Last Updated:
ಮದರ್ ಪ್ರಾಮಿಸ್ ಚಿತ್ರದ ಹೊಸ ವರ್ಷನ್ ಈ ವಾರದಿಂದ ಪ್ರದರ್ಶನ ಆಗುತ್ತಿದೆ. ಚಿತ್ರದ ಒಟ್ಟು ಅವಧಿಯಲ್ಲಿ 20 ನಿಮಿಷದಷ್ಟು ಕಟ್ ಕೂಡ ಮಾಡಲಾಗಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮದರ್ ಪ್ರಾಮಿಸ್ ಚಿತ್ರ (Mother Promise Movie) ಮೊನ್ನೆ ಜುಲೈ-10 ರಂದು ರಿಲೀಸ್ ಆಗಿದೆ. ಈ ಚಿತ್ರಕ್ಕೆ ಮೊದಲ ದಿನವೂ ಒಳ್ಳೆ ರೆಸ್ಪಾನ್ಸ್ (Good Response) ಬಂದಿವೆ. ಪ್ರೀಮಿಯರ್ ಶೋದಲ್ಲೂ ಈ ಸಿನಿಮಾವನ್ನ (Movie) ನೋಡಿದ ಜನ ಮೆಚ್ಚಿಕೊಂಡಿದ್ದಾರೆ. ಆದರೆ, ಚಿತ್ರ ಯಾಕೋ ಲ್ಯಾಗ್ ಆಯಿತು ಅನ್ನೋ ಮಾತುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿಯೇ ಮದರ್ ಪ್ರಾಮಿಸ್ ಚಿತ್ರದ (Mother Promise Movie) ಒಟ್ಟು ಅವಧಿಯಲ್ಲಿ 20 ನಿಮಿಷ ಕಟ್ ಮಾಡಿದ್ದಾರೆ. ಈ ವಿಷಯವನ್ನ ಚಿತ್ರ ತಂಡವೇ ಅಧಿಕೃತವಾಗಿಯೇ ಹೇಳಿಕೊಂಡಿದೆ. ಇದರ ಇತರ ವಿವರ ಇಲ್ಲಿದೆ ಓದಿ.
ಈ ವಾರದಿಂದ ಹೊಸ ವರ್ಷನ್
ಈ 20 ನಿಮಿಷ ಕತ್ತರಿಸಲು ಕಾರಣವು ಇದೆ. ಈಗಾಗಲೇ ಹೇಳಿದಂತೆ ಈ ಚಿತ್ರದ ಒಟ್ಟು ಸಮಯದಲ್ಲಿ 20 ನಿಮಿಷ ಲ್ಯಾಗ್ ಆಯಿತು ಅನ್ನೋ ಮಾತುಗಳು ಕೇಳಿ ಬಂದಿವೆ. ಈ ಒಂದು ಕಾರಣಕ್ಕೇನೆ ಸಿನಿಮಾ ತಂಡ ಜನಕ್ಕೆ ಯಾವುದು ಜಾಸ್ತಿ ಆಗಿದೆ ಅನಿಸಿದೆಯೋ ಅದನ್ನೆ ಕಟ್ ಮಾಡಿದ್ದಾರೆ.
ಮದರ್ ಪ್ರಾಮಿಸ್ ಚಿತ್ರ ಈ ವಾರದಿಂದ ಹೊಸ ವರ್ಷನ್ ಪ್ರದರ್ಶನ ಆಗುತ್ತಿದೆ. 20 ನಿಮಿಷ ಟ್ರಿಮ್ ಆಗಿರೋ ಚಿತ್ರವೇ ಈ ವಾರದಿಂದ ಪ್ರದರ್ಶನ ಆಗುತ್ತಿದೆ.
ಈ ಚಿತ್ರಕ್ಕೆ ಪ್ರೀಮಿಯರ್ ಶೋದಲ್ಲಿ ಒಳ್ಳೆಯ ಅಭಿಪ್ರಾಯವೂ ಬಂದಿವೆ. ರಿಲೀಸ್ ಆದ ಮೊದಲ ದಿನವೂ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೇನೂ ಬಂದಿವೆ. ಆದರೆ, ಲ್ಯಾಗ್ ಆಯಿತು ಅಂತ ಹೇಳಿದವರೂ ಇದ್ದಾರೆ. ಹಾಗಾಗಿಯೇ 20 ನಿಮಿಷ ಚಿತ್ರ ಕಟ್ ಆಗಿದೆ ನೋಡಿ.
