Chilly Chicken ಜೊತೆ ಕೊಟ್ಟ ಒಂದು ಪೀಸ್ ನಿಂಬೆ ತುಂಡಿಗಾಗಿ ಜಗಳ! ಹೋಟೆಲ್ ಮಾಲೀಕನ ಮೂರು ಹಲ್ಲು ಉಡೀಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಘಟನೆಯಲ್ಲಿ ಊಟ ಮಾಡುತ್ತಿದ್ದ ಇತರ ಸಿಬ್ಬಂದಿ ಮತ್ತು ಕೆಲವು ಗ್ರಾಹಕರು ಕೂಡ ಗಾಯಗೊಂಡಿದ್ದಾರೆ, ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದ ಪರಿಣಾಮ ಹೋಟೆಲ್ ಮಾಲೀಕ ಮೂರು ಹಲ್ಲುಗಳನ್ನು ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

News18
News18

ತಿರುವನಂತಪುರಂ: ಚಿಕನ್ ಚಿಲ್ಲಿಯ (Chicken Chilli Lemon Dispute) ಜೊತೆಗೆ ಕೊಟ್ಟ ನಿಂಬೆ ಪೀಸ್‌ನಲ್ಲಿ ರಸ ಬರಲಿಲ್ಲ ಎಂಬ ಕಾರಣಕ್ಕೆ ಯುವಕರ ಗುಂಪೊಂದು ಹೋಟೆಲ್ ಮಾಲೀಕನಿಗೆ ಹೊಡೆದ ಪರಿಣಾಮ ಆತನ ಹಲ್ಲು ಮುರಿದ ಘಟನೆ ಕೇರಳದಲ್ಲಿ ನಡೆದಿದೆ.

ಮಂಗಳವಾರ ಸಂಜೆ ಕೇರಳದ ವಡಕ್ಕಂಚೇರಿ ಸಮೀಪದ ಮಿನಲೂರ್‌ನಲ್ಲಿರುವ ಸೆಲೆಕ್ಟ್ ದರ್ಬಾರ್ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಚಿಕನ್ ಚಿಲ್ಲಿ ಜೊತೆಗೆ ಕೊಟ್ಟ ಲೆಮನ್‌ನಲ್ಲಿ ರಸ ಕಡಿಮೆ ಎಂದು ಜಗಳವಾಡಿದ ಯುವಕರು ಹೋಟೆಲ್ ಮಾಲೀಕನಿಗೆ ಥಳಿಸಿದ್ದು, ಈ ವೇಳೆ ಹೋಟೆಲ್ ಮಾಲೀಕನ ಮೂರು ಹಲ್ಲುಗಳು ಮುರಿದು ಬಿದ್ದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Axar Patel: ಯುವರಾಜ್ ಸಿಂಗ್ ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಿದ ಅಕ್ಷರ್ ಪಟೇಲ್!

ಮಿನಲೂರಿನ ಸೆಲೆಕ್ಟ್ ದರ್ಬಾರ್ ರೆಸ್ಟೋರೆಂಟ್‌ನಲ್ಲಿ ನಡೆದ ಈ ಕ್ರೂರ ದಾಳಿಯಲ್ಲಿ ಹೋಟೆಲ್ ಮಾಲೀಕ ಮುಜೀಬ್ ಅವರ ಮೂರು ಹಲ್ಲುಗಳು ಮುರಿತಗೊಂಡಿದೆ. ಘಟನೆಯಲ್ಲಿ ಊಟ ಮಾಡುತ್ತಿದ್ದ ಇತರ ಸಿಬ್ಬಂದಿ ಮತ್ತು ಕೆಲವು ಗ್ರಾಹಕರು ಕೂಡ ಗಾಯಗೊಂಡಿದ್ದಾರೆ, ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದ ಪರಿಣಾಮ ಮುಜೀಬ್ ಹಲ್ಲುಗಳನ್ನು ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಏನಿದು ಘಟನೆ?

ನಿನ್ನೆ ಮಂಗಳವಾರ ಸಂಜೆ ಮಿನಲೂರಿನ ಸೆಲೆಕ್ಟ್ ದರ್ಬಾರ್ ರೆಸ್ಟೋರೆಂಟ್‌ನಲ್ಲಿ ಇಬ್ಬರು ಯುವಕರು ಹೋಟೆಲ್‌ಗೆ ಬಂದು ಸಿಬ್ಬಂದಿಯೊಂದಿಗೆ ಜಗಳವಾಡಲು ಪ್ರಾರಂಭಿಸಿದರು. ತಮಗೆ ಚಿಕನ್‌ ಚಿಲ್ಲಿಯ ಜೊತೆ ನೀಡಿದ ನಿಂಬೆ ಪೀಸ್‌ನಲ್ಲಿ ರಸನೇ ಬರ್ತಿಲ್ಲ, ಅದು ಒಣಗಿ ಹೋಗಿದೆ ಎಂದು ಹೇಳಿದ್ದಾರೆ. ಈ ವೇಳೆ ಹೋಟೆಲ್ ಮಾಲೀಕ ಮುಜೀಬ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ಇನ್ನೂ ವಿಚಿತ್ರವೆಂದರೆ ಈ ಸಮಸ್ಯೆ ಮೊದಲೇ ಬಗೆಹರಿದಿತ್ತು. ಅವರ ಆರಂಭಿಕ ದೂರಿನ ನಂತರ, ಸಿಬ್ಬಂದಿ ಅವರಿಗೆ ಹೊಸ ನಿಂಬೆಹಣ್ಣು ನೀಡಿದ್ದರು. ನಂತರ ಆ ಪುರುಷರು ಊಟ ಮುಗಿಸಿ ಹೊರಟುಹೋಗಿದ್ದಾರೆ. ಆದರೆ ನಂತರ ಮತ್ತೆ ಒಂದು ಗ್ಯಾಂಗ್ ಜೊತೆ ದಾಳಿ ನಡೆಸಿದರು ಎಂದು ವರದಿಯಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed