Chandan Shetty: ‘ಯಾರಿಗೂ ರಿಲೇಷನ್​ಶಿಪ್ ಬ್ರೇಕ್ ಮಾಡ್ಬೇಕು ಅಂತ ಇರಲ್ಲ’ ಡಿವೋರ್ಸ್ ಬಗ್ಗೆ ಚಂದನ್ ಮಾತು | Chandan Shetty speaks about divorce with Niveditha Gowda | | ACTPnews

ಚಂದನ್-ನಿವೇದಿತಾ


Last Updated:

Chandan Shetty: ರ್ಯಾಪರ್ ಚಂದನ್ ಶೆಟ್ಟಿ ಅವರು ನಟಿ ನಿವೇದಿತಾ ಗೌಡ ಅವರ ಜೊತೆಗಿನ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿ ಜೊತೆಗಿನ ಸಂದರ್ಶನದ ವೇಳೆ ಈ ವಿಚಾರ ರಿವೀಲ್ ಮಾಡಿದ್ದಾರೆ.

ಚಂದನ್-ನಿವೇದಿತಾ
ಚಂದನ್-ನಿವೇದಿತಾ

ಕನ್ನಡ ಕಿರುತೆರೆಯಲ್ಲಿ ಹಲವಾರು ಡಿವೋರ್ಸ್​, ಲವ್ ಮ್ಯಾರೇಜ್, ಬ್ರೇಕಪ್​ಗಳಾಗಿವೆ. ಆದರೆ ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ಅವರ ಲವ್​ಸ್ಟೋರಿ, ಮ್ಯಾರೇಜ್, ಬ್ರೇಕಪ್ ಭಾರೀ ಸುದ್ದಿಯಾಗಿರುವ ಕೇಸ್​​ಗಳಲ್ಲಿ ಒಂದು. ಬಿಗ್​ಬಾಸ್ ಮನೆಯಲ್ಲಿ ಭೇಟಿಯಾಗಿವ ಪರಸ್ಪರ ಇಷ್ಟಪಟ್ಟು ಪ್ರೀತಿಸಿ ಮದುವೆಯಾಗಿ (Marriage) ಡಿವೋರ್ಸ್ ತೆಗೆದುಕೊಂಡಿದ್ದಾರೆ ಈ ಜೋಡಿ.

ಈಗ ಚಂದನ್ ಶೆಟ್ಟಿ ಅವರು ತನ್ನ ಜೀವನದ ಆ ಡಿವೋರ್ಸ್ ಹಂತದ ಬಗ್ಗೆ ಮಾತನಾಡಿದ್ದಾರೆ. ಅವರು ಡಿವೋರ್ಸ್ ಬಗ್ಗೆ ಏನಂದ್ರು? ಅವರು ಹೇಳಿದ್ದೇನು? ಸಂಪೂರ್ಣ ಸುದ್ದಿ ಇಲ್ಲಿದೆ.

ನಟ ಚಂದನ್ ಶೆಟ್ಟಿ ಅವರು ರ್ಯಾಪಿಡ್ ರಶ್ಮಿ ಅವರ ಜೊತೆ ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಚಂದನ್ ಶೆಟ್ಟಿ ತಮ್ಮ ಡಿವೋರ್ಸ್ ಹಂತದ ಬಗ್ಗೆ ಮಾತನಾಡಿದ್ದಾರೆ. ಅವರೇನಂದ್ರು?

ಇಷ್ಟಪಟ್ಟು ಮದುವೆಯಾದಾಗ ಯಾರಿಗೂ ಅದನ್ನು ಬ್ರೇಕ್ ಮಾಡಬೇಕು ಅಂತ ಇರೋದಿಲ್ಲ. ಆದರೆ ಕೆಲವೊಂದು ಪರಿಸ್ಥಿತಿಗಳು ನಾವಂದುಕೊಂಡಿದ್ದನ್ನು ಉಲ್ಟಾ ಮಾಡಿ ಬಿಡುತ್ತವೆ. ನಾವು ಫ್ರೆಂಡ್ಸ್ ಆಗಿಲ್ಲ. ಆ ಫೇಸ್ ಬರಬಾರದಾಗಿತ್ತು. ಅದ್ಯಾವುದು ನಮ್ಮ ಕೈನಲ್ಲಿಲ್ಲ ಎಂದಿದ್ದಾರೆ.

