Last Updated:
US Tariff Indian Solar Panels: ಭಾರತ ಮತ್ತು ಇತರ ಏಷ್ಯಾದ ದೇಶಗಳಿಂದ ಆಮದು ಮಾಡಿಕೊಳ್ಳುವುದರಿಂದ ಅಮೆರಿಕದ ದೇಶೀಯ ಉದ್ಯಮಕ್ಕೆ ನೇರ ಹಾನಿಯಾಗಿದೆಯೇ ಎಂದು ಆಯೋಗ ಪರಿಶೀಲಿಸುತ್ತದೆ. ಈ ಆಮದುಗಳ ವಿರುದ್ಧ ಆಯೋಗವು ತೀರ್ಪು ನೀಡಿದರೆ, ನವೆಂಬರ್ನಲ್ಲಿ ಈ ಭಾರೀ ಸುಂಕಗಳನ್ನು ವಿಧಿಸುವ ಅಂತಿಮ, ಅಧಿಕೃತ ಆದೇಶವನ್ನು ಯುಎಸ್ ವಾಣಿಜ್ಯ ಇಲಾಖೆ ಹೊರಡಿಸುತ್ತದೆ.
ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ (BRICS Summit India 2026) ಬೆಳವಣಿಗೆ ಮತ್ತು ಜಾಗತಿಕವಾಗಿ ದಕ್ಷಿಣದ ದೇಶಗಳಲ್ಲಿ ಹೆಚ್ಚುತ್ತಿರುವ ಒಗ್ಗಟ್ಟು ಅಮೆರಿಕದ ಆತಂಕವನ್ನು ಹೆಚ್ಚಿಸಿದೆ. ವಿಶ್ವದ ಉದಯೋನ್ಮುಖ ಆರ್ಥಿಕತೆಗಳು ಭಾರತದ ವೇದಿಕೆಯಿಂದ (India) ಸ್ವಾವಲಂಬಿ ವ್ಯಾಪಾರಕ್ಕಾಗಿ ಹೊಸ ಹಾದಿಯನ್ನು ರೂಪಿಸುತ್ತಿರುವಾಗ, ಇದು ಅಮೆರಿಕವನ್ನು (America) ಕೆರಳಿಸಿದೆ.














