Last Updated:
CM Vijay Rajinikanth: ಇದೀಗ ನಟ ರಜನಿಕಾಂತ್ ಅವರು ವಿಜಯ್ ಗೆಲುವಿನ ಬಗ್ಗೆ , ಹಾಗೆಯೇ ಸ್ಟಾಲಿನ್ ಭೇಟಿ ಬಗ್ಗೆ ಮೊದಲ ಬಾರಿಗೆ ರಿಯಾಕ್ಷನ್ ನೀಡಿದ್ದಾರೆ.
ದಳಪತಿ ವಿಜಯ್, (Thalapathy Vijay) ಸಿಎಂ ಆದ ಬಳಿಕ ತಮಿಳು ಸೂಪರ್ಸ್ಟಾರ್ ರಜನಿಕಾಂತ್ (Rajinikanth) ಅವರ ನಡೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಚರ್ಚೆಗಳು ಶುರುವಾಗಿದ್ದವು. ಅಷ್ಟೇ ಅಲ್ಲದೆ ಆ ಸಮಯದಲ್ಲಿ ಸ್ಟಾಲಿನ್ ಅವರನ್ನು ಭೇಟಿಯಾದ ವಿಚಾರ ಕೂಡಾ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ನಟ ರಜನಿಕಾಂತ್ ಅವರು ವಿಜಯ್ ಗೆಲುವಿನ ಬಗ್ಗೆ , ಹಾಗೆಯೇ ಸ್ಟಾಲಿನ್ ಭೇಟಿ ಬಗ್ಗೆ ಮೊದಲ ಬಾರಿಗೆ ರಿಯಾಕ್ಷನ್ ನೀಡಿದ್ದಾರೆ.
ಚೆನ್ನೈನ ಪೋಯಸ್ ಗಾರ್ಡನ್ ನಿವಾಸದಲ್ಲಿ ವರದಿಗಾರರನ್ನು ಭೇಟಿಯಾದ ನಟ ರಜನಿಕಾಂತ್, ‘ಚುನಾವಣಾ ಫಲಿತಾಂಶ ಬಂದಾಗ, ನಾನು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಲು ಹೋಗಿದ್ದೆ. ಅದನ್ನು ಟೀಕಿಸಲಾಯಿತು. ಅವರು ನನ್ನ 40 ವರ್ಷಗಳ ಸ್ನೇಹಿತ. ಹೀಗಾಗಿ ನಾನು ಅವರನ್ನು ಭೇಟಿಯಾದೆ. ಅಷ್ಟೇ ಅಲ್ಲದೆ ಸ್ಟಾಲಿನ್ ಸೋತಿರುವುದು ನನಗೆ ತುಂಬಾನೇ ಬೇಸರ ತಂದಿದೆ ಎಂದು ರಜನಿ ಹೇಳಿದ್ದಾರೆ.
ಇನ್ನು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ ರಜನಿಕಾಂತ್, ವಿಜಯ್ ಬಗ್ಗೆ ನಿಮಗೆ ಅಸೂಯೆ ಇದೆಯೇ ಎಂದು ಕೇಳುತ್ತಾರೆ. ನಾನು ರಾಜಕೀಯದಲ್ಲಿಯೇ ಇಲ್ಲ ಮತ್ತು ನಾನು ಅದರಿಂದ ದೂರವೇ ಇದ್ದೇನೆ. ನಾನು ರಾಜಕೀಯದಲ್ಲಿ ಇಲ್ಲದಿರುವಾಗ ವಿಜಯ್ ಬಗ್ಗೆ ನನಗೆ ಅಸೂಯೆ ಏಕೆ? ಬಹುಶಃ ಕಮಲ್ ಮುಖ್ಯಮಂತ್ರಿಯಾಗಿದ್ದರೆ, ನಾನು ಅಸೂಯೆ ಪಡುತ್ತಿದ್ದೆ. ಆದರೆ ಆಗಲೂ ನಾನು ಅಸೂಯೆ ಪಡುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
Chennai, Tamil Nadu: Actor Rajinikanth holds a press conference at his residence in Poes Garden.
He says, “I am holding this press meet because many criticisms are being made about me in connection with the election. If I do not respond to them, they will become accepted as the… pic.twitter.com/5gwzbKt13u— ANI (@ANI) May 17, 2026
ಹಾಗೆಯೇ ಸ್ಟಾಲಿನ್ ಅವರನ್ನು ಭೇಟಿ ಮಾಡಿದ್ದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ರಜನಿಕಾಂತ್ ಹೇಳಿದರು. ಅನೇಕರು ನಾನು ಸ್ಟಾಲಿನ್ ಅವರನ್ನು ಸಂಪರ್ಕಿಸಲು ಬಂದಿದ್ದು ರಾಜಕೀಯ ವಿಷಯವಾಗಿ ಎಂದು ಅನೇಕರು ಟೀಕಿಸಿದರು. ಆದ್ರೆ ಅಂತಹ ಕೊಳಕು ರಾಜಕೀಯವನ್ನು ನಾನು ಮಾಡುವುದಿಲ್ಲ ಎಂದು ರಜನಿ ತಿಳಿಸಿದ್ದಾರೆ. ಜೊತೆಗೆ ಸೌಜನ್ಯಕ್ಕಾಗಿ ವಿಜಯ್ ಅವರನ್ನು ಭೇಟಿ ಮಾಡುವ ಯಾವುದೇ ಉದ್ದೇಶ ನನಗಿಲ್ಲ ಎಂದು ರಜನಿಕಾಂತ್ ಹೇಳಿದರು.
ಜೊತೆಗೆ ನಟ ವಿಜಯ್ ಸಿಎಂ ಆದ ವೇಳೆ ನೀವು ಅವರಿಗೆ ಶುಭ ಕೋರಿಲ್ಲ ಎಂಬ ಆರೋಪಗಳಿಗೆ ಎಂದು ಕೇಳಿದಾಗ, ವಿಜಯ್ ಸಿಎಂ ವಿಷ್ಯ ಕೇಳಿ ಸಂತೋಷವಾಯಿತು. ಅಷ್ಟೇ ಅಲ್ಲದೆ ಆ ಸಮಯದಲ್ಲಿ ನಾನು ಎಕ್ಸ್ ಖಾತೆಯ ಮೂಲಕ ಅವರಿಗೆ ಶುಭ ಕೋರಿದ್ದೆ. ಹಾಗೆಯೇ ನನಗೂ ವಿಜಯ್ಗೂ 25 ವರ್ಷಗಳ ತಲೆಮಾರಿನ ಅಂತರವಿದೆ, ಹೀಗಾಗಿ ನಮ್ಮಿಬ್ಬರ ನಡುವೆ ಸ್ಪರ್ಧೆ ಎಲ್ಲಿರುತ್ತದೆ ಎಂದು ರಜನಿಕಾಂತ್ ತಿಳಿಸಿದರು.
Bangalore [Bangalore],Bangalore,Karnataka