ಡಾಲಿ ಧನಂಜಯ್ ತುಂಬಾನೆ ಬೇಸರದಲ್ಲಿಯೇ ಇದ್ದಾರೆ. ಮದರ್ ಪ್ರಾಮಿಸ್ ಚಿತ್ರ ಒಳ್ಳೆ ಚಿತ್ರವೇ ಆಗಿದೆ. ಆದರೂ ಈ ಚಿತ್ರಕ್ಕೆ ನೆಗೆಟಿವ್ ಮಾಡ್ತಿದ್ದಾರೆ ಅನ್ನೋ ಬೇಸರ ಇದೆ.
20 ನಿಮಿಷ ಎಗರೋಯ್ತು
ಈ ಹಿನ್ನೆಲೆಯಲ್ಲಿ ಜುಲೈ-16 ರಂದು ನಡೆದ ಪ್ರೆಸ್ ಮೀಟ್ ಅಲ್ಲಿ ಡಾಲಿ ಧನಂಜಯ್ ಮಾತನಾಡಿದ್ದಾರೆ. ಒಳ್ಳೆ ಸಿನಿಮಾಗಳಿಗೆ ನೆಗೆಟಿವ್ ಮಾಡ್ಬೇಡಿ. ಜನ ಹೋದ್ಮೇಲೂ ವಿಡಿಯೋ ಮಾಡಿ ಖಾಲಿ ಥಿಯೇಟರ್ ತೋರಿಸಬಹುದಲ್ವೇ?
ಕೋಟಿ ಬಾಚಿಕೊಳ್ತಿರೋ ಚಿತ್ರಗಳಿಗೂ ಈ ರೀತಿ ಮಾಡಬಹುದು. ಆದರೆ, ನಮ್ಮ ಚಿತ್ರ ಚೆನ್ನಾಗಿದೆ. ಯಾಕೆ ಹೀಗೆ ಮಾಡ್ತಿದ್ದಾರೋ ಏನೋ ಅಂತಲೂ ಡಾಲಿ ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಚಿತ್ರಗಳಲ್ಲಿ ಎಲ್ಲವೂ ಚೆನ್ನಾಗಿವೆ ಅಂತ ಹೇಳೋದಿಲ್ಲ. ಕೆಲವು ಚೆನ್ನಾಗಿಲ್ಲ ಅಂತ ನಮಗೂ ಗೊತ್ತಿದೆ. ಆದರೆ, ಆ ರೀತಿಯ ಚಿತ್ರಗಳು ಚೆನ್ನಾಗಿವೆ ಅಂತ ನಾವು ಎಂದೂ ಬಂದು ಹೇಳಿಕೊಂಡಿಲ್ಲ.
ಆದರೆ, ಮದರ್ ಪ್ರಾಮಿಸ್ ಚಿತ್ರ ನಿಜಕ್ಕೂ ಒಳ್ಳೆ ಚಿತ್ರವೇ ಆಗಿದೆ. ಈ ಚಿತ್ರಕ್ಕೆ ನೆಗೆಟಿವ್ ಮಾಡಿದ್ರೆ ಹೇಗೆ? ಹಾಗೆ ಮಾಡೋರಿಗೆ ಏನು ಹೇಳೋಣ? ವೈಯುಕ್ತಿಕವಾಗಿ ಅವರಿಗೆ ಏನಾದರೂ ಹೇಳೋಕೆ ಆಗುತ್ತಾ? ಅಂತಲೂ ಡಾಲಿ ಧನಂಜಯ್ ತಮ್ಮ ಬೇಸರವನ್ನ ಈ ರೀತಿ ವ್ಯಕ್ತಪಡಿಸಿದ್ದಾರೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka














