ಮದರ್ ಪ್ರಾಮಿಸ್ ಯುವಕರಿಗೆ ಇಷ್ಟ ಆಗುವ ಚಿತ್ರವೇ ಆಗಿದೆ. ಎಲ್ಲರಿಗೂ ಇದು ಬಹುತೇಕ ಇಷ್ಟ ಆಗಿದೆ. ಆದರೂ ಕೆಲವರಿಗೆ ಇಷ್ಟ ಆಗಿಲ್ಲ ಅನ್ನೋದು ಇದೆ.
ಸಿನಿಮಾ ಸಾಯಿಸೋ ಕೆಲಸ ಮಾಡ್ಬೇಡಿ
(ಚಿತ್ರ ಕೃಪೆ: ಡಾಲಿ ಧನಂಜಯ್ ಇನ್ಸ್ಟಾಗ್ರಾಮ್)
ಸಿನಿಮಾವನ್ನ ವಿಮರ್ಶೆ ಮಾಡಿ ಅಭಿಪ್ರಾಯ ತಿಳಿಸುವವರಿಗೆ ಸ್ವಾಗತಿಸುತ್ತೇನೆ. ಆದರೆ, ಬೇಕು ಅಂತಲೇ ಒಳ್ಳೆ ಸಿನಿಮಾವನ್ನ ಸಾಯಿಸೋದು ಅದೆಷ್ಟು ಸರಿ ಹೇಳಿ?
ಚಿತ್ರಗಳ ಪ್ರಾಮಾಣಿಕ ವಿಮರ್ಶೆಗೆ ಅವಕಾಶ ಮಾಡಿಕೊಡಿ, ಸಿನಿಮಾ ಸಾಯಿಸೋ ಕೆಲಸ ಮಾಡ್ಬೇಡಿ ಅಂತಲೂ ಡಾಲಿ ಧನಂಜಯ್ ಹೇಳಿದ್ದಾರೆ.
ಮೊನ್ನೆ ಜುಲೈ-10 ರಂದು ಮದರ್ ಪ್ರಾಮಿಸ್ ಚಿತ್ರ ರಿಲೀಸ್ ಆಗಿದೆ. ಪ್ರೀಮಿಯರ್ ಅಲ್ಲೂ ಈ ಚಿತ್ರಕ್ಕೆ ಒಳ್ಳೆ ಓಪಿನಿಯನ್ ಬಂದಿತ್ತು. ಮೊದಲ ದಿನವೇ ಚಿತ್ರ ನೋಡಿದರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ನೆಗೆಟಿವ್ ಕಾಮೆಂಟ್ಸ್ ಯಾಕೆ ಬರ್ತಿವೆ ಅನ್ನುವ ಪ್ರಶ್ನೆಗಳೂ ಇವೆ ನೋಡಿ.
ಡಾಲಿ ಧನಂಜಯ್ ಭಾರೀ ಭರವಸೆ
ಡಾಲಿ ಧನಂಜಯ್ ಅವರು ಈ ಮದರ್ ಪ್ರಾಮಿಸ್ ಚಿತ್ರದ ಬಗ್ಗೆ ತುಂಬಾನೆ ಹೋಪ್ ಇಟ್ಟುಕೊಂಡಿದ್ದಾರೆ. ಚಿತ್ರ ನೋಡಲು ಬಂದವರಿಗೆ ಮೋಸ ಆಗೋದೇ ಇಲ್ಲ. ಚಿತ್ರದಲ್ಲಿ ನಿಮಗೆ ಒಳ್ಳೆ ಮಜಾ ಸಿಗುತ್ತದೆ ಅಂತಲೂ ಹೇಳಿದ್ದರು.
ಆ ಪ್ರಕಾರ ಈ ಚಿತ್ರ ಯುವಕ ಮತ್ತು ಯುವತಿಯರಿಗೆ ಇಷ್ಟ ಆಗುತ್ತಿದೆ. ಆದರೂ ಈ ಸಿನಿಮಾ ಬಗ್ಗೆ ನೆಗೆಟಿವ್ ಕಾಮೆಂಟ್ಸ್ ಬರ್ತಿವೆ. ಯಾಕೆ ಈ ರೀತಿ ಅನ್ನುವ ಪ್ರಶ್ನೆಯನ್ನೆ ಡಾಲಿ ಧನಂಜಯ್ ಕೇಳಿದ್ದಾರೆ.
Mother Promise, ತುಂಬಾ ಜನಕ್ಕೆ ಸಿನಿಮಾ ಇಷ್ಟ ಆಗ್ತಿದೆ, Theater ಅಲ್ಲಿ ಮಜಾ ಮಾಡ್ತಾ ಇದಾರೆ. ಕೆಲವೊಬ್ರಿಗೆ ಇಷ್ಟ ಆಗದೆ ಕೂಡ ಇರಬಹುದು, ಅದನ್ನ ಹೇಳಿದ್ರೂ appreciate ಮಾಡನ, critics are always welcome. ಆದ್ರೆ ಬೇಕು ಅಂತ ಚೆನ್ನಾಗಿ ಆಗ್ತಿರೋ ಸಿನಿಮಾನ ಸಾಯಿಸೋಕೆ, ಒಂದು hatred campaign run ಮಾಡೋದು , ಚಿತ್ರರಂಗಕ್ಕೆ ಒಳ್ಳೇದಲ್ಲ.
ಇದು ಚೆನ್ನಾಗಿ ಆಗ್ತಿರೋ ಎಲ್ಲ ಸಿನಿಮಾಗಳಿಗೂ ಆಗ್ತಾ ಇದೆ. ಅದಿಕ್ಕೆ ಎಲ್ಲ ನಿರ್ಮಾಪಕರು court ಇಂದ order ತಂದು ratings ನ disable ಮಾಡ್ತಾರೆ. ಅದರಿಂದ ಪ್ರಾಮಾಣಿಕ ವಿಮರ್ಶೆಗಳಿಗೂ ತಡೆಯೊಡ್ಡಿದಂಗೆ ಆಗತ್ತೆ. ಒಂದು healthy environment creates ಆಗಬೇಕು. ಈ ಕೆಟ್ಟ culture end ಆಗಬೇಕು ಅಂತಲೇ ಡಾಲಿ ಧನಂಜಯ್ ಇದನ್ನ ಇನ್ಸ್ಟಾಗ್ರಾಮ್ ಅಲ್ಲಿ ಬರೆದುಕೊಂಡಿದ್ದಾರೆ. ಥಿಯೇಟರ್ ಖಾಳಿ ಹೊಡೆಯುತ್ತಿದೆ ಅಂತ ತೋರಿರೋ ವಿಡಿಯೋನೂ ಇಲ್ಲಿ ಹಂಚಿಕೊಂಡಿದ್ದಾರೆ ಅಂತ ಹೇಳಬಹುದು.











