Last Updated:
ಇಶಾನ್ ಕಿಶನ್ ಬ್ಯಾಟಿಂಗ್ ಮಾಡುವಾಗಲೂ ಅವರು ತಮ್ಮ ಸೀಟಿ ಮೂಲಕ ಕಿರಿಕಿರಿಯನ್ನು ಉಂಟುಮಾಡುತ್ತಲೇ ಇದ್ದರು. ಅವರು ಔಟ್ ಆದ ಕ್ಷಣದಲ್ಲಿ ಜೋರಾಗಿ ವಿಜಲ್ ಹೊಡೆದು ಸಂಭ್ರಮಿಸಿದರು. ಪರಿಣಾಮವಾಗಿ, ತೀವ್ರವಾಗಿ ಹತಾಶೆಗೊಂಡ ಇಶಾನ್ ಕಿಶನ್, ಪಂದ್ಯ ಮುಗಿದ ತಕ್ಷಣ ಕೋಪದಿಂದ ಮನೆಗೆ ಹೋಗಿ ಅಲ್ಲಿಯೇ ವಿಜಲ್ ಹೊಡೆಯುವಂತೆ ಸೂಚಿಸಿದರು.
ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಉಪನಾಯಕ ಇಶಾನ್ ಕಿಶನ್ (Ishan Kishan) ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳನ್ನು ಕ್ರೂರವಾಗಿ ಟ್ರೋಲ್ ಮಾಡಿದ್ದಾರೆ. ಸೋಮವಾರ ರಾತ್ರಿ ಸನ್ರೈಸರ್ಸ್ ಹೈದರಾಬಾದ್ ಸಿಎಸ್ಕೆ ವಿರುದ್ಧ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಪ್ಲೇಆಫ್ ಪ್ರವೇಶಿಸಿತು. ಈ ಗೆಲುವಿನ ಬಳಿಕ ಇಶಾನ್ ಕಿಶನ್ CSK ಬೆಂಬಲಿಗರ ಕಡೆಗೆ ತಿರುಗಿ ಹಲವಾರು ಬಾರಿ ಸನ್ನೆಗಳನ್ನು ಮಾಡಿದರು. CSK ಸೋತಿದೆ ಎಂದು ಹೇಳುತ್ತಾ, ನೀವು ಮನೆಗೆ ಹೋಗಿ ಅಲ್ಲಿಯೇ ವಿಜಲ್ ಊದುವಂತೆ ಸೂಚಿಸಿದರು. ತಾವೂ ಪೆವಿಲಿಯನ್ ಸೇರುವವರೆಗೂ ಎಲ್ಲಾ ಮುಗೀತು ಮನೆಗೆ ಹೋಗಿ ಎಂದು ಹಲವು ಬಾರಿ ಸನ್ನೆ ಮಾಡಿ ಟ್ರೋಲ್ ಮಾಡಿದ್ದಾರೆ.
ಸನ್ರೈಸರ್ಸ್ ಗೆಲುವು ಸಾಧಿಸಿದ ತಕ್ಷಣ, ಇಶಾನ್ ಚೆನ್ನೈ ಅಭಿಮಾನಿಗಳ ಬಗ್ಗೆ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದರು. ಸಿಎಸ್ಕೆ ಅಭಿಮಾನಿಗಳು ಪಂದ್ಯ ಮುಗಿಯುವವರೆಗೂ ವಿಜಲ್ ಊದುತ್ತಲೇ ಇದ್ದರು. ಇದರಿಂದ ಕೋಪಗೊಂಡ ಇಶಾನ್ ತಮ್ಮ ಸನ್ನೆಗಳ ಮೂಲಕ, ಅವರು ವಿಜಲ್ ಹೊಡೆಯುವುದನ್ನ ನಿಲ್ಲಿಸಿ ಕ್ರೀಡಾಂಗಣದಿಂದ ಹೊರಗೆ ಹೋಗಿ ಎಂದು ಸೂಚಿಸಿದರು. ಈ ಘಟನೆಯ ವೀಡಿಯೊ ತುಣುಕು ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗಿದೆ.
ಚೆಪಾಕ್ ಕ್ರೀಡಾಂಗಣ ಸಿಎಸ್ಕೆ ತವರು ಮೈದಾನವಾಗಿರುವುದರಿಂದ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಆ ಪಂದ್ಯದಲ್ಲಿ, ಸನ್ರೈಸರ್ಸ್ ಹೈದರಾಬಾದ್ ತಂಡವು ತನ್ನ ಎದುರಾಳಿಗಳನ್ನು 5 ವಿಕೆಟ್ಗಳಿಂದ ಸೋಲಿಸಿತು. ಆದರೆ, ಕ್ರೀಡಾಂಗಣವು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು. ಪಂದ್ಯದುದ್ದಕ್ಕೂ, ಚೆನ್ನೈ ಅಭಿಮಾನಿಗಳು ನಿರಂತರವಾಗಿ ಸೀಟಿ ಹೊಡೆಯುವ ಮೂಲಕ ತಮ್ಮ ತಂಡಕ್ಕೆ ಬೆಂಬಲವಾಗಿ ನಿಂತರು.
