Last Updated:
ಕಾಣೆಯಾಗಿದ್ದ ಮಹಿಳೆ ಇದೀಗ ವಾಟರ್ ಟ್ಯಾಂಕರ್ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯನ್ನು ಯಾರೋ ಕೊಲೆ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ತಂದು ಟ್ಯಾಂಕರ್ನಲ್ಲಿ ಹಾಕಿದ್ದಾರೆ ಎನ್ನಲಾಗಿದ್ದು, ಪೊಲೀಸರು ಇದೀಗ ವಿಚಾರಣೆ ಆರಂಭಿಸಿದ್ದಾರೆ.
ಕಾಣೆಯಾಗಿದ್ದ 50 ವರ್ಷದ ಮಹಿಳೆಯೊಬ್ಬರು (Women) ಭೀಕರವಾಗಿ ಕೊಲೆಯಾಗಿರುವ (Murder) ಘಟನೆ ಬೆಳಕಿಗೆ ಬಂದಿದೆ. ಸೇಲಂನಲ್ಲಿ ಕಾಣೆಯಾಗಿದ್ದ 50 ವರ್ಷದ ಮಹಿಳೆ ಕೊಲೆಯಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಮೃತರನ್ನು ತಂಗಮಣಿ ಎಂದು ಪೊಲೀಸರು ಗುರುತಿಸಿದ್ದಾರೆ. ಇವರು ಆಗಸ್ಟ್ 22 ರಂದು ನಾಪತ್ತೆಯಾಗಿದ್ದರು. ಮೆಟ್ಟುಪಟ್ಟಿಯ ತಥನೂರಿನ ಬಾಲಾಜಿ ಕಾಲೋನಿಯಲ್ಲಿ ವಾಸವಾಗಿದ್ದ ಈಕೆ ಹಸ್ತಂಪಟ್ಟಿಯ ಒಂದು ಮನೆಯಲ್ಲಿ ಸೇವಕಿಯಾಗಿ ಕೆಲಸ ಮಾಡುತ್ತಿದ್ದರು.