ಒಳ್ಳೆತನದಲ್ಲಿ ರಿಲೇಷನ್​ಶಿಪ್ ಎಂಡ್

ರಿಲೇಷನ್​​ಶಿಪ್​​ನಲ್ಲಿದ್ದು ಮದುವೆಯಾದಾಗ ಬೇರೆಯಾಗಬೇಕು ಅಂತ ಇರುವುದಿಲ್ಲ. ಕೆಲವೊಂದು ಪರಿಸ್ಥಿತಿ ಹಾಗಾಗುತ್ತೆ. ನಾವು ಒಳ್ಳೆತನದಲ್ಲಿ ರಿಲೇಷನ್​ಶಿಪ್ ಎಂಡ್ ಮಾಡಿದ್ದೇವೆ. ನಾನು ಅವರ ಬಗ್ಗೆ ಕೆಟ್ಟದಾಗಿ ಹೇಳೋದು, ಅವರು ನನ್ನ ಬಗ್ಗೆ ಕೆಟ್ಟದಾಗಿ ಹೇಳೋದು ಮಾಡಿಲ್ಲ. ನಾವು ಪರಸ್ಪರ ಇಬ್ಬರ ಪರ್ಸನಾಲಿಟಿ ಡ್ಯಾಮೇಜ್ ಮಾಡಿಲ್ಲ. ಇಷ್ಟು ದಿನ ಲೈಫ್​​ನಲ್ಲಿ ನಂಜೊತೆ ಇದ್ದಿದ್ದಕ್ಕೆ ಥ್ಯಾಂಕ್ಸ್, ಚೆನ್ನಾಗಿರು ಅಂತ ಹೇಳಿ ಬಿಟ್ಟೆವು ಎಂದಿದ್ದಾರೆ.

ನಿವೇದಿತಾ ಗೌಡ ಏನಂದಿದ್ರು?

ಹೌದು, ನಿವೇದಿತಾ ಪ್ರೀತಿಸಿಯೇ ಮದುವೆ ಏನೋ ಆದರು. ಆದರೆ, ಇಬ್ಬರ ನಡುವೆ Compatibility ಇಲ್ಲ ಅಂತ ಡಿವೋರ್ಸ್ ಕೂಡ ಆಯಿತು. ಆಗ ಅಸಲಿ ವಿಚಾರ ಗೊತ್ತೇ ಇಲ್ಲದೆ ಯಾರ್ ಯಾರೋ ಏನೇನೋ ಕಾಮೆಂಟ್‌ಗಳು ಮಾಡಿದರು.

ಈ ವಿಚಾರದಲ್ಲಿ ನನಗೆ ಗೊತ್ತೇ ಇಲ್ಲದವರೂ ಮಾತ್ ಆಡಿದ್ದಾರೆ. ಏನ್ ಬೇಕೋ ಅದನ್ನೆಲ್ಲ ಹೇಳಿದ್ದಾರೆ. ನಮ್ಮ ನಡುವೆ ಏನ್ ಆಗಿದೆ ಅನ್ನೋದು ಗೊತ್ತಿಲ್ಲ. ಆದರೂ ನಮ್ಮ ಬಗ್ಗೆ ಮಾತನಾಡಿದ್ದಾರೆ.

ಅದಕ್ಕೇನೆ ಇದಕೊಂದು ಕೊನೆ ಹಾಡೋ ಅಂತಲೇ ಪ್ರೆಸ್ ಮೀಟ್ ಮಾಡಿದೇವು. ಅದು ಬಿಟ್ಟರೆ, ನಮ್ಮ ಬಗ್ಗೆ ಯಾಕೆ ಏನೇನೋ ಮಾತ್ ಆಡ್ತಾ ಇದ್ದರೋ ಏನೋ? ಗೊತ್ತಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed