Last Updated:
ದೆಹಲಿ ಮೃಗಾಲಯದಲ್ಲಿ 15 ವರ್ಷಗಳ ನಂತರ ಕೃತಕ ಕಾವು ಬಳಸಿ ನಾಗರಹಾವಿನ ಮರಿಗಳಿಗೆ ಜನ್ಮ ನೀಡಲಾಗಿದೆ. ಇದು ಹಾವಿನ ಸಂರಕ್ಷಣೆಯಲ್ಲಿ ಪ್ರಮುಖ ಸಾಧನೆಯಾಗಿದೆ.
ಬರೋಬ್ಬರಿ 15 ವರ್ಷಗಳ ಬಳಿಕ ದೆಹಲಿಯ ರಾಷ್ಟ್ರೀಯ ಮೃಗಾಲಯದಲ್ಲಿ (National Zoological Park) ಬರೋಬ್ಬರಿ 15 ವರ್ಷಗಳ ಸತತ ಪ್ರಯತ್ನದ ಬಳಿಕ ಕೃತಕ ಕಾವಿನಿಂದ () ನಾಗರಹಾವಿನ ಮರಿಗಳಿಗೆ (Indian Cobra) ಜನ್ಮ ನೀಡಲಾಗಿದೆ. ಮೂರು ಮೊಟ್ಟೆಗಳಿಂದ ಹಾವಿನ ಮರಿಗಳು ಹೊರ ಬಂದಿದ್ದು, ಇದು ಈ ಜಾತಿಯ ಹಾವುಗಳ ಸಂರಕ್ಷಣೆ ಮತ್ತು ವೈಜ್ಞಾನಿಕ ನಿರ್ವಹಣೆಯಲ್ಲಿ (Incubation) ಆಗಿರುವ ಪ್ರಮುಖ ಸಾಧನೆ ಅಂತಲೇ ಪರಿಗಣಿಸಲಾಗುತ್ತಿದೆ.
ಹಾವಿನ ಮೊಟ್ಟೆಗಳಿಗೆ ನಿರ್ದಿಷ್ಟ ಅವಧಿಯವರೆಗೂ ಕೃತಕ ವಾತಾವರಣದಲ್ಲಿ ಕಾವು ಕೊಟ್ಟ ಬಳಿಕ ಜೂನ್ 29 ರಂದು 30ರಂದು ಮೂರು ಹಾವಿನ ಮರಿಗಳು ಮೊಟ್ಟೆಯಿಂದ ಹೊರ ಬಂದಿದೆ ಎಂದು ಮೃಗಾಲಯದ ನಿರ್ದೇಶಕ ಸಂಜೀತ್ ಕುಮಾರ್ ಭಾನುವಾರ ಮಾಹಿತಿ ಹಂಚಿಕೊಂಡಿದ್ದಾರೆ.
ಅಂದಹಾಗೇ, ಮೃಗಾಲಯದಲ್ಲಿ ಇಂಡಿಯನ್ ಸ್ಪೆಕ್ಟಾಕಲ್ಡ್ ಕೋಬ್ರಾ (ಹಾವಿನ ಹೆಡೆಯ ಹಿಂಭಾಗದಲ್ಲಿ ಕನ್ನಡಕ ಆಕಾರದ ವಿಶಿಷ್ಟ ಗುರುತು ಹೊಂದಿರುವ ನಾಗರಹಾವು) ಮೊಟ್ಟೆಗಳನ್ನು ಸಂರಕ್ಷಣೆ ಮಾಡಿ ಮರಿಗಳನ್ನು ಮಾಡಿದ್ದಾರೆ. ಈ ಜಾತಿಯ ಸಂತಾನೋತ್ಪತ್ತಿ ಮಾಡಲು ಹಲವು ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದರು. ಹಲವು ಯತ್ನಗಳು ವಿಫಲವಾಗಿತ್ತು, ಆದರೆ ಬರೋಬ್ಬರಿ 15 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಯಶಸ್ವಿಯಾಗಿದೆ ಎಂದು ಸಂಜೀತ್ ಹೇಳಿದ್ದಾರೆ.
ನಾಗರಹಾವಿನ ಮೊಟ್ಟೆಗಳನ್ನು ಕೃತಕ ಕಾವು ಕೊಠಡಿಯಲ್ಲಿ ಇಟ್ಟು ಸಂರಕ್ಷಣೆ ಮಾಡಲಾಗಿತ್ತು. ಅಲ್ಲಿ ಮೊಟ್ಟೆಗಳಿಂದ ಮರಿಗಳು ಹೊರಬರಲು ಅಗತ್ಯವಿರುವ ತಾಪಮಾನ ಮತ್ತು ತೇವಾಂಶವನ್ನು ಕಾಪಾಡಿಕೊಂಡಿದ್ದೆವು. ಮೊಟ್ಟೆಯಿಂದ ಹೊರ ಬಂದ ಮರಿಗಳು ಆರೋಗ್ಯಕರವಾಗಿದ್ದು, ಕ್ರಿಯಾಶೀಲವಾಗಿದೆ ಎಂದು ಅವರು ವಿವರಿಸಿದ್ದಾರೆ.
VIDEO | National Zoological Park (NZP), New Delhi, has announced the successful hatching of three Indian cobra (Naja naja) hatchlings. The hatchlings emerged on June 29-30 after a successful incubation period and are healthy, active, and being monitored in a species-appropriate… pic.twitter.com/GviIxnfz8M
— Press Trust of India (@PTI_News) July 12, 2026
ದೆಹಲಿ ಈ ಮೃಗಾಲಯದಲ್ಲಿ 2010-11ರ ಅವಧಿಯಲ್ಲಿ ಇದೇ ಪದ್ಧತಿಯಲ್ಲಿ ಸಂತಾನೋತ್ಪತ್ತಿ ನಡೆಸಲಾಗಿತ್ತು, ಆಗ 11 ನಾಗರ ಹಾವಿನ ಮರಿಗಳ ಜನ್ಮ ಆಗಿತ್ತು. ಆದರೆ ಆ ಬಳಿಕ ಹಲವು ಬಾರಿ ಈ ಜಾತಿಯ ಹಾವುಗಳ ರಕ್ಷಣೆಗೆ ಯತ್ನಿಸಿದರು ಯಶಸ್ವಿಯಾಗಿರಲಿಲ್ಲವಂತೆ. ಮೃಗಾಲಯದ ಅಧಿಕಾರಿಗಳ ಮಾಹಿತಿ ಅನ್ವಯ, ನೈಸರ್ಗಿಕವಾಗಿಯೇ ಮರಿಗಳಿಗೆ ಜನ್ಮ ನೀಡಲು ಯತ್ನಿಸಿದ ಸಂದರ್ಭದಲ್ಲಿ ಹಲವು ಸಂದರ್ಭಗಳಲ್ಲಿ ತಾಯಿ ಹಾವು ಅಥವಾ ಇತರೇ ಹಾವುಗಳು ಮೊಟ್ಟೆಗಳನ್ನು ತಿನ್ನುವುದು ಅಥವಾ ಕಾಗೆ ಸೇರಿದಂತೆ ಇತರೇ ಪಕ್ಷಿಗಳು ಮೊಟ್ಟೆಗಳ ಮೇಲೆ ದಾಳಿ ಮಾಡಿ ಅವುಗಳನ್ನು ನಶ ಮಾಡುವುದನ್ನು ಮಾಡುತ್ತಿದ್ದವಂತೆ. ಆದ್ದರಿಂದ ಈ ಜಾತಿಯ ಅಪರೂಪದ ಹಾವಿನ ರಕ್ಷಣೆಗೆ ಕೃತಕ ಕಾವುಕೊಡುವ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಕೇವಲ ಹಾವುಗಳು ಮಾತ್ರವಲ್ಲದೇ, ವಿನಾಶದ ಹಂಚಿನಲ್ಲಿರುವ ಹಲವು ಜಾತಿಯ ಮಾನಿಟರ್ ಹಲ್ಲಿಗಳು, ಹೆಬ್ಬಾವು, ನಾಗರಹಾವು ಸೇರಿದಂತೆ ಸರೀಸೃಪ ಜಾತಿಗೆ ಸೇರಿದ ಮೊಟ್ಟೆಗಳನ್ನು ಸಂಗ್ರಹಿಸಿ ಅವುಗಳನ್ನು ಸಂರಕ್ಷಣೆ ಮಾಡಲಾಗುತ್ತದೆ. ಸದ್ಯ ಜನಿಸಿದ ಮರಿಗಳು ಪೌಢ್ರಾವಸ್ಥೆ ಹಂತಕ್ಕೆ ಬರುವವರೆಗೂ ನಿಯಂತ್ರಿತ ವಾತಾವರಣ ಅಗತ್ಯವಂತೆ. ಸಣ್ಣ ಮರಿಗಳಾದ ಪರಿಣಾಮ ವಾತಾವರಣದಲ್ಲಿ ಆಗುವ ಸಣ್ಣ ಬದಲಾವಣೆಗಳು ಕೂಡ ಇವುಗಳ ಮೇಲೆ ಪರಿಣಾಮ ಬೀರಬಹುದಂತೆ. ಸದ್ಯ ಈ ಮೃಗಾಲಯದಲ್ಲಿ ಮೂರು ವಯಸ್ಕ ನಾಗರಹಾವುಗಳಿದ್ದು, ಇವುಗಳ ಚರ್ಮಕ್ಕೆ ಬೇಡಿಕೆ ಇರೋದರಿಂದ ಇವುಗಳ ಬೇಟೆ ಹೆಚ್ಚಾಗುತ್ತಿದೆ. ಮಾನವ-ವನ್ಯಜೀವಿ ಸಂಘರ್ಷ ಕಡಿಮೆ ಮಾಡಲು ಈ ಜಾತಿಯ ಹಾವುಗಳನ್ನು ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿ ರಕ್ಷಣೆ ಮಾಡಲಾಗುತ್ತಿದೆ.
Delhi,Delhi,Delhi














