Last Updated:
‘ಪ್ರತಿಬಿಂಬ್’ ಅಪ್ಲಿಕೇಶನ್ ಸೈಬರ್ ಅಪರಾಧಿಗಳನ್ನು ಗುರುತಿಸುವಲ್ಲಿ ಮತ್ತು ಪತ್ತೆಹಚ್ಚುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಜುಲೈ ವರೆಗೆ, ಅಪ್ಲಿಕೇಶನ್ಗೆ ಸಂಬಂಧಿಸಿದ 121 ಪ್ರಕರಣಗಳಲ್ಲಿ 336 ಆರೋಪಿಗಳನ್ನು ಬಂಧಿಸಲಾಗಿದೆ, ಜೊತೆಗೆ 545 ಮೊಬೈಲ್ ಫೋನ್ಗಳು ಮತ್ತು 655 ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಂಚಿ: ದೇಶಾದ್ಯಂತ ಹರಡಿರುವ ಸೈಬರ್ ಅಪರಾಧ ಜಾಲಗಳಿಗೆ ಭಾರಿ ಹೊಡೆತ ನೀಡಿರುವ ಜಾರ್ಖಂಡ್ ಪೊಲೀಸರು ಜನವರಿ ಮತ್ತು ಜುಲೈ ನಡುವೆ ಸಂತ್ರಸ್ತರಿಂದ ದೋಚಿದ 150 ಕೋಟಿ ರೂ.ಗಳನ್ನು (Cyber Crime) ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಈಗಾಗಲೇ 19 ಕೋಟಿ ರೂ.ಗಳನ್ನು ಸಂತ್ರಸ್ತರಿಗೆ ಹಿಂತಿರುಗಿಸಲಾಗಿದೆ.