ಇಶಾನ್ ಕಿಶನ್ ಬ್ಯಾಟಿಂಗ್ ಮಾಡುವಾಗಲೂ ಅವರು ತಮ್ಮ ಸೀಟಿ ಮೂಲಕ ಕಿರಿಕಿರಿಯನ್ನು ಉಂಟುಮಾಡುತ್ತಲೇ ಇದ್ದರು. ಅವರು ಔಟ್ ಆದ ಕ್ಷಣದಲ್ಲಿ ಜೋರಾಗಿ ವಿಜಲ್ ಹೊಡೆದು ಸಂಭ್ರಮಿಸಿದರು. ಪರಿಣಾಮವಾಗಿ, ತೀವ್ರವಾಗಿ ಹತಾಶೆಗೊಂಡ ಇಶಾನ್ ಕಿಶನ್, ಪಂದ್ಯ ಮುಗಿದ ತಕ್ಷಣ ಕೋಪದಿಂದ ಮನೆಗೆ ಹೋಗಿ ಅಲ್ಲಿಯೇ ವಿಜಲ್ ಹೊಡೆಯುವಂತೆ ಸೂಚಿಸಿದರು.
ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಇದು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಇಶಾನ್ ಚೆನ್ನೈ ಅಭಿಮಾನಿಗಳನ್ನು ಅಣಕಿಸುವುದು ಸೂಕ್ತವಲ್ಲ ಎಂದು ಕೆಲವರು ವಾದಿಸಿದರೆ, ಇತರರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಇದು ಸಿಎಸ್ಕೆ ಅಭಿಮಾನಿಗಳಿಗೆ ಕಲಿಸಬೇಕಾದ ಪಾಠ ಎಂದು ಪ್ರತಿಪಾದಿಸುತ್ತಿದ್ದಾರೆ. ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಈ ಪೈಪೋಟಿ ಇಲ್ಲಿಗೆ ಕೊನೆಗೊಳ್ಳುವುದಿಲ್ಲ ಆದರೆ ಮುಂಬರುವ ಋತುವಿನಲ್ಲಿಯೂ ಮುಂದುವರಿಯುತ್ತದೆ ಎಂದು ಕೆಲವರು ಎಚ್ಚರಿಸುತ್ತಿದ್ದಾರೆ.
ಮಾಜಿ ಕ್ರಿಕೆಟಿಗರಾದ ಮೋಹಿತ್ ಶರ್ಮಾ, ಸುನಿಲ್ ಗವಾಸ್ಕರ್ ಸೇರಿದಂತೆ ಕೆಲವು ವಿಶ್ಲೇಷಕರು ಇಶಾನ್ ಕಿಶನ್ ನಡೆಯನ್ನ ಬೆಂಬಲಿಸಿದ್ದಾರೆ. ಸತತ 3 ಗಂಟೆ ವಿಜಲ್ ಶಬ್ದ ಎಂತಹವರಿಗಾದರೂ ಕಿರಿಕಿರಿಯನ್ನುಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ.
NEW LAFDA UNLOCKED 😭
After beating CSK at their home ground and qualifying for the playoffs, Sunrisers Hyderabad star Ishan Kishan silenced the Chepauk crowd in style.
Look at Khaleel Ahmed… 😂 pic.twitter.com/AgVYa3TKFN
— Jara (@JARA_Memer) May 19, 2026
ಮೈದಾನದಲ್ಲಿ ಟ್ರೋಲ್ ಮಾಡಿದ್ದಲ್ಲದೆ, ಇನ್ಸ್ಟಾಗ್ರಾಂ ಪೋಸ್ಟ್ ಮೂಲಕವೂ ಸಿಎಸ್ಕೆ ಅಭಿಮಾನಿಗಳನ್ನ ಇಶಾನ್ ಕಿಶನ್ ಟ್ರೋಲ್ ಮಾಡಿದ್ದಾರೆ. ವಿಜಲ್ ಶಬ್ದಕ್ಕಿಂತ ಹೆಚ್ಚು ಶಬ್ದ ಬ್ಯಾಟ್ ಮಾಡಿದೆ. ನಾವು ಪ್ಲೇಆಫ್ ಪ್ರವೇಶಿಸಿದ್ದೇವೆ ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ ನಷ್ಟಕ್ಕೆ ಒಟ್ಟು 180 ರನ್ ಗಳಿಸಿತ್ತು. ಡೆವಾಲ್ಡ್ ಬ್ರೆವಿಸ್ (27 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ಸೇರಿದಂತೆ 44 ರನ್) ಮತ್ತು ಕಾರ್ತಿಕ್ ಶರ್ಮಾ (19 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 32 ರನ್) ಟಾಪ್ ಸ್ಕೋರರ್ಗಳಾಗಿ ಹೊರಹೊಮ್ಮಿದರು. ಸನ್ರೈಸರ್ಸ್ ಬೌಲರ್ಗಳಲ್ಲಿ, ಪ್ಯಾಟ್ ಕಮ್ಮಿನ್ಸ್ ಮೂರು ವಿಕೆಟ್ ಪಡೆದರೆ, ಸಕಿಬ್ ಹುಸೇನ್ ಎರಡು ವಿಕೆಟ್ ಪಡೆದರು. ಪ್ರಫುಲ್ ಹಿಂಗೆ ಮತ್ತು ಇಶಾನ್ ಮಾಲಿಂಗ ತಲಾ ಒಂದು ವಿಕೆಟ್ ಪಡೆದರು.
ನಂತರ ಸನ್ರೈಸರ್ಸ್ ಹೈದರಾಬಾದ್ ತಂಡವು 19 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿ ಗೆಲುವು ಸಾಧಿಸುವ ಮೂಲಕ ಪ್ಲೇಆಫ್ ಪ್ರವೇಶಿಸಿತು. ಇಶಾನ್ ಕಿಶನ್ ಅರ್ಧಶತಕ 47 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡಂತೆ 70 ರನ್ಗಳಿಸಿದರು. ಹೆನ್ರಿಕ್ ಕ್ಲಾಸೆನ್ ಕೂಡ ಅದ್ಭುತ ಪ್ರದರ್ಶನ ನೀಡಿದರು. 26 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ 47 ರನ್ ಸಿಡಿಸಿದರು.













