Last Updated:
ಬಿಜೆಪಿಯು ತನ್ನ ಡಿಜಿಟಲ್ ಸಂವಹನ ತಂತ್ರಗಳಿಗೆ ಹೊಸ ರೂಪ ನೀಡಲು ಮತ್ತು ಮುಂಬರುವ ಸವಾಲುಗಳನ್ನು ಎದುರಿಸಲು ನಾಯಕತ್ವ ಬದಲಾವಣೆಗೆ ಮುಂದಾಗಿದ್ದು, ಹಲವು ಬದಲಾವಣೆಗಳನ್ನ ಮಾಡಿದೆ.
ಭಾರತೀಯ ಜನತಾ ಪಕ್ಷದ (BJP) ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ (IT) ವಿಭಾಗದಲ್ಲಿ ಭಾರಿ ಸಾಂಸ್ಥಿಕ ಬದಲಾವಣೆಯಾಗಿದೆ. ದೀರ್ಘಕಾಲದಿಂದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದ ಅಮಿತ್ ಮಾಳವೀಯ ಅವರನ್ನು ಆ ಹುದ್ದೆಯಿಂದ ಮುಕ್ತಗೊಳಿಸಲಾಗಿದ್ದು, ಅವರ ಜಾಗಕ್ಕೆ ಛತ್ತೀಸ್‌ಗಢದ ದೀಪಕ್ ಮಾಸ್ಕೆ ಅವರನ್ನು ನೂತನ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಪಕ್ಷದ ಸಾಂಸ್ಥಿಕ ಪುನರ್ರಚನೆಯ ಭಾಗವಾಗಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.














