CJP Protest: ಪುಸ್ತಕ, ಪೆನ್ನು, ಧ್ವನಿಯಲ್ಲಿದೆ ತಾಕತ್ತು ಎಂದರಾ ಶಾರುಖ್? ಸಿಜೆಪಿ ಪರ ನಿಂತರಾ ಕಿಂಗ್ ಖಾನ್? ಅಸಲಿಯತ್ತೇನು? | Fake screenshot of x post | | ACTPnews

ಶಾರುಖ್


Last Updated:

Shah Rukh Khan: ನಟ ಶಾರುಖ್ ಖಾನ್ ಅವರು ಸಿಜೆಪಿ ಪ್ರತಿಭಟನೆಗೆ ಬೆಂಬಲ ನೀಡಿದ್ರಾ? ವೈರಲ್ ಆಗ್ತಿರೋ ಸ್ಕ್ರೀನ್ ಶಾಟ್​ನಲ್ಲಿ ಏನಿದೆ?

ಶಾರುಖ್
ಶಾರುಖ್

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನೇತೃತ್ವದ ಪ್ರತಿಭಟನೆಗೆ ಸಲ್ಮಾನ್ ಖಾನ್, ಆಲಿಯಾ ಭಟ್, ಕರೀನಾ ಕಪೂರ್ ಖಾನ್, ಇಮ್ರಾನ್ ಖಾನ್, ಶಬಾನಾ ಅಜ್ಮಿ ಮತ್ತು ಇನ್ನೂ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಶಾರುಖ್ ಬೆಂಬಲಿಸಿದ್ರಾ?

ಶಾರುಖ್ ಖಾನ್ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆಯೇ ಎಂದು ಭಾರೀ ಕುತೂಹಲದಲ್ಲಿದ್ದರು ಜನ. ಸಾಮಾನ್ಯವಾಗಿ ಏನೇ ಆದರೂ ಶಾರುಖ್ ಟ್ವೀಟ್ ಮಾಡುವುದಿಲ್ಲ.

ಹೀಗಿದ್ದರೂ ಅವರ ರೀಸೆಂಟ್ ಪೋಸ್ಟ್ ಭಾರೀ ವೈರಲ್ ಆಯಿತು. ಎಲ್ಲಾ ಕಡೆ ಶೇರ್ ಆಯಿತು. ಸಾಮಾಜಿಕ ಮಾಧ್ಯಮದಲ್ಲಿ ಹಲವರು ಶಾರುಖ್ ಪೋಸ್ಟ್ ಮಾಡೇ ಬಿಟ್ರಾ ಅಂತ ಆಶ್ಚರ್ಯಪಟ್ಟರು.

ಈ ಊಹಾಪೋಹಗಳ ನಡುವೆ, ಸೂಪರ್‌ಸ್ಟಾರ್ ಅವರ ಎಕ್ಸ್  ಖಾತೆಯಿಂದ ಪೋಸ್ಟ್ ಮಾಡಲಾಗಿದೆ ಎಂದು ತೋರಿಸುವ ಸ್ಕ್ರೀನ್‌ಶಾಟ್ ಆನ್‌ಲೈನ್‌ನಲ್ಲಿ ಶೇರ್ ಆಗಲು ಪ್ರಾರಂಭಿಸಿತು. ಇದನ್ನು ನೋಡಿ ಅನೇಕ ನೆಟ್ಟಿಗರು ಅಂತೂ ಕೊನೆಗೂ ಶಾರುಖ್ ಖಾನ್ ರಿಯಾಕ್ಟ್ ಮಾಡಿಯೇ ಬಿಟ್ರು ಎಂದು ನಂಬುವಂತೆ ಮಾಡಿತು.

ಶಾರುಖ್ ಖಾನ್ ಅವರು ಮಾಡಿದ್ದಾರೆ ಎಂದು ಬಿಂಬಿಸುವ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದು, ಇದು ಗಮನ ಸೆಳೆದಿದೆ. ಆದರೆ ನಡೆಯುತ್ತಿರುವ ಪ್ರತಿಭಟನೆಗೆ ಶಾರುಖ್ ಇನ್ನೂ ಪ್ರತಿಕ್ರಿಯಿಸದ ಕಾರಣ, ಸ್ಕ್ರೀನ್‌ಶಾಟ್ ನಿಜವಲ್ಲ.

ಸ್ಕ್ರೀನ್‌ಶಾಟ್‌ನಲ್ಲಿ ಹೀಗೆ ಬರೆಯಲಾಗಿದೆ, ”ಎಲ್ಲಾ ಆತ್ಮೀಯ ವಿದ್ಯಾರ್ಥಿಗಳಿಗೆ, ನೀವು ಅಸಲಿ ತಾಕತ್ತು ಏನೆಂಬುದನ್ನು ತೋರಿಸಿದ್ದೀರಿ. ಅದು ಪುಸ್ತಕ, ಪೆನ್ನು ಮತ್ತ ಧ್ವನಿ. ನೀವು ನಿರಾಶೆಯಾಗಬಹುದು, ಸುಸ್ತಾಗಬಹುದು, ಆದರೆ ಸೋಲೊಪ್ಪದಿರಿ. ನಿಮ್ಮನ್ನು ನೀವು ಸುರಕ್ಷಿತವಾಗಿರಿಸಿ. ದೇಶದ ನಾಯಕರು, ಮುಖಂಡರು ಹಾಗೂ ನಮಗೆಲ್ಲರಿಗೂ ನಿಮ್ಮ ಧ್ವನಿ ಕೇಳಬೇಕು. ಬದಲಾವಣೆಗಳು ಬೇಕು, ಯಾಕೆಂದರೆ ಮುಂದೆ ಯಾರೂ ಈ ರೀತಿ ಕಷ್ಟಪಡಬಾರದು. ನಾನು ನೈತಿಕವಾಗಿ ಹಾಗೂ ಭಾವನಾತ್ಮಕವಾಗಿ ನಿಮ್ಮೆಲ್ಲರ ಜೊತೆಗಿದ್ದೇನೆ”ಎಂದು ಬರೆಯಲಾಗಿದೆ.

ಶಾರುಖ್ ಖಾನ್ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಹಿಂದಿನ ಟ್ವಿಟರ್) ಖಾತೆಗಳ ಪರಿಶೀಲನೆಯು ಅವರು ಅಂತಹ ಯಾವುದೇ ಪೋಸ್ಟ್ ಅನ್ನು ಎಂದಿಗೂ ಹಂಚಿಕೊಂಡಿಲ್ಲ ಎಂದು ತೋರಿಸುತ್ತದೆ. ಅವರ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಇಂಥಹ ಪೋಸ್ಟ್ ಕಾಣದ ಕಾರಣ ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ಸ್ಕ್ರೀನ್‌ಶಾಟ್ ಕಟ್ಟುಕಥೆ ಎಂದು ದೃಢಪಡಿಸಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed