಈಗಾಗಲೇ ಹೇಳಿದಂತೆ ಜುಲೈ-10 ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ.
ಚಿತ್ರದಲ್ಲಿ ಹೊಸ ಕಲಾವಿದರೂ ಇದ್ದಾರೆ. ಹಳೆ ಕಲಾವಿದರಲ್ಲಿ ರಾಜಕುಮಾರ್ ಚಿತ್ರದ ನಾಯಕಿ ಗೀತಾ ಅವರೂ ಇದ್ದಾರೆ. ವಿನಯ ಪ್ರಸಾದ್ ಅವರೂ ನಟಿಸಿದ್ದಾರೆ. ಇವರೆಲ್ಲ ಇರೋ ಈ ಚಿತ್ರ ಕನ್ನಡದ ಮತ್ತೊಂದು ಭರವಸೆಯ ಸಿನಿಮಾ ಅನ್ನುವ ಅಭಿಪ್ರಾಯವೂ ಬರ್ತಿವೆ ಅಂತ ಹೇಳಬಹುದು.
Bangalore [Bangalore],Bangalore,Karnataka













