Last Updated:
ಸಾಮಾಜಿಕ ಜಾಲತಾಣದಲ್ಲಿ ವಿಕ್ರಮ್ ಹಂಚಿಕೊಂಡಿದ್ದ ಅಪರೂಪದ ಕೋತಿಯೊಂದಿಗಿನ ವಿಡಿಯೋ ವಿವಾದಕ್ಕೆ ಕಾರಣವಾಗಿದ್ದು, ತಮಿಳುನಾಡು ಅರಣ್ಯ ಇಲಾಖೆ ಈ ವಿಚಾರದಲ್ಲಿ ತನಿಖೆ ಆರಂಭಿಸಿದೆ ಎನ್ನಲಾಗಿದೆ.
ತಮಿಳು ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ (Chiyaan Vikram) ತಮ್ಮ ವಿಭಿನ್ನ ಪಾತ್ರಗಳು ಹಾಗೂ ಅದ್ಭುತ ನಟನೆಯ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸೇತು, ಅನ್ನಿಯನ್ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿರುವ ವಿಕ್ರಮ್ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಆದರೆ ಇದೀಗ ನಟ ಬೇರೆಯೇ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಕ್ರಮ್ ಹಂಚಿಕೊಂಡಿದ್ದ ಅಪರೂಪದ ಕೋತಿಯೊಂದಿಗಿನ ವಿಡಿಯೋ ವಿವಾದಕ್ಕೆ ಕಾರಣವಾಗಿದ್ದು, ತಮಿಳುನಾಡು ಅರಣ್ಯ ಇಲಾಖೆ ಈ ವಿಚಾರದಲ್ಲಿ ತನಿಖೆ ಆರಂಭಿಸಿದೆ ಎನ್ನಲಾಗಿದೆ.














