CM Vijay: ತಮಿಳರ ಪ್ರೀತಿಯ ‘ಅಮ್ಮ’ನ ಮನೆಗೆ ಶಿಫ್ಟ್ ಆಗ್ತಾರಾ ಸಿಎಂ ವಿಜಯ್? ಜಯಲಲಿತಾರ ಪೊಯಸ್ ಗಾರ್ಡನ್ ಬಂಗಲೆ ಇನ್ನು ದಳಪತಿಗೆ? | CM Vijay to buy jayalalitha s home | | ACTPnews

ವಿಜಯ್-ಜಯಲಲಿತಾ


Last Updated:

ಜಯಲಲಿತಾ ಅವರು ವಾಸವಿದ್ದ ಮನೆಗೆ ಶಿಫ್ಟ್ ಆಗುತ್ತಾರಾ ವಿಜಯ್? ಆ ಪ್ರಸಿದ್ಧ ಬಂಗಲೆ ಖರೀದಿಗೆ ಮುಂದಾಗಿದ್ದೇಕೆ ದಳಪತಿ?

ವಿಜಯ್-ಜಯಲಲಿತಾ
ವಿಜಯ್-ಜಯಲಲಿತಾ

ತಮಿಳು ನಟ, ತಮಿಳುನಾಡಿನ ಸಿಎಂ ವಿಜಯ್ ಸಿ ಜೋಸೆಫ್ (C Joseph Vijay) ಸರ್ಕಾರದ ಆಡಳಿತ ಭರ್ಜರಿಯಾಗಿ ಸಾಗುತ್ತಿದೆ. ಸಿನಿಮಾ (Cinema) ರಂಗದ ಹಿನ್ನೆಲೆಯಿಂದ ಬಂದು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ನಟನ ಬಗ್ಗೆ ದೇಶವೇ ತಿರುಗಿ ನೋಡಿದೆ. ಬಾಲಿವುಡ್, ಟಾಲಿವುಡ್, ಮಾಲಿವುಡ್, ಸ್ಯಾಂಡಲ್​ವುಡ್ ಸೇರಿ ಎಲ್ಲಾ ಕಡೆಗಳಲ್ಲಿ ವಿಜಯ್ ಬಗ್ಗೆ ಕ್ರೇಜ್ ಸೃಷ್ಟಿಯಾಗಿದೆ.

ಇತ್ತೀಚೆಗೆ ನಟನ ಬಗ್ಗೆ ಅಚ್ಚರಿಯ ಸುದ್ದಿಯೊಂದು ಕೇಳಿ ಬರುತ್ತಿದೆ. ನಟ ವಿಜಯ್ ಅವರು ಚೆನ್ನೈನ ಪೊಯೆಸ್ ಗಾರ್ಡನ್​ನಲ್ಲಿರುವ ಮಾಜಿ ಸಿಎಂ, ತಮಿಳು ಚಿತ್ರರಂಗದ ಖ್ಯಾತ ನಟಿ ಜಯಯಲಿತಾ ತಮಿಳುನಾಡು ಮಕ್ಕಳು ಪ್ರೀತಿಯ ಅಮ್ಮನ ಮನೆಯನ್ನು ಖರೀದಿಸೋಕೆ ಯೋಚಿಸುತ್ತಿದ್ದಾರಂತೆ.

ತಮಿಳುನಾಡು ರಾಜಕೀಯದಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಪಡೆದಿರುವ ದಿವಂಗತ ಮಾಜಿ ಸಿಎಂ ಜಯಲಲಿತಾ ಅವರ ವೇದಾ ನಿಲಯಂ (ಪೋಯಸ್ ಗಾರ್ಡನ್) ನಿವಾಸವನ್ನು ಸಿಎಂ ವಿಜಯ್  ಖರೀದಿಸಲಿದ್ದಾರಂತೆ. ಈ ಒಂದು ಬೃಹತ್ ರಿಯಲ್ ಎಸ್ಟೇಟ್ ಡೀಲ್ ಸಂಬಂಧವಾಗಿ ಆರಂಭದ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಈಗಿನ ಆ ಬಂಗಲೆಯ ವಾರಸುದಾರರಾದ ಜೆ.ದೀಪಾ ಅವರ ಜೊತೆ ಮಾತುಕತೆ ನಡೆಯುತ್ತಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ. ಜೋಸೆಫ್ ವಿಜಯ್ ಅವರು ಸದ್ಯ ಚೆನ್ನೈನ ನೀಲಂಗರೈನಲ್ಲಿರುವ ತಮ್ಮ ಮನೆಯಲ್ಲಿಯೇ ವಾಸವಾಗಿದ್ದಾರೆ. ಅಲ್ಲಿಂದ, ಪ್ರತಿದಿನ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಬರಲು ಸುಮಾರು ಹದಿನೇಳು ಕಿಲೋಮೀಟರ್ ಕ್ರಮಿಸಬೇಕಾಗಿದೆ.

ನೀಲಂಗರೈನಲ್ಲಿರುವ ಮನೆ ದೂರ

ಮುಖ್ಯಮಂತ್ರಿಗಳ ಈ ಸುದೀರ್ಘ ಪ್ರಯಾಣದಿಂದಾಗಿ, ಟ್ರಾಫಿಕ್ ಅಡಚಣೆಯ ಜೊತೆಗೆ, ಸಾರ್ವಜನಿಕರಿಗೂ ಕಿರಿಕಿರಿ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ, ಚೆನ್ನೈನ ಹೃದಯ ಭಾಗಕ್ಕೆ ಶಿಫ್ಟ್ ಆಗುವ ಬಗ್ಗೆ ವಿಜಯ್ ಯೋಚಿಸುತ್ತಿದ್ದಾರಂತೆ. ಈ ಸಂಬಂಧ ಈಗಾಗಲೇ ಸುದ್ದಿಗಳು ಕೇಳಿ ಬರುತ್ತಿವೆ.

350 ಕೋಟಿ ರೂಪಾಯಿ ಕೊಟ್ಟು ಜಯಲಲಿತಾ ನಿವಾಸ ಖರೀದಿಸ್ತಾರಾ ದಳಪತಿ?

ಸರ್ಕಾರಿ ಬಂಗಲೆಯ ಬದಲಿಗೆ ತಮ್ಮದೇ ಸ್ವಂತ ಮನೆ ಹೊಂದಿರಲು ವಿಜಯ್ ಮುಂದಾಗಿದ್ದಾರಂತೆ. ಹೀಗಾಗಿ ಜಾಗದ ಮಾಲೀಕರು ಆಗಿರುವ ದೀಪಾ ಅವರ ಜೊತೆ ಮಾತುಕತೆ ಆರಂಭವಾಗಿದೆ. ಪೋಯಸ್ ಗಾರ್ಡನ್ ನಿವಾಸ ಮತ್ತು ಜಾಗದ ಸದ್ಯದ ಮಾರುಕಟ್ಟೆ ಮೌಲ್ಯ 350 ಕೋಟಿ ರೂಪಾಯಿ ಇದ್ದು, ಅದದೇ ಬೆಲೆಗೆ ಖರೀದಿಸುವ ಸಂಬಂಧ, ಆರಂಭಿಕ ಹಂತದ ಮಾತುಕತೆಗಳು ಚಾಲ್ತಿಯಲ್ಲಿದೆ ಎನ್ನುವ ಸುದ್ದಿ ಕೇಳಿ ಬಂದಿದೆ.

ಮಾಜಿ ಸಿಎಂ ಜಯಲಲಿತಾ ಅವರ ಪೋಯಸ್ ಗಾರ್ಡನ್ ಬರೀ ಮನೆಯಾಗಿರಲಿಲ್ಲ. ಅದು, ರಾಜಕೀಯ ಶಕ್ತಿಕೇಂದ್ರವಾಗಿತ್ತು. ಜಯಲಲಿತಾ ನಿಧನದ ನಂತರ, ಪೋಯಸ್ ಗಾರ್ಡನ್ ನಿವಾಸದ ವಾರಸುದಾರರು ಯಾರಾಗಬೇಕು ಎನ್ನುವ ಸಂಬಂಧವಾಗಿ ಸುದೀರ್ಘ ಕಾನೂನು ಹೋರಾಟ ನಡೆದಿತ್ತು.

ಕೊನೆಯಲ್ಲಿ ಮನೆ ಜಯಲಲಿತಾ ಅವರ ಅಣ್ಣನ ಮಗಳು ಜೆ.ದೀಪಾ, ಅವರ ಪಾಲಾಗಿತ್ತು. ಈಗ, ವಿಜಯ್ ಅವರ ಪ್ರತಿನಿಧಿಗಳು, ಮನೆ ಖರೀದಿ ಸಂಬಂಧ ಮಾತುಕತೆಯನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ: Vijayalakshmi: ಚಾಮುಂಡೇಶ್ವರಿ ದರ್ಶನಕ್ಕೆ ಬಂದ ವಿಜಯಲಕ್ಷ್ಮಿ, ಅಳಿಯನ ಜೊತೆ ಬಂದ ದರ್ಶನ್ ಪತ್ನಿ

ಪ್ರಸಿದ್ಧ ಪೊಯಸ್ ಗಾರ್ಡನ್​ನಲ್ಲಿ ಧನುಷ್, ರಜನೀಕಾಂತ್ ಸೇರಿ ಖ್ಯಾತ ಸೆಲೆಬ್ರಿಟಿಗಳು ಮನೆ ಹೊಂದಿದ್ದಾರೆ. ಒಂದು ವೇಳೆ ಜಯಲಲಿತಾ ಅವರ ಮನೆ ಖರೀದಿ ಡೀಲ್ ಸಕ್ಸಸ್ ಆಗದೇ ಹೋದರೆ ವಿಜಯ್ ಅವರು ರಾಜಕಾರಣಿಗಳ ಮತ್ತು ಸಚಿವರ ಸರ್ಕಾರಿ ಬಂಗಲೆಗಳಲ್ಲೋ ಅಥವಾ ಪಟ್ಟಿನಪಾಕಂನಲ್ಲಿರುವ ತಮ್ಮದೇ ಸ್ವಂತ ಜಾಗದಲ್ಲಿ ವಾಸ್ತವ್ಯವನ್ನು ಹೂಡಲಿದ್ದಾರೆ ಎಂದು ವಿಜಯಕರ್ನಾಟಕ.ಕಾಮ್ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed